ಹೊನ್ನಾಳಿ: ಜನಪ್ರತಿನಿಧಿ ಗಳಾದವರುಸಾಮಾನ್ಯ ಜನರ ಸಂಕಷ್ಟಕ್ಕೆ ಸದಾ ಚಿಂತನೆಮಾಡುವುದರೊಂದಿಗೆ ತಾಲೂಕಿನ ಸಮಗ್ರಅಭಿವೃದ್ಧಿಯತ್ತ ಗಮನ ಕೊಡಬೇಕುಎಂದು ಸಿಎಂ ರಾಜಕೀಯ ಕಾರ್ಯದರ್ಶಿಎಂ.ಪಿ. ರೇಣುಕಾಚಾರ್ಯ ಹೇಳಿದರು.ಜಿಲ್ಲಾ ಧಿಕಾರಿಗಳ ನಡೆ ಹಳ್ಳಿಯ ಕಡೆಯೋಜನೆಯಡಿ ತಾಲೂಕಿನ ಮಾಸಡಿಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನುಉದ್ಘಾಟಿಸಿ ಅವರು ಮಾತನಾಡಿದರು.
ನಾನು ಎಂದೂ ತಾಲೂಕಿನಶಾಸಕನೆಂದು ಹೇಳಿಕೊಳ್ಳುತ್ತಿಲ್ಲ. ಬದಲಾಗಿಜನರ ಸೇವಕ ಎಂದು ಹೇಳಿಕೊಂಡುವಾರದ ಮೂರು ದಿನಗಳ ಕಾಲ ಹಳ್ಳಿಗಳಕಡೆ ನಡೆದು ಜನರ ಅವಶ್ಯಕತೆಗಳನ್ನುನೀಗಿಸಲು ಸತತ ಪ್ರಯತ್ನ ಮಾಡುತ್ತೇನೆ.ಬೆಳಗ್ಗೆ 10ಕ್ಕೆ ಹಳ್ಳಿಗಳನ್ನು ಸುತ್ತುವಕೆಲಸ ಪ್ರಾರಂಭವಾದರೆ ರಾತ್ರಿ 10ಕ್ಕೆಮುಗಿಯುತ್ತದೆ. ಇದು ನನ್ನ ಕಾಯಕಎಂದು ಭಾವಿಸಿ ಕೆಲಸ ಮಾಡುತ್ತೇನೆಎಂದು ಹೇಳಿದರು.
2004 ಮತ್ತು 2008ರಲ್ಲಿ ನಾನು ಗೆಲುವುಸಾಧಿ ಸಿ ತಾಲೂಕಿನ ಹಳ್ಳಿಗಳಿಗೆ, ಸಿಸಿ ರಸ್ತೆ,ಶಾಲಾ ಕಾಲೇಜುಗಳ ಸ್ಥಾಪನೆ, ಹೊನ್ನಾಳಿಪಟ್ಟಣಕ್ಕೆ 100 ಹಾಸಿಗೆ ಆಸ್ಪತ್ರೆ, ತುಂಗಭದ್ರಾನದಿಗೆ ರ್ಯಾಯ ಸೇತುವೆ, ನ್ಯಾಮತಿ,ಸುರಹೊನ್ನೆ ಗ್ರಾಮಗಳಿಗೆ ಕುಡಿಯುವನೀರು ಸರಬರಾಜು ಸೇರಿದಂತೆ ಅನೇಕಕಾಮಗಾರಿ ಮಾಡಿಸಲಾಗಿದೆ. ಅಲ್ಲದೆಅನೇಕ ಕಚೇರಿಗಳನ್ನು ಹೊನ್ನಾಳಿಗೆತಂದಿದ್ದೆ. ಆದರೆ 2013ರಲ್ಲಿ ನಾನು ಕೆಲಕಾರಣಗಳಿಂದ ಸೋಲನ್ನು ಅನುಭವಿಸಿದೆ.ಆ ಸಂದರ್ಭದಲ್ಲಿ ನಾನು ತಂದಂತಹಕಚೇರಿಗಳು ಬೇರೆ ತಾಲೂಕು ಕೇಂದ್ರಗಳಿಗೆಸ್ಥಳಾಂತರಗೊಂಡವು.
ಇದು ದುರ್ದೈವದಸಂಗತಿ ಎಂದು ಪರೋಕ್ಷವಾಗಿ ಮಾಜಿಶಾಸಕರನ್ನು ಟೀಕಿಸಿದರು.2018ರಲ್ಲಿ ನಾನು ಪುನಃ 3ನೇ ಬಾರಿಗೆತಾಲೂಕಿನ ಜನಾಶೀರ್ವಾದಿಂದ ಗೆಲುವುಸಾ ಧಿಸಿದೆ. ಅವಳಿ ತಾಲೂಕಿನ ಎಲ್ಲಕೆರೆಗಳನ್ನು ತುಂಬಿಸುವ ಕಾಮಗಾರಿತ್ವರಿತ ಗತಿಯಲ್ಲಿ ನಡೆಯುತ್ತಿದೆ.
ತಾಲೂಕುಕೇಂದ್ರಕ್ಕೆ ಉಪ ವಿಭಾಗಾಧಿಕಾರಿಗಳಕಚೇರಿ ಮಂಜೂರು ಮಾಡಿಸಿ ಈಗಾಗಲೇತಾಲೂಕು ಕೇಂದ್ರದಲ್ಲಿ ಉಪ ವಿಭಾಗಾಧಿಕಾರಿಗಳು ಕರ್ತವ್ಯಕ್ಕೆ ಹಾಜರಾಗಿಕಾರ್ಯ ನಿರ್ವಹಿಸುತ್ತಿದ್ದಾರೆ. ಅಬಕಾರಿಉಪ ವಿಭಾಗಾ ಧಿಕಾರಿ ಕಚೇರಿ ಸೇರಿದಂತೆಇತರ ಉಪವಿಭಾಗಾ ಧಿಕಾರಿಗಳ ಕಚೇರಿಅಸ್ವಿತ್ವಕ್ಕೆ ಬಂದಿವೆ.
ಕೋವಿಡ್ 1,2 ಮತ್ತು3ನೇ ಅಲೆಗಳಲ್ಲಿ ಸರ್ಕಾರಿ ನೌಕರರೊಂದಿಗೆನಾನು ಸಹ ದೇಶ ಮೆಚ್ಚುವಂತಹ ಕೆಲಸಕಾರ್ಯಗಳನ್ನು ಮಾಡಿದ್ದೇನೆ ಎಂದರು.ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪಅವರ ಆಡಳಿತದ ಅವ ಧಿಯಲ್ಲಿಜನಸ್ಪಂದನ ಎಂಬ ವಿನೂತನ ಹಾಗೂ ಜನಮೆಚ್ಚುಗೆ ಕಾರ್ಯಕ್ರಮ ಹಮ್ಮಿಕೊಂಡುಮಾಜಿ ಮುಖ್ಯಮಂತ್ರಿಗಳನ್ನು ಆಹ್ವಾನಿಸಿಸರ್ಕಾರದ ಸೌಲತ್ತು ವಿತರಿಸಲಾಗಿತ್ತು.
ಈಗ ನಮ್ಮ ಸರ್ಕಾರದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಎನ್ನುವವಿನೂತನ ಕಾರ್ಯಕ್ರಮ ಹಮ್ಮಿಕೊಂಡುಫಲಾನುಭವಿಗಳಿಗೆ ಸರ್ಕಾರದ ಸವಲತ್ತುವಿತರಿಸಲಾಗುತ್ತಿದೆ ಎಂದು ಹೇಳಿದರು.