Advertisement

ದೇವರ ಕೃಪೆಗೆ ಪಾತ್ರರಾಗಲು ಪ್ರಾಣಿ ಹಿಂಸೆ ಬೇಡ

10:23 PM Mar 06, 2022 | Team Udayavani |

ದಾವಣಗೆರೆ: ದೇವರ ಕೃಪೆಗೆ ಪಾತ್ರರಾಗುವನಾವು ಯಾವುದೇ ರೀತಿಯ ಪ್ರಾಣಿ ಹಿಂಸೆಮಾಡಬಾರದು ಎಂದು ಜಿಲ್ಲಾಧಿಕಾರಿಮಹಾಂತೇಶ ಬೀಳಗಿ ಹೇಳಿದರು.ನಗರ ದೇವತೆ ಶ್ರೀ ದುರ್ಗಾಂಬಿಕಜಾತ್ರಾ ಪ್ರಯುಕ್ತ ನಡೆದ ದೇವಸ್ಥಾನದಧರ್ಮದರ್ಶಿಗಳು ಹಾಗೂ ಅಧಿಕಾರಿಗಳಸಭೆಯಲ್ಲಿ ಭಾಗವಹಿಸಿ ಅವರುಮಾತನಾಡಿದರು.

Advertisement

ಮಾ. 13ರಿಂದ 16ವರೆಗೆನಡೆಯುವ ಜಾತ್ರೆಯಲ್ಲಿ ಯಾವುದೇಪ್ರಾಣಿ ಬಲಿ ಆಗಬಾರದು. ಪ್ರಾಣಿ ಹಿಂಸೆಮಹಾಪಾಪ ಎಂದು ನಂಬಿಕೊಂಡುಬಂದಿರುವವರು ನಾವು. ದೇವರು ಭಕ್ತಿಯನ್ನುಬಯಸುತ್ತಾನೆಯೇ ಹೊರತು ಹಿಂಸೆಯನ್ನಲ್ಲ,ನಮ್ಮ ಕಾನೂನು ಕೂಡ ಅದನ್ನೇ ಹೇಳುತ್ತದೆ.ಹಾಗಾಗಿ ನ್ಯಾಯಾಲಯದ ಆದೇಶಕ್ಕೆಒಳಪಟ್ಟು ಯಾವುದೇ ರೀತಿಯ ಪ್ರಾಣಿಹಿಂಸೆಮಾಡದೆ ಕೇವಲ ಸಿರೆಂಜ್‌ ಮೂಲಕ ಕೋಣದರಕ್ತವನ್ನು ತೆಗೆದು ತಾಯಿಗೆ ಅರ್ಪಿಸಿ ಜಾತ್ರೆಆಚರಿಸೋಣ ಎಂದರು.

ನಿಷೇಧಕ್ಕೆ ಒಳಗಾಗಿರುವ ಬೆತ್ತಲೆ ದೇಹದಮೇಲಿನ ಬೇವಿನುಡಿಗೆ, ಮುತ್ತು ಕಟ್ಟುವುದುಮುಂತಾದ ಕಾನೂನು ಪ್ರಕಾರ ನಿಷೇಧಕ್ಕೊಳಗಾಗಿರುವ ಆಚರಣೆಗಳನ್ನು ಮಾಡದೆ ಕೈಯಲ್ಲಿಬೇವಿನ ಎಸಳನ್ನು ಹಿಡಿದು ಹರಕೆ ತೀರಿಸೋಣ.ಒಂದು ವೇಳೆ ಈ ವಿಚಾರದ ಕುರಿತುದೂರುಗಳು ಬಂದರೆ ತಪ್ಪಿತಸ್ಥರಿಗೆ ಹಾಗೂದೇವಸ್ಥಾನದ ಕಮಿಟಿಯವರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next