ದಾವಣಗೆರೆ: ಭಾರತ ದೇವಭೂಮಿ ಹಾಗೂ ಪುಣ್ಯಭೂಮಿಯಾಗಿದೆ. ಮುಂದೆ ಇಲ್ಲಿಯೇ ಸತ್ಯಯುಗ,ಸ್ವರ್ಣಯುಗ ಆರಂಭವಾಗಲಿದೆ ಎಂಬುದುಅನುಭಾವಿಕ ಸತ್ಯ ಎಂದು ಪ್ರಜಾಪಿತ ಬ್ರಹ್ಮಕುಮಾರಿಈಶ್ವರೀಯ ವಿಶ್ವವಿದ್ಯಾಲಯ ಹುಬ್ಬಳ್ಳಿ ವಲಯದನಿರ್ದೇಶಕ ಡಾ| ಬಸವರಾಜ ರಾಜಋಷಿ ಹೇಳಿದರು.
ಸ್ವತಂತ್ರ ಭಾರತದ ಅಮೃತ ಮಹೋತ್ಸವದ ಅಂಗವಾಗಿ ಗುರುವಾರ ನಗರದ ಪ್ರಜಾಪಿತಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಶಿವಧ್ಯಾನ ಮಂದಿರದಲ್ಲಿ ಏರ್ಪಡಿಸಿದ್ದ “ಸಂತ ಮಹಾತ್ಮರಆಧ್ಯಾತ್ಮಿಕ ಕೊಡುಗೆ’ ಕುರಿತ ವಿಚಾರಸಂಕಿರಣ ಉದ್ಘಾಟಿಸಿಅವರು ಮಾತನಾಡಿದರು.
ಭಾರತ ತಪಸ್ವಿಗಳ ದೇಶ.ಸಾಧು-ಸಂತರ ದೇಶ. ಚತುರ್ವೇದ, ಭಗವದೀYತೆಕೊಟ್ಟ ದೇಶ. ಇಂಥ ದೇಶದಲ್ಲಿ ಹುಟ್ಟುವುದೇ ಒಂದುಸೌಭಾಗ್ಯ ಎಂದರು.ಇಂಗ್ಲೆಂಡಿನ ರಾಯಭಾರಿ ಲಾರ್ಡ್ ಮೆಕಾಲೆ,ಇಡೀ ಭಾರತ ದೇಶ ಸುತ್ತಿದ ಮೇಲೆ ಇಂಗ್ಲೆಂಡ್‌ಗೆಹೋಗಿ ಭಾಷಣ ಮಾಡುತ್ತಾ, ಭಾರತದಲ್ಲಿ ಎಲ್ಲಿಯೂಭಿಕ್ಷುಕರಿಲ್ಲ, ಕಳ್ಳರಿಲ್ಲ. ಅಲ್ಲಿನ ಸಂಸ್ಕೃತಿ, ಸಂಸ್ಕಾರ,ನಾಗರಿಕತೆ ಬಹಳ ಶ್ರೇಷ್ಠವಾಗಿದೆ. ಅವರನ್ನು ಅಷ್ಟುಸುಲಭವಾಗಿ ನಮ್ಮ ನಾಗರಿಕತೆಗೆ ಬದಲಾಯಿಸಲು ಸಾಧ್ಯವಿಲ್ಲ.
ಹಾಗಾಗಿ ನಾನು ಅವರ ಶಿಕ್ಷಣದಲ್ಲಿಯೇಇಂಗ್ಲಿಷ್ ಸೇರಿಸಿ ಹಂತ ಹಂತವಾಗಿ ಅವರನ್ನು ನಮ್ಮನಾಗರಿಕತೆ, ಸಂಸ್ಕೃತಿಯತ್ತ ಸೆಳೆಯುವ ಪ್ರಯತ್ನಮಾಡುತ್ತೇನೆ ಎಂದಿದ್ದರು. ಇದರ ಪರಿಣಾಮಈಗ ನಮ್ಮ ದೇಶದಲ್ಲಿ ಇಂಗ್ಲಿಷ್ ಭಾಷೆಯೊಂದಿಗೆವಿದೇಶಿ ಸಂಸ್ಕೃತಿ ಅನುಕರಣೆ ಶುರುವಾಗಿದೆ ಎಂದುವಿಷಾದಿಸಿದರು.
ಅಧ್ಯಕ್ಷತೆ ವಹಿಸಿದ್ದ ಅಬು ಪರ್ವತದ ಪ್ರಜಾಪಿತಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದರಾಷ್ಟ್ರೀಯ ಧಾರ್ಮಿಕ ವಿಭಾಗ ಸಂಪರ್ಕಾಧಿಕಾರಿರಾಮನಾಥಜೀ ಮಾತನಾಡಿ, ಮನುಷ್ಯದಲ್ಲಿಅದ್ಭುತ ಚೈತನ್ಯ ಶಕ್ತಿ ಇದೆ. ಅದನ್ನು ನಿತ್ಯಜಾಗ್ರತಗೊಳಿಸಿಕೊಳ್ಳಬೇಕು ಎಂದರು.