ದಾವಣಗೆರೆ: ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಎದುರಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಸಕಲಸಿದ್ಧತೆ ಮಾಡಿಕೊಂಡಿದೆ. ಪರೀಕ್ಷಾರ್ಥಿಗಳಿಗಾಗಿ ವಿವಿಧಕಾರ್ಯಕ್ರಮಗಳ ಮೂಲಕ ಜಿಲ್ಲೆಯ ಫಲಿತಾಂಶವನ್ನುಗರಿಷ್ಠ ಮಟ್ಟಕ್ಕೆ ಹೆಚ್ಚಿಸಲು ಕಾರ್ಯೋನ್ಮುಖವಾಗಿದೆ.
ಕಳೆದೆರಡು ವರ್ಷ ಕಾಡಿದ ಕೊರೊನಾದಿಂದಸರಿಯಾಗಿ ತರಗತಿ, ಪರೀಕ್ಷೆಗಳು ನಡೆಯದೇ ಈ ಬಾರಿಎಸ್ಸೆಸ್ಸೆಲ್ಸಿಗೆ ಬಂದಿರುವ ವಿದ್ಯಾರ್ಥಿಗಳನ್ನು ಪರೀಕ್ಷೆಗೆಅಣಿಗೊಳಿಸುವುದು ಶಿಕ್ಷಕರಿಗೆ ದೊಡ್ಡ ಸವಾಲಾಗಿಪರಿಣಮಿಸಿದೆ. ಕಳೆದೆಲ್ಲ ವರ್ಷಗಳಿಗಿಂತ ಈ ಬಾರಿಶಿಕ್ಷಣ ಇಲಾಖೆ ಹೆಚ್ಚಿನ ಮುತುವರ್ಜಿ ವಹಿಸಿ ಎಸ್ಸೆಸ್ಸೆಲ್ಸಿಪರೀಕ್ಷೆ ಫಲಿತಾಂಶ ಹೆಚ್ಚಿಸುವತ್ತ ಲಕ್ಷéವಹಿಸಿದೆ.
ಮಾರ್ಚ್ 21ರಿಂದ ಏಪ್ರಿಲ್ 1ರವರೆಗೆ ಎಸ್ಸೆಸ್ಸೆಲ್ಸಿಪರೀಕ್ಷೆ ನಡೆಯಲಿದ್ದು, ಜಿಲ್ಲೆಯಲ್ಲಿ ಈ ಬಾರಿ21,480 ನೇರ ವಿದ್ಯಾರ್ಥಿಗಳು ಹಾಗೂ 698 ಬಾಹ್ಯವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಫಲಿತಾಂಶಹೆಚ್ಚಿಸಲು ಇಲಾಖೆ ಈಗಾಗಲೇ ತಾಲೂಕುವಾರುಮುಖ್ಯಶಿಕ್ಷಕರ ಸಭೆ, ತಾಲೂಕುವಾರು ವಿಷಯವಾರುಶಿಕ್ಷಕರ ಸಭೆ ಮಾಡಿದೆ.
ಜತೆಗೆ ಕಲಿಕೆಯಲ್ಲಿ ಹಿಂದುಳಿದಮಕ್ಕಳಿಗಾಗಿ ಪಾಸಿಂಗ್ ಪ್ಯಾಕೇಜ್‌ನ್ನೂ ಸಿದ್ಧಪಡಿಸಿವಿದ್ಯಾರ್ಥಿಗಳಿಗೆ ನೀಡಿದೆ. ವಿದ್ಯಾರ್ಥಿಗಳಲ್ಲಿನ ಪರೀಕ್ಷಾಭಯ ದೂರ ಮಾಡಲು ಪರೀಕ್ಷಾ ಕೇಂದ್ರವಾರುಶಿಬಿರಗಳನ್ನು ಮಾಡಿ ಮಕ್ಕಳಲ್ಲಿ ಧೈರ್ಯ ತುಂಬುವಕೆಲಸ ಮಾಡಿದೆ.
ಎಚ್.ಕೆ. ನಟರಾಜ