Advertisement

ಸ್ವದೇಶಕ್ಕೆ ಮರಳುವ ನಂಬಿಕೆಯೇ ಇರಲಿಲ್ಲ..

09:20 PM Mar 06, 2022 | Team Udayavani |

ದಾವಣಗೆರೆ: ರಷ್ಯಾ ಮತ್ತು ಉಕ್ರೇನ್‌ ಯುದ್ಧದಿಂದಾಗಿಸಂಕಷ್ಟದಲ್ಲಿ ಸಿಲುಕಿ ಸುರಕ್ಷಿತವಾಗಿ ಜಿಲ್ಲೆಗೆ ಮರಳಿದವೈದ್ಯಕೀಯ ವಿದ್ಯಾರ್ಥಿಗಳ ಮನೆಗೆ ಸಂಸದ ಡಾ|ಜಿ.ಎಂ. ಸಿದ್ದೇಶ್ವರ ಹಾಗೂ ಹಿರಿಯ ಅಧಿಕಾರಿಗಳುಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದರು. ಉಕ್ರೇನ್‌ನಿಂದ ವಾಪಾಸಾದ ವಿದ್ಯಾರ್ಥಿಗಳಾದಸಂಜಯ್‌ಕುಮಾರ್‌, ಸಯ್ಯದ್‌ ಹಬೀಬಾ ಹಾಗೂವಿನಯ್‌ ಕಲ್ಲಿಹಾಳ್‌ ಮಾತನಾಡಿ, ಉಕ್ರೇನ್‌ತೊರೆಯುವಂತೆ ವಿದ್ಯಾರ್ಥಿಗಳಿಗೆ ಭಾರತದರಾಯಭಾರಿ ಕಚೇರಿಯೂ ಸೂಚಿಸಿತ್ತು.

Advertisement

ಆದರೆ ನಾವುಓದುತ್ತಿದ್ದ ಕಾಲೇಜಿನವರು ವಾಪಸ್‌ ಹೋಗದಂತೆಹೇಳಿದ್ದರು. ಹಾಜರಾತಿಯೂ ಕಡ್ಡಾಯವಾಗಿತ್ತು.ಆನ್‌ಲೈನ್‌ ತರಗತಿಯ ಅವಕಾಶ ಕೂಡ ಇರಲಿಲ್ಲ.ಹಾಗಾಗಿ ವಾಪಸ್‌ ಬರಲು ಕಷ್ಟವಾಯಿತು ಎಂದರು.ರಷ್ಯಾ ದಾಳಿ ಆರಂಭಿಸಿದ ನಂತರ ವಿಮಾನಸಂಚಾರ ರದ್ದಾದವು. ಆಗ ನಾವು ಬಂಕರ್‌ಗಳಲ್ಲಿಆಶ್ರಯ ಪಡೆದಿದ್ದೆವು.

ದೇಶಕ್ಕೆ ಸುರಕ್ಷಿತವಾಗಿಮರಳುವ ನಂಬಿಕೆಯನ್ನೇ ಕಳೆದುಕೊಂಡಿದ್ದೆವು,ಕಷ್ಟಪಟ್ಟು ಉಕ್ರೇನ್‌ ಗಡಿ ದಾಟಿ ಬಂದೆವು, ಅಲ್ಲಿಂದಭಾರತ ಸರ್ಕಾರ ಮತ್ತು ಸೇನೆಯ ಅಧಿಕಾರಿಗಳುನಮ್ಮನ್ನು ಸುರಕ್ಷಿತವಾಗಿ ಜಿಲ್ಲೆಗೆ ಕರೆತಂದರು. ಹೀಗಾಗಿಸರ್ಕಾರಕ್ಕೆ ಧನ್ಯವಾದಗಳನ್ನು ತಿಳಿಸುತ್ತೇವೆ ಎಂದುಹೇಳಿದರು.

ಇದೇ ವೇಳೆ ಉಕ್ರೇನ್‌ನಲ್ಲಿ ಸಿಲುಕಿಕೊಂಡಿರುವಜಿಲ್ಲೆಯ ವಿದ್ಯಾರ್ಥಿ ಕುಶಾಲ್‌ ಶಂಕರಣ್ಣನವರ್‌ಮನೆಗೆ ಸಂಸದರು ಹಾಗೂ ಜಿಲ್ಲಾಧಿಕಾರಿಗಳು ಭೇಟಿನೀಡಿದ್ದರು. ಆದಷ್ಟು ಬೇಗ ಅವರನ್ನು ಉಕ್ರೇನ್‌ನಿಂದಕರೆ ತರುವ ಪ್ರಯತ್ನ ಮಾಡಲಾಗುವುದು ಎಂದುಪೋಷಕರಿಗೆ ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next