Advertisement

ಹಾಲು ಒಕ್ಕೂಟಕ್ಕೆ ಮೂಲ ಸೌಕರ್ಯ ಸವಾಲು

04:51 PM Mar 09, 2022 | Team Udayavani |

ದಾವಣಗೆರೆ: ಕರ್ನಾಟಕದ ಮಧ್ಯ ಜಿಲ್ಲೆ ಎನ್ನಿಸಿದದಾವಣಗೆರೆಯಲ್ಲಿ ಪ್ರತ್ಯೇಕ ಹಾಲು ಒಕ್ಕೂಟಆರಂಭಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಅವರ ಬಜೆಟ್‌ನಲ್ಲೂ ಹಸಿರು ನಿಶಾನೆ ಸಿಕ್ಕಿದ್ದು, ಈವರ್ಷವಾದರೂ ಕಾರ್ಯಾನುಷ್ಠಾನವಾಗಬಹುದುಎಂಬ ನಿರೀಕ್ಷೆ ಗರಿಗೆದರಿದೆ.ಪ್ರತ್ಯೇಕ ಹಾಲು ಒಕ್ಕೂಟ ಆಗಬೇಕು ಎಂಬುದು ಜಿಲ್ಲೆಯ ಬಹು ವರ್ಷಗಳ ಬೇಡಿಕೆಯಾಗಿದ್ದುಕಾಂಗ್ರೆಸ್‌ ಆಡಳಿತಾವಧಿಯಲ್ಲಿ ಆಗಿನ ಮುಖ್ಯಮಂತ್ರಿಸಿದ್ದರಾಮಯ್ಯ ತಮ್ಮ ಬಜೆಟ್‌ನಲ್ಲಿ ಪ್ರತ್ಯೇಕಹಾಲು ಒಕ್ಕೂಟ ಘೋಷಿಸಿದ್ದರು.

Advertisement

ಆದರೆ ಅದುಕಾರ್ಯಾನುಷ್ಠಾನವೇ ಆಗಿರಲಿಲ್ಲ. ಈ ಬಾರಿಯಬಜೆಟ್‌ನಲ್ಲಿ ಮುಖ್ಯಮಂತ್ರಿ ಬೊಮ್ಮಾಯಿಯವರುಮತ್ತೆ ಪ್ರತ್ಯೇಕ ಹಾಲು ಒಕ್ಕೂಟ ರಚನೆಗೆ ಅಸ್ತುಎಂದಿದ್ದಾರೆ. ಹೀಗೆ ಎರಡೆರಡು ಬಾರಿ ಬಜೆಟ್‌ನಲ್ಲಿಪ್ರತ್ಯೇಕ ಹಾಲು ಒಕ್ಕೂಟ ರಚನೆಯ ಭರವಸೆಸರ್ಕಾರಗಳಿಂದ ದೊರೆತರೂ ಅನುಷ್ಠಾನವಾಗದೆಬೇಡಿಕೆ ಇನ್ನೂ ಭರವಸೆಯಾಗಿಯೇ ಉಳಿದಿರುವುದುವಿಪರ್ಯಾಸ.ಸರ್ಕಾರ ಬಜೆಟ್‌ನಲ್ಲಿ ಘೋಷಿಸುವ ಜತೆಗೆಚಿತ್ರದುರ್ಗ-ದಾವಣಗೆರೆ ಜಿಲ್ಲೆಗೆ ಸೇರಿ ಪ್ರತ್ಯೇಕಒಕ್ಕೂಟದ ಬೇಡಿಕೆಗೆ 2011ರಲ್ಲಿಯೇ ಶಿವಮೊಗ್ಗಹಾಲು ಒಕ್ಕೂಟದ ಆಡಳಿತ ಮಂಡಳಿ ಒಪ್ಪಿಗೆಯೂನೀಡಿದೆ.

ಆದರೆ ಪ್ರತ್ಯೇಕ ಹಾಲು ಒಕ್ಕೂಟಕಾರ್ಯಾನುಷ್ಠಾನಕ್ಕೆ ಮೂಲ ಸೌಕರ್ಯಹೊಂದಿಸಿಕೊಳ್ಳುವುದೇ ದೊಡ್ಡ ಸವಾಲಾಗಿಮಾರ್ಪಟ್ಟಿದೆ. ಒಕ್ಕೂಟದ ಕಾರ್ಯಾರಂಭಕ್ಕೆಹಿನ್ನಡೆಯಾಗಲು ಇದು ಪ್ರಮುಖ ಕಾರಣ.

ಎಚ್‌.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next