Advertisement

ಬಜೆಟ್‌ನಲ್ಲಿ ದೇವದಾಸಿಯರ ಬೇಡಿಕೆ ಈಡೇರಲಿ

02:16 PM Mar 04, 2022 | Team Udayavani |

ದಾವಣಗೆರೆ: ರಾಜ್ಯ ಸರ್ಕಾರ 2022ರಬಜೆಟ್‌ನಲ್ಲಿ ಮಾಸಾಶನ ಹೆಚ್ಚಿಸುವುದುಒಳಗೊಂಡಂತೆ ವಿವಿಧ ಹಕ್ಕೊತ್ತಾಯಈಡೇರಿಸಬೇಕು ಎಂದು ಒತ್ತಾಯಿಸಿ ಗುರುವಾರ ರಾಜ್ಯ ದೇವದಾಸಿಮಹಿಳೆಯರ ವಿಮೋಚನಾ ಸಂಘಹಾಗೂ ದೇವದಾಸಿ ಮಹಿಳೆಯರ ಮಕ್ಕಳಹೋರಾಟ ಸಮಿತಿಗಳ ಜಂಟಿ ನೇತೃತ್ವದಲ್ಲಿಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆನಡೆಸಲಾಯಿತು.

Advertisement

ದೇವದಾಸಿ ಮಹಿಳೆಯರವಿಮೋಚನಾ ಸಂಘದ ರಾಜ್ಯಾಧ್ಯಕ್ಷೆ ಟಿ.ವಿ.ರೇಣುಕಮ್ಮ ಮಾತನಾಡಿ, ಅನೇಕ ಬಾರಿಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಎಲ್ಲದೇವದಾಸಿ ಮಹಿಳೆಯರಿಗೆ ನೀಡಲಾಗುವಮಾಸಿಕ ಸಹಾಯಧನವನ್ನು 5 ಸಾವಿರರೂ.ಗೆ ಹೆಚ್ಚಿಸಬೇಕು. ದೇವದಾಸಿಮಹಿಳೆಯರ ಪರಿತ್ಯಕ್ತ ಹೆಣ್ಣು ಮಕ್ಕಳಿಗೂಅದನ್ನು ವಿಸ್ತರಿಸಬೇಕು ಎಂದು ಮನವಿಸಲ್ಲಿಸಿದ್ದರೂ ಹಕ್ಕೊತ್ತಾಯಗಳನ್ನು ಈವರೆಗೆಪರಿಗಣಿಸದೆ ವಿಳಂಬ ಮಾಡಲಾಗುತ್ತಿದೆಎಂದು ಆಕ್ರೋಶ ವ್ಯಕ್ತಪಡಿಸಿದರು.

ನಿರಂತರ ಬರಗಾಲ ಹಾಗೂ ಅತಿವೃಷ್ಠಿಮತ್ತು ಪ್ರವಾಹಗಳಿಂದಾಗಿ ಅನೇಕಕುಟುಂಬಗಳು ಸಂಕಷ್ಟಕ್ಕೀಡಾಗಿವೆ.ಪರಿಶಿಷ್ಟ ಜಾತಿ ಮತ್ತು ಪಂಗಡಗಳಜ ® ‌ Ó ‌ ಂ ಖ ೆ Â ಗ ‌ ® ‌ ು ಗ ‌ ು ಣ Ê ಾ ¨ ‌ಅನುದಾನ ಪ್ರತಿ ವರ್ಷ 30 ಸಾವಿರಕೋಟಿಗಳಷ್ಟಿದ್ದರೂ ದೇವದಾಸಿಮಹಿಳೆಯರ ಮಾಸಿಕ ಸಹಾಯಧನಹೆಚ್ಚಳ ಮಾಡುತ್ತಿಲ್ಲ. ಗಣತಿ ಪಟ್ಟಿಯಲ್ಲಿಬಿಟ್ಟು ಹೋದವರನ್ನು ಸೇರ್ಪಡೆ ಮಾಡಿನೆರವಾಗುತ್ತಿಲ್ಲ. ಕುಟುಂಬದ ಸದಸ್ಯರನ್ನುಗಣತಿ ಮಾಡಿ ಪುನರ್ವಸತಿ ಕಲ್ಪಿಸಲಿಲ್ಲ.

ಭೂಮಿ ಹಾಗೂ ಉದ್ಯೋಗಗಳನ್ನುನೀಡುತ್ತಿಲ್ಲ. 2022 ರ ರಾಜ್ಯ ಬಜೆಟ್‌ನಲ್ಲಿಹಕ್ಕೊತ್ತಾಯಗಳನ್ನು ಈಡೇರಿಸಬೇಕುಎಂದು ಒತ್ತಾಯಿಸಿದರು.ಎಲ್ಲ ದೇವದಾಸಿ ಮಹಿಳೆಯರಮಕ್ಕಳು ಅಂತರ್ಜಾತಿಯಲ್ಲಾಗಲೀ,ಸಜಾತಿಯಲ್ಲಾಗಲೀ ಹಾಗೂ ದೇವದಾಸಿಮಹಿಳೆಯರ ಕುಟುಂಬಗಳ ಸದಸ್ಯರನಡುವೆಯಾಗಲೀ ಮದುವೆಯಾದಲ್ಲಿ 5ಲಕ್ಷ ರೂ. ಪ್ರೋತ್ಸಾಹಧನ ನೀಡಬೇಕು.ಮದುವೆಯ ವಿಚಾರದಲ್ಲಿ ಯಾವುದೇಷರತ್ತುಗಳಿರಬಾರದು.

ಬರಗಾಲ ಹಾಗೂಅತಿವೃಷ್ಟಿ ಹಿನ್ನೆಲೆಯಲ್ಲಿ ಎಲ್ಲ ದೇವದಾಸಿಮಹಿಳೆಯರ ಮತ್ತು ಅವರ ಮಕ್ಕಳಹಾಗೂ ಸ್ತ್ರೀಶಕ್ತಿ ಹಾಗೂ ಸ್ವಸಹಾಯಸಂಘಗಳ ಸಾಲ ಮನ್ನಾ ಮಾಡಬೇಕು.ದಲಿತ ಮಹಿಳೆಯರ ಸ್ತ್ರೀಶಕ್ತಿ ಹಾಗೂಸ್ವಸಹಾಯ ಗುಂಪುಗಳ ಸುತ್ತು ನಿಧಿಯನ್ನು2 ಲಕ್ಷಕ್ಕೆ ಏರಿಸಬೇಕು. ವ್ಯವಸಾಯದಲ್ಲಿತೊಡಗಲಿಚ್ಛಿಸುವರಿಗೆ ಉಚಿತವಾಗಿತಲಾ 5 ಎಕರೆ ನೀರಾವರಿ ಜಮೀನುಒದಗಿಸಬೇಕು. ಮನೆ, ನಿವೇಶನ ರಹಿತರಿಗೆಸೂರಿನ ಸೌಲಭ್ಯ ಮಾಡಿಕೊಡಬೇಕುಎಂದರು. ಜಿಲ್ಲಾಧ್ಯಕ್ಷೆ ಹಿರಿಯಮ್ಮ,ಚೆನ್ನಮ್ಮ,ಭಾಗ್ಯ, ಭರಮಪ್ಪ,ಕೆ.ಎಚ್‌.ಆನಂದರಾಜ್‌ ಇತರರು ಪ್ರತಿಭಟನೆಯನೇತೃತ್ವ ವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next