Advertisement

80ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಂದ ತರಗತಿ ಬಹಿಷ್ಕಾರ

02:18 PM Feb 18, 2022 | Team Udayavani |

ದಾವಣಗೆರೆ: ಹಿಜಾಬ್‌-ಕೇಸರಿಶಾಲು ವಿವಾದದಿಂದ ಬಂದ್‌ ಆಗಿದ್ದಕಾಲೇಜು ಪುನರಾಂಭದ ಎರಡನೇದಿನವಾದ ಗುರುವಾರ ಹಿಜಾಬ್‌ ವಿಚಾರಭುಗಿಲೆದ್ದಿದ್ದು, ಜಿಲ್ಲೆಯಾದ್ಯಂತ 80ಕ್ಕೂ ಹೆಚ್ಚುವಿದ್ಯಾರ್ಥಿನಿಯರು ತರಗತಿ ಬಹಿಷ್ಕರಿಸಿಮನೆಗಳಿಗೆ ತೆರಳಿದರು.

Advertisement

ದಾವಣಗೆರೆಯ ಎ.ವಿ. ಕಮಲಮ್ಮ ಮಹಿಳಾಕಾಲೇಜಿನಲ್ಲಿ 50ಕ್ಕೂ ವಿದ್ಯಾರ್ಥಿನಿಯರುಹಿಜಾಬ್‌ ಧರಿಸಿ ಕಾಲೇಜಿಗೆ ಆಗಮಿಸಿದ್ದರು.ಆದರೆ, ಅನುಮತಿ ನೀಡಲಿಲ್ಲ. ಹಿಜಾಬ್‌ತೆಗೆದಿರಿಸಿ, ತರಗತಿಗಳಿಗೆ ಹಾಜರಾಗಲುನಿರಾಕರಿಸಿ ದರು. ಅವರ ಮನವೊಲಿಸುವಪ್ರಯತ್ನ ನಡೆಸಲಾಯಿತಾದರೂ ವಿದ್ಯಾರ್ಥಿನಿಯರು ಹಿಜಾಬ್‌ ತೆಗೆದು ತರಗತಿಗೆಹಾಜರಾಗಲು ನಿರಾಕರಿಸಿ ಹೊರ ನಡೆದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಕೆಲವಿದ್ಯಾರ್ಥಿನಿಯರು, ನಮಗೆ ಹಿಜಾಬ್‌ ಮತ್ತುಶಿಕ್ಷಣ ಎರಡೂ ಸಹ ಮುಖ್ಯ ಹಾಗಾಗಿಯೇಕಾಲೇಜುಗೆ ಬಂದಿದ್ದೇವೆ. ಹಿಜಾಬ್‌,ಧರ್ಮವೇ ಮುಖ್ಯವಾಗಿದ್ದರೆ ಮನೆಯಲ್ಲೇಇರುತ್ತಿದ್ದೆವು. ನಮಗೆ ಧರ್ಮ, ಸಂಪ್ರದಾಯಆಚರಣೆ ಮುಖ್ಯ. ಹಾಗಾಗಿ ಹಿಜಾಬ್‌ಧರಿಸಿಕೊಂಡು ತರಗತಿಗಳಿಗೆ ಹಾಜರಾಗಲುಅನುಮತಿ ನೀಡಬೇಕು. ನ್ಯಾಯಾಲಯದಆದೇಶ ಬರುವವರೆಗೂ ನಾವು ಹೋರಾಟಮುಂದುವರೆಸುತ್ತೇವೆ ಎಂದು ತಿಳಿಸಿದರು.

ಬೇರೆಯವರು ನಮ್ಮ ಹಕ್ಕು ಕಿತ್ತುಕೊಳ್ಳಲುಹೋರಾಟ ನಡೆಸುತ್ತಿದ್ದಾರೆ. ನಾವು ನಮ್ಮಹಕ್ಕುಗಾಗಿ ಹೋರಾಟ ನಡೆಸುತ್ತಿದ್ದೇವೆ.ಶಾಲಾ-ಕಾಲೇಜುಗಳಲ್ಲಿ ರಾಜಕೀಯಮಾಡುತ್ತಾ ವಿದ್ಯಾರ್ಥಿಗಳಲ್ಲಿ ಧರ್ಮ,ಜಾತಿಯ ವಿಷ ಬೀಜ ಬಿತ್ತುತ್ತಿ ದ್ದಾರೆ. ಆದಷ್ಟುಬೇಗ ಈ ಸಮಸ್ಯೆ ಬಗೆಹರಿಸಬೇಕು ಎಂದುಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next