Advertisement

ಬಿ.ಎಸ್‌. ಚನ್ನಬಸಪ್ಪ ಮಳಿಗೆಗೆ ನಾಗರಾಜನ್‌ ಭೇಟಿ

02:49 PM Feb 22, 2022 | Team Udayavani |

ದಾವಣಗೆರೆ: ಡೆಂಟಲ್‌ ಕಾಲೇಜುರಸ್ತೆಯಲ್ಲಿರುವ ಬಿ.ಎಸ್‌. ಚನ್ನಬಸಪ್ಪಆ್ಯಂಡ್‌ ಸನ್ಸ್‌ನ ಎಕ್ಸ್‌ಕ್ಲೂ$Âಸಿವ್‌ ಶಾಖೆಗೆಸೋಮವಾರ ರಾಮ್‌ರಾಜ್‌ ಕಾಟನ್‌ಸ್ಥಾಪಕರು ಮತ್ತು ಅಧ್ಯಕ್ಷ ಕೆ.ಆರ್‌.ನಾಗರಾಜನ್‌ ಭೇಟಿ ನೀಡಿದರು.ಕೆ.ಆರ್‌. ನಾಗರಾಜನ್‌ ತಮ್ಮ ಹಳೆಯನೆನಪುಗಳ ಮೆಲುಕು ಹಾಕಿದರು.

Advertisement

25ವರ್ಷಗಳ ಹಿಂದೆ ದಾವಣಗೆರೆಗೆ ಬಂದಿದ್ದಸಂದರ್ಭದಲ್ಲಿ ಬಿಎಸ್‌ಸಿ ಸಂಸ್ಥೆಯಮಾಲೀಕರಾದ ಬಿ.ಸಿ. ಶಿವಕುಮಾರ್‌ಅವರನ್ನು ಭೇಟಿ ಮಾಡಿ ನಮ್ಮ ರಾಮ್‌ರಾಜ್‌ ಉತ್ಪನ್ನಗಳನ್ನು ಪರಿಚಯಿಸಿ ಎಂದುವಿನಂತಿಸಿದ್ದೆ. ಅಂದು ಆ ರೀತಿ ಪ್ರಾರಂಭವಾದವ್ಯಾವಹಾರಿಕ ಸಂಬಂಧವು ಇಂದಿನವರೆಗೂಯಶಸ್ವಿಯಾಗಿ ನಡೆಯುತ್ತಿದೆ ಎಂದುಸಂತಸ ವ್ಯಕ್ತಪಡಿಸಿದರು.

ಕರ್ನಾಟಕದಲ್ಲಿ ಬಿಎಸ್‌ಸಿ ಸಂಸ್ಥೆಯುರಾಮ್‌ರಾಜ್‌ ಉತ್ಪನ್ನಗಳ ನಂಬರ್‌ ಒನ್‌ರಿಟೇಲರ್‌ ಆಗಿದ್ದಾರೆ. ಯಾವುದೇ ಒಂದುಸಂಸ್ಥೆಯು ಉನ್ನತ ಮಟ್ಟಕ್ಕೆ ಬೆಳೆಯಬೇಕುಎಂದರೆ ಸಂಸ್ಥೆಯ ಸಿಬ್ಬಂದಿ ವರ್ಗದವರೇಮುಖ್ಯ ಪಾತ್ರಧಾರಿಗಳು ಮತ್ತು ಸಂಸ್ಥೆಯಆಸ್ತಿಯಾಗಿರುತ್ತಾರೆ ಎಂದು ತಿಳಿಸಿದರು.

ಬಿ.ಎಸ್‌. ಚನ್ನಬಸಪ್ಪ ಆ್ಯಂಡ್‌ಸನ್ಸ್‌ ಸಂಸ್ಥೆಯ ಮಾಲೀಕರಾದ ಬಿ.ಸಿ.ಶಿವಕುಮಾರ್‌, ಬಿಯುಸಿ ಶೇಖರ್‌, ದೀಪಾಶಿವಕುಮಾರ್‌, ಬಿ.ಎಸ್‌. ಮೃನಾಲ್‌,ರಾಮ್‌ರಾಜ್‌ ಸಿಬ್ಬಂದಿ ವರ್ಗದವರುಇದ್ದರು.ಬಿ.ಎಸ್‌. ಚನ್ನಬಸಪ್ಪ ಆ್ಯಂಡ್‌ ಸನ್ಸ್‌ಸಂಸ್ಥೆಯಿಂದ ರಾಮ್‌ರಾಜ್‌ ಕಾಟನ್‌ಸ್ಥಾಪಕರು ಮತ್ತು ಅಧ್ಯಕ್ಷ ಕೆ.ಆರ್‌.ನಾಗರಾಜನ್‌ ಅವರನ್ನು ಆತ್ಮೀಯವಾಗಿಸನ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next