ದಾವಣಗೆರೆ: ಬೆಂಬಲ ಬೆಲೆ ಯೋಜನೆಯಡಿಕಡಲೆಕಾಳು ಖರೀದಿಸಲು ಸರ್ಕಾರ ಆದೇಶಹೊರಡಿಸಿದ್ದು ಅದರನ್ವಯ ಜಿಲ್ಲೆಯಲ್ಲಿಕಡಲೆಕಾಳು ಖರೀದಿಗೆ ನೋಂದಣಿ ಕಾರ್ಯವನ್ನುಫೆ. 18 ರಿಂದ ಪ್ರಾರಂಭಿಸಬೇಕು. ರೈತರಿಗೆಯಾವುದೇ ಗೊಂದಲವಾಗದಂತೆ ಅಗತ್ಯವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಮಹಾಂತೇಶ ಬೀಳಗಿ, ಅಧಿಕಾರಿಗಳಿಗೆಸೂಚಿಸಿದರು.
ಬೆಂಬಲ ಬೆಲೆಯಡಿ ಕಡಲೆಕಾಳು ಖರೀದಿಸಂಬಂಧ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರನಡೆದ ಜಿಲ್ಲಾ ಟಾಸ್ಕ್ಫೋರ್ಸ್ ಸಮಿತಿ ಸಭೆಯಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಉತ್ತಮ ಗುಣಮಟ್ಟದ ಕಡಲೆ ಕಾಳಿಗೆ ಸರ್ಕಾರ ಪ್ರತಿಕ್ವಿಂಟಲ್‌ಗೆ 5230 ರೂ. ನಿಗದಿಪಡಿಸಿದೆ.
ಪ್ರಸ್ತುತಮಾರುಕಟ್ಟೆಯಲ್ಲಿ ಕಡಲೆಕಾಳಿನ ಬೆಲೆ ಕುಸಿದಿದ್ದುರೈತರು ನಷ್ಟಕ್ಕೆ ಒಳಗಾಗುತ್ತಿದ್ದಾರೆ. ಹೀಗಾಗಿ ರೈತರಹಿತ ಕಾಯಲು ಸರ್ಕಾರದ ವತಿಯಿಂದ ಜಿಲ್ಲೆಯಲ್ಲಿಕೂಡಲೆ ಬೆಂಬಲ ಬೆಲೆಯಲ್ಲಿ ಕಡಲೆಕಾಳುಖರೀದಿಗೆ ಫೆ. 18ರಿಂದಲೇ ಜಗಳೂರು ಎಪಿಎಂಸಿಆವರಣದಲ್ಲಿ ರೈತರ ನೋಂದಣಿ ಕಾರ್ಯಪ್ರಾರಂಭಿಸಬೇಕು.
ನೋಂದಣಿಗೂ ಮುನ್ನ ರೈತರುಪ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿ ಮಾಡಿರಬೇಕುಎಂದರು.ಕರ್ನಾಟಕ ಸಹಕಾರ ಮಾರಾಟಮಹಾಮಂಡಳಿಯ ಶಾಖಾ ವ್ಯವಸ್ಥಾಪಕ ಶ್ರೀಕಾಂತ್‌ಎಸ್. ಮಾಹಿತಿ ನೀಡಿ, ಎಫ್‌ಎಕ್ಯೂ ಗುಣಮಟ್ಟದಕಡಲೆಕಾಳಿಗೆ ಪ್ರತಿ ಕ್ವಿಂಟಲ್‌ಗೆ 5230 ರೂ. ಬೆಂಬಲಬೆಲೆ ನಿಗದಿಪಡಿಸಲಾಗಿದೆ.
ಕರ್ನಾಟಕ ಸಹಕಾರಮಾರಾಟ ಮಹಾ ಮಂಡಳಿಯೇ ದಾವಣಗೆರೆಜಿಲ್ಲೆಗೆ ಖರೀದಿ ಏಜೆನ್ಸಿಯಾಗಿದೆ. ಫೆ. 18 ರಿಂದ45 ದಿನಗಳ ಕಾಲ ರೈತರಿಂದ ನೋಂದಣಿಕಾರ್ಯ ಮಾಡಲಾಗುವುದು. ಖರೀದಿ ಕೂಡ 45 ದಿನಗಳ ಕಾಲ ನಡೆಯಲಿದೆ. ಪ್ರತಿ ಎಕರೆಗೆ4 ಕ್ವಿಂಟಲ್, ಪ್ರತಿ ರೈತರಿಂದ ಗರಿಷ್ಠ 15 ಕ್ವಿಂಟಲ್‌ಕಡಲೆಕಾಳು ಖರೀದಿಗೆ ಮಿತಿ ನಿಗದಿಪಡಿಸಲಾಗಿದೆ.