ಹೊನ್ನಾಳಿ: ಬಡವರ ಪರ ಇರುವಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಜನಪರ ಬಜೆಟ್ ಮಂಡನೆ ಮಾಡಲಿದ್ದಾರೆಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು. ಪಟ್ಟಣದ ಅಗಳ ಮೈದಾನದಲ್ಲಿಸೋಮವಾರ ಹಮ್ಮಿಕೊಂಡಿದ್ದ ನೂತನ ಉಪವಿಭಾಗಾಧಿ ಕಾರಿಗಳ ಕಚೇರಿಯಉದ್ಘಾಟನಾ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾಡಿದ್ದರು. ಜನಪರಕೆಲಸ ಮಾಡಿದ್ದರು. ಈಗಿನ ಮುಖ್ಯಮಂತ್ರಿಬಸವರಾಜ ಬೊಮ್ಮಾಯಿ ಅವರ ಎಲ್ಲಾಯೋಜನೆಗಳನ್ನು ಮುಂದುವರೆಸಿಕೊಂಡುಹೋಗುತ್ತಿದ್ದು, 2023ರಲ್ಲೂ ಬಿಜೆಪಿಯೇಅ ಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸವ್ಯಕ್ತಪಡಿಸಿದರು.ರಾಜ್ಯದ ಸುಮಾರು 3491 ಗ್ರಾಮಗಳಪೈಕಿ 1035 ಗ್ರಾಮಗಳನ್ನು ಕಂದಾಯಗ್ರಾಮಗಳು ಎಂದು ಘೋಷಣೆಮಾಡಲಾಗಿದೆ.
ದಾವಣಗೆರೆ ಜಿಲ್ಲೆಯಲ್ಲಿ39 ಹಾಗೂ ಹೊನ್ನಾಳಿ ತಾಲೂಕಿನಲ್ಲಿ 5ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿಮಾಡಲಾಗಿದೆ. ಹೊನ್ನಾಳಿ, ಚನ್ನಗಿರಿಮತ್ತು ನ್ಯಾಮತಿ ತಾಲೂಕುಗಳ ಜನರು,ಸಾರ್ವಜನಿಕರು ಇನ್ನು ಮುಂದೆ ತಮ್ಮ ವಿವಿಧಕೆಲಸ ಕಾರ್ಯಗಳಿಗೆ ದೂರದ ದಾವಣಗೆರೆಜಿಲ್ಲಾ ಕೇಂದ್ರಕ್ಕೆ ಹೋಗುವ ಅವಶ್ಯಕತೆಇರುವುದಿಲ್ಲ. ಮೂರು ತಾಲೂಕುಗಳಸಾರ್ವಜನಿಕರು ಹೊನ್ನಾಳಿ ತಾಲೂಕುಕೇಂದ್ರಕ್ಕೆ ಆಗಮಿಸಿ ತಮ್ಮ ಕೆಲಸಗಳನ್ನುಪೂರೈಸಿಕೊಳ್ಳಬಹುದು ಎಂದು ತಿಳಿಸಿದರು.
ಡಿಸಿ, ಎಸಿ, ತಹಶೀಲ್ದಾರ್ ಹಾಗೂಇತರ ಅ ಧಿಕಾರಿಗಳು ತಮ್ಮ ಕಚೇರಿಗಳಿಗೆಸೀಮಿತವಾಗದೆ ಹಳ್ಳಿಗಳ ಕಡೆಗೆ ತೆರಳಿ ಬಡವರಮನೆ ಬಾಗಿಲಿಗೆ ಸರ್ಕಾರದ ಸವಲತ್ತುಗಳನ್ನುವಿತರಿಸಲು “ಜಿಲ್ಲಾ ಧಿಕಾರಿಗಳ ನಡೆ ಹಳ್ಳಿಕಡೆ’ ಎಂಬ ವಿನೂತನ ಕಾರ್ಯಕ್ರಮವನ್ನುಜಾರಿಗೆ ತಂದಿದ್ದೇನೆ. ಪ್ರತಿ ತಿಂಗಳು ಒಂದುದಿನ ಒಂದು ಗ್ರಾಮವನ್ನು ಆಯ್ದುಕೊಂಡು ಕಂದಾಯ ಇಲಾಖೆ ಸೇರಿದಂತೆ ಇತರ ಎಲ್ಲಾಇಲಾಖಾಧಿಕಾರಿಗಳು ಹಳ್ಳಿಗಳಲ್ಲಿ ಗ್ರಾಮವಾಸ್ತವ್ಯ ಮಾಡಿ ಜನರ ಸಂಕಷ್ಟಗಳನ್ನುಆಲಿಸಿ ಜನಸ್ನೇಹಿ ಸಂಬಂಧ ಕಲ್ಪಿಸುವುದುಇದರ ಉದ್ದೇಶವಾಗಿದ್ದು, ನಾನು ಒಂದುಹಳ್ಳಿಯಲ್ಲಿ ಗ್ರಾಮ ವಾಸ್ತವ್ಯ ಮಾಡುತ್ತೇನೆಎಂದರು.