Advertisement

ಸಮ್ಮೇಳನಾಧ್ಯಕ್ಷೆ ಡಾ|ಸುಶೀಲಾದೇವಿಗೆ ಕಸಾಪ ಆಮಂತ್ರಣ

04:53 PM Mar 09, 2022 | Team Udayavani |

ದಾವಣಗೆರೆ: ತಾಲೂಕಿನ ಎಲೆಬೇತೂರು ಗ್ರಾಮದಲ್ಲಿಮಾ. 26 ಹಾಗೂ 27ರಂದು ಹಮ್ಮಿಕೊಳ್ಳಲಾದ 11ನೇಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿಆಯ್ಕೆಯಾಗಿರುವ ಜಿ.ಎಸ್‌. ಸುಶೀಲಾದೇವಿ ಆರ್‌.ರಾವ್‌ ಅವರ ಮನೆಗೆ ಕಸಾಪ ಜಿಲ್ಲಾ ಘಟಕದಪದಾಧಿಕಾರಿಗಳು ತೆರಳಿ ಸಮ್ಮೇಳನದ ಆಮಂತ್ರಣನೀಡಿದರು.

Advertisement

ಈ ಸಂದರ್ಭದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪಮಾತನಾಡಿ, ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಬಗ್ಗೆಕಾರ್ಯಕಾರಿ ಸಮಿತಿಯಲ್ಲಿ ಈ ಬಾರಿ ಮಹಿಳೆಯರಿಗೆಸರ್ವಾಧ್ಯಕ್ಷ ಸ್ಥಾನ ವಹಿಸಿಕೊಡಬೇಕೆಂದು ವಿಷಯಪ್ರಸ್ತಾಪಿಸಲಾಯಿತು. ತಕ್ಷಣ ಕಾರ್ಯಕಾರಿಸಮಿತಿಯಲ್ಲಿ ಸದಸ್ಯರೆಲ್ಲರೂ ಅತ್ಯಂತ ಸಂತೋಷದಿಂದಸರ್ವಾನುಮತದಿಂದ ತಮ್ಮ ಹೆಸರನ್ನು ಸೂಚಿಸಿದ್ದಾರೆ.

ಸುಮಾರು 10 ಕಾದಂಬರಿಗಳು, 50 ಬಿಡಿ ಲೇಖನಗಳು,ಕಥೆಗಳು, ನಾಟಕಗಳು ಹೊರಬಂದಿರುವುದುಸುಶೀಲಾದೇವಿಯವರ ಸಾಹಿತ್ಯ ಕೃಷಿಗೆ ಹಿಡಿದ ಕೈಗನ್ನಡಿ.ನಾಟಕಗಳು ಬಾನುಲಿಯಲ್ಲಿ ಬಿತ್ತರಗೊಂಡಿರುವುದುನಿಜಕ್ಕೂ ಸಂತೋಷದ ಸಂಗತಿ ಎಂದರು.ಅದೇ ರೀತಿ ಎಲೆಬೇತೂರು ಗ್ರಾಮದ ಮುಖ್ಯಸ್ಥರು,ಜಿಲ್ಲಾ ಕಸಾಪ ನಿಯೋಗ ಸಿರಿಗೆರೆಗೆ ತೆರಳಿ ತರಳಬಾಳುಜಗದ್ಗುರು ಡಾ| ಶಿವಮೂರ್ತಿ ಶಿವಾಚಾರ್ಯಮಹಾಸ್ವಾಮೀಜಿಯವರನ್ನು ಸಮ್ಮೇಳನದ ಉದ್ಘಾಟನೆಗೆಆಮಂತ್ರಿಸಿದ್ದೇವೆ. ಪೂಜ್ಯರು ಸಂತೋಷದಿಂದಆಗಮಿಸಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿಸಿದರು.

ಮಾಜಿ ಕಸಾಪ ಜಿಲ್ಲಾಧ್ಯಕ್ಷ ಎ.ಆರ್‌. ಉಜ್ಜಿನಪ್ಪ,ನಿಕಟಪೂರ್ವ ಅಧ್ಯಕ್ಷ ಡಾ| ಎಚ್‌.ಎಸ್‌. ಮಂಜುನಾಥ್‌ಕುರ್ಕಿ, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಬಿ.ದಿಳ್ಳ$Âಪ್ಪ, ರೇವಣಸಿದ್ದಪ್ಪ ಅಂಗಡಿ, ಕೋಶಾಧ್ಯಕ್ಷ ಕೆ.ರಾಘವೇಂದ್ರ ನಾಯರಿ, ದಾವಣಗೆರೆ ತಾಲೂಕುಕಸಾಪ ಅಧ್ಯಕ್ಷೆ ಎ.ಜಿ. ಸುಮತಿ ಜಯಪ್ಪ, ಜಿಲ್ಲಾಪದಾಧಿಕಾರಿಗಳು ಈ ಸಂದರ್ಭದಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next