Advertisement

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬಿಎಸ್ಪಿ ಪ್ರತಿಭಟನೆ

09:19 PM Mar 01, 2022 | Team Udayavani |

ದಾವಣಗೆರೆ: ಕಳೆದ 3-4 ದಶಕಗಳಿಂದ ಬಗರ್‌ಹುಕುಂನಡಿ ಸಾಗುವಳಿ ಮಾಡುತ್ತಿರುವ ದಲಿತಕುಟುಂಬಗಳಿಗೆ ಸಾಗುವಳಿ ಚೀಟಿ, ಹಕ್ಕುಪತ್ರವಿತರಣೆ, ರಾಯಚೂರಿನ ಹಿಂದಿನ ಜಿಲ್ಲಾನ್ಯಾಯಾಧೀಶರ ವಜಾ ಒಳಗೊಂಡಂತೆವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿಸೋಮವಾರ ಬಹುಜನ ಸಮಾಜ ಪಕ್ಷದಮುಖಂಡರು ನಗರದ ಜಿಲ್ಲಾಧಿಕಾರಿ ಕಚೇರಿಬಳಿ ಧರಣಿ ನಡೆಸಿದರು.

Advertisement

ಬಿಎಸ್ಪಿ ಜಿಲ್ಲಾಧ್ಯಕ್ಷ ಡಿ. ಹನುಮಂತಪ್ಪಮಾತನಾಡಿ, ಗಣರಾಜ್ಯೋತ್ಸವದಸಂದರ್ಭದಲ್ಲಿ ರಾಯಚೂರು ಜಿಲ್ಲಾನ್ಯಾಯಾಧೀಶರು ಸಂವಿಧಾನ ಶಿಲ್ಪಿಅಂಬೇಡ್ಕರ್‌ರವರ ಭಾವಚಿತ್ರ ತೆಗೆಸುವಮೂಲಕ ಅಪಮಾನ ಮಾಡಿದ್ದಾರೆ.ಅವರನ್ನ ಕೆಲಸದಿಂದ ವಜಾ ಮಾಡಿಬಂಧನಕ್ಕೆ ಒಳಪಡಿಸಬೇಕು. ಹುಮ್ನಾಬಾದ್‌ತಹಶೀಲ್ದಾರ್‌ ವಿರುದ್ಧವೂ ಸೂಕ್ತ ಕ್ರಮತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.ರಾಜ್ಯದಲ್ಲಿ 25 ಲಕ್ಷಕ್ಕೂ ಹೆಚ್ಚಿನಕುಟುಂಬಗಳು ಕಳೆದ 40-50 ವರ್ಷದಿಂದಸರ್ಕಾರಿ ಜಮೀನಿನಲ್ಲಿ ಸಾಗುವಳಿಮಾಡುತ್ತಿವೆ. ಕೂಡಲೇ ಎಲ್ಲರಿಗೂ ಸಾಗುವಳಿಚೀಟಿ ನೀಡುವ ಮೂಲಕ ಜೀವನನಿರ್ವಹಣೆಗೆ ಅನುಕೂಲ ಮಾಡಿಕೊಡಬೇಕು.

ದಾವಣಗೆರೆಯ ಆವರಗೆರೆಯಲ್ಲಿ ಗುಡಿಸಲುಹಾಕಿಕೊಂಡು ಜೀವನ ನಡೆಸುತ್ತಿರುವ ದಲಿತಕುಟುಂಬಗಳನ್ನು ಯಾವುದೇ ಕಾರಣಕ್ಕೂಒಕ್ಕಲೆಬ್ಬಿಸಬಾರದು. ಎಲ್ಲ ಕುಟುಂಬಗಳಜಾಗವನ್ನು ಸಕ್ರಮಗೊಳಿಸಿ ಹಕ್ಕುಪತ್ರನೀಡಬೇಕು ಎಂದರು.ರಾಜ್ಯ ಕಾರ್ಯದರ್ಶಿ ಎಚ್‌. ಮಲ್ಲೇಶ್‌ಮಾತನಾಡಿ, ಎಸ್‌ಸಿಪಿ, ಟಿಎಸ್‌ಪಿಯೋಜನೆಯಡಿ ಶೇ. 24.10 ಅನುದಾನವನ್ನುದಲಿತ ಸಮುದಾಯಗಳ ಅಭಿವೃದ್ಧಿಕಾರ್ಯಗಳಿಗೆ ಮೀಸಲಾಗಿಡಲಾಗಿರುತ್ತದೆ.

ಆ ಅನುದಾನವನ್ನು ಬೇರೆ ಕಾಮಗಾರಿಗೆಬಳಸಿಕೊಳ್ಳಲು ಅವಕಾಶ ಮಾಡಿಕೊಡುವ7(ಡಿ) ಕಾಯ್ದೆ ರದ್ಧುಪಡಿಸ ಬೇಕು.ಶೇ.24.10 ಅನುದಾನವನ್ನು ಸಾಮಾನ್ಯಕೆಲಸಕ್ಕೆ ಬಳಕೆ ಮಾಡಿರುವವರ ವಿರುದ್ಧ ಕ್ರಮತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.ದಲಿತರ ಮೇಲಿನ ದೌರ್ಜನ್ಯ, ಹಿಂಸೆ,ಕೊಲೆ ಮುಂದುವರೆದಿವೆ. 2327 ಕೊಲೆನಡೆದಿದ್ದರೂ ಶೇ.3 ರಷ್ಟು ಮಾತ್ರ ಶಿಕ್ಷೆಆಗಿರುವುದು ಆತಂಕಕಾರಿ ವಿಚಾರ ಎಂದರು.ಯಶೋದಾ ಪ್ರಕಾಶ್‌, ವೆಂಕಟೇಶ್‌ಬಾಬು,ಎಚ್‌.ಸಿ. ,ಮಲ್ಲಪ್ಪ, ಡಿ. ಚನ್ನಬಸಪ್ಪ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next