Advertisement

ಅರ್ಹರಿಗೆ ಸೌಲಭ್ಯ ದೊರಕಿಸಲು ಜಿಲ್ಲಾಧಿಕಾರಿ ಸೂಚನೆ

03:24 PM Mar 10, 2022 | Team Udayavani |

ದಾವಣಗೆರೆ: ಪರಿಶಿಷ್ಟ ಜಾತಿ ಉಪಯೋಜನೆ,ಗಿರಿಜನ ಉಪಯೋಜನೆಯಲ್ಲಿ ನಿರ್ದಿಷ್ಟವಾಗಿಆಯಾ ಸಮುದಾಯಕ್ಕೆ ಮೂಲಭೂತಸೌಕರ್ಯ ತಲುಪುವಂತೆ ನೋಡಿಕೊಳ್ಳಬೇಕುಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ,ಅಧಿಕಾರಿಗಳಿಗೆ ಸೂಚಿಸಿದರು.ಬುಧವಾರ ಜಿಲ್ಲಾಧಿಕಾರಿ ಕಚೇರಿಸಭಾಂಗಣದಲ್ಲಿ ನಡೆದ ಪರಿಶಿಷ್ಟ ಜಾತಿಉಪಯೋಜನೆ, ಗಿರಿಜನ ಉಪಯೋಜನೆಯಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

Advertisement

ಸೌಲಭ್ಯ ವಂಚಿತ ಸಮುದಾಯಗಳಿಗೆಸಾಮಾಜಿಕ ನ್ಯಾಯ ಒದಗಿಸುವುದರ ಕುರಿತುಕೇವಲ ಮಾತನಾಡದೆ ಕಾರ್ಯರೂಪಕ್ಕೆಪ್ರಾಮಾಣಿಕ ಪ್ರಯತ್ನ ಮಾಡಬೇಕು. ವಿವಿಧಇಲಾಖೆಗಳಲ್ಲಿ ಬಾಕಿ ಉಳಿದ ಅನುದಾನವನ್ನುಸೂಕ್ತ ಫಲಾನುಭವಿಗಳನ್ನು ಗುರುತಿಸಿ ಸೌಲಭ್ಯಕಲ್ಪಿಸಿ, ತುಳಿತಕ್ಕೊಳಗಾದ ಸಮುದಾಯಗಳಕೆಲಸ ಮಾಡುವುದರಿಂದ ಪುಣ್ಯ ಬರುತ್ತದೆಎಂದರು.

ವಿವಿಧ ಇಲಾಖೆಗಳ ಅಧಿಕಾರಿಗಳುಪರಿಶಿಷ್ಟ ಜಾತಿ ಉಪಯೋಜನೆ, ಗಿರಿಜನಉಪಯೋಜನೆಯಲ್ಲಿ ತಮ್ಮ ತಮ್ಮಇಲಾಖೆಗಳಲ್ಲಿ ನಡೆದಿರುವ ಪ್ರಗತಿಪರಿಶೀಲನಾವರದಿ ಮಂಡಿಸಿದರು. ಸಮಾಜಕಲ್ಯಾಣಇಲಾಖೆ ಉಪನಿರ್ದೇಶಕಿ ರೇಷ್ಮಾ ಕೌಸರ್‌,ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿಆನಂದ್‌, ಮಹಾನಗರ ಪಾಲಿಕೆ ಆಯುಕ್ತವಿಶ್ವನಾಥ್‌ ಮುದ್ದಜ್ಜಿ, ಪಶು ಸಂಗೋಪನಾಇಲಾಖೆಯ ಉಪನಿರ್ದೇಶಕ ಚಂದ್ರಶೇಖರ್‌ಸುಂಕದ್‌, ಮಹಿಳಾ ಮತ್ತು ಮಕ್ಕಳಕಲ್ಯಾಣ ಇಲಾಖೆಯ ಉಪನಿರ್ದೇಶಕವಿಜಯಕುಮಾರ್‌, ನಗರಾಭಿವೃದ್ಧಿ ಕೋಶದನಜ್ಮಾ ಸೇರಿದಂತೆ ವಿವಿಧ ಇಲಾಖೆಗಳಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next