ದಾವಣಗೆರೆ: ಉಕ್ರೇನ್‌ನ ಖಾರ್ಕಿವ್‌ನಲ್ಲಿಮೃತಪಟ್ಟಿರುವ ಕನ್ನಡಿಗ ನವೀನ್ ಸಾವಿಗೆ ಪ್ರಧಾನಿನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವೇನೇರ ಹೊಣೆ ಎಂದು ಯುವ ಕಾಂಗ್ರೆಸ್‌ನರಾಷ್ಟ್ರೀಯ ವಕ್ತಾರ ಎಚ್.ಜೆ. ಮೈನುದೀªನ್‌ಆರೋಪಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಅನುಸರಿಸುತ್ತಿರುವವಿದೇಶಾಂಗ ನೀತಿ ಮತ್ತು ಉಕ್ರೇನ್‌ನಲ್ಲಿನಭಾರತೀಯರನ್ನು ಸುರಕ್ಷಿತವಾಗಿ ಕರೆತರುವಲ್ಲಿವೈಫಲ್ಯದ ಪರಿಣಾಮ ನವೀನ್ ಸಾವುಕಾಣಬೇಕಾಯಿತು. ಆದ್ದರಿಂದ ನವೀನ್‌ಸಾವಿಗೆ ಮೋದಿಯವರೇ ನೇರ ಕಾರಣ ಎಂದುದೂರಿದರು.ಉಕ್ರೇನ್ ಮತ್ತು ರಷ್ಯಾ ನಡುವೆ ಯುದ್ಧದವಾತಾವರಣ ನಿರ್ಮಾಣವಾಗುತ್ತಿದ್ದಂತೆಯೇಅನೇಕ ದೇಶಗಳು ಉಕ್ರೇನ್‌ನಲ್ಲಿದ್ದ ತಮ್ಮದೇಶದ ಪ್ರಜೆಗಳನ್ನು ಕರೆತರುವ ಕೆಲಸ ಪ್ರಾರಂಭಿಸಿದರು.
ಆದರೆ ವಿಶ್ವ ಗುರು, ಜಗತ್ತುಮೆಚ್ಚಿದ ನಾಯಕ, 56 ಇಂಚಿನ ಮೋದಿಯವರನೇತೃತ್ವದ ಸರ್ಕಾರ ಸರಿಯಾದ ರೂಪುರೇಷೆಸಿದ್ಧಪಡಿಸಲೇ ಇಲ್ಲ. ಹಾಗಾಗಿ 20 ಸಾವಿರಕ್ಕೂಹೆಚ್ಚು ವಿದ್ಯಾರ್ಥಿಗಳು ಯುದ್ಧಪೀಡಿತಉಕ್ರೇನ್‌ನಲ್ಲಿ ಸಿಲುಕಿಕೊಳ್ಳುವಂತಾಯಿತು.ನವೀನ್ ಎಂಬ ವೈದ್ಯಕೀಯ ವಿದ್ಯಾರ್ಥಿಯನ್ನುಕಳೆದುಕೊಳ್ಳಬೇಕಾಯಿತು ಎಂದು ಬೇಸರವ್ಯಕ್ತಪಡಿಸಿದರು. ಉಕ್ರೇನ್‌ನಲ್ಲಿ ಗಡಿಭಾಗದಲ್ಲಿರುವ ಭಾರತೀಯರನ್ನು ಸುರಕ್ಷಿತವಾಗಿಕರೆತಂದಿರುವುದನ್ನು ಸ್ವಾಗತಿಸುತ್ತೇವೆ. ಕೆಲವರನ್ನುಕರೆತಂದು ಪ್ರಚಾರ ಪಡೆದುಕೊಳ್ಳುವುದನ್ನುಕೇಂದ್ರ, ರಾಜ್ಯ ಬಿಜೆಪಿ ಸರ್ಕಾರ ನಿಲ್ಲಿಸಬೇಕು.ಅಲ್ಲಿನ ಕನ್ನಡಿಗರು ಒಳಗೊಂಡಂತೆ ಎಲ್ಲಭಾರತೀಯರನ್ನು ಸುರಕ್ಷಿತವಾಗಿ ಕರೆತರಬೇಕುಎಂದು ಒತ್ತಾಯಿಸಿದರು.
ಉಕ್ರೇನ್‌ನಲ್ಲಿ ಸಿಲುಕಿಕೊಂಡಿರುವ ನವೀನ್‌ನನ್ನು ಸುರಕ್ಷಿತವಾಗಿ ಕರೆತರುವಂತೆ ನವೀನ್ ತಂದೆಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರ ಮನೆಗೆಹೋಗಿ ಮೂರು ಗಂಟೆ ಕಾದಿದ್ದಾರೆ. ಆದರೆಜೋಶಿಯವರು ಉಕ್ರೇನ್‌ನಲ್ಲಿನ ಭಾರತೀಯವೈದ್ಯಕೀಯ ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಲ್ಲಿತೇರ್ಗಡೆ ಆಗುವುದಿಲ್ಲ ಎಂಬ ಹೇಳಿಕೆನೀಡಿರುವುದು ಖಂಡನೀಯ.
ಕೃಷಿಕರಾಗಿರುವನವೀನ್ ತಂದೆ ತಮ್ಮ ಮಗನ ವಿದ್ಯಾಭ್ಯಾಸಕ್ಕಾಗಿ30 ಲಕ್ಷ ರೂ. ಖರ್ಚು ಮಾಡಿದ್ದಾರೆ. ಸರ್ಕಾರಗಳುನವೀನ್ ಕುಟುಂಬಕ್ಕೆ ತಕ್ಷಣವೇ 2 ಕೋಟಿರೂಪಾಯಿ ಪರಿಹಾರ ನೀಡಬೇಕು ಎಂದರು.ರಾಜ್ಯ ವಕ್ತಾರ ಚಿರಂಜೀವಿ, ಜಿಲ್ಲಾ ಯುವಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಹಮ್ಮದ್‌ವಾಜೀದ್ ಸುದ್ದಿಗೋಷ್ಠಿಯಲ್ಲಿದ್ದರು.