ದಾವಣಗೆರೆ: ಹಿಜಾಬ್, ಕೇಸರಿಶಾಲು ವಿವಾದ,ಅಹಿತಕರ ಘಟನೆಯ ನಂತರ ಬುಧವಾರದಿಂದಜಿಲ್ಲಾ ದ್ಯಾಂತ ಪಿಯು ಮತ್ತು ಪದವಿಕಾಲೇಜುಗಳು ಪುನರಾರಂಭಗೊಂಡಿವೆ. ಹಿಜಾಬ್‌ಗೆ ಅನುಮತಿ ನೀಡಲಿಲ್ಲ ಎಂಬ ಕಾರಣಕ್ಕೆ 58ಕ್ಕೂಹೆಚ್ಚು ವಿದ್ಯಾರ್ಥಿನಿಯರು ಮನೆಗೆ ವಾಪಸ್‌ಆಗಿರುವ ಘಟನೆ ಹೊರತುಪಡಿಸಿದರೆ ಎಲ್ಲ ಕಡೆಕಾಲೇಜುಗಳು ಶಾಂತಿಯುತವಾಗಿ ನಡೆದಿವೆ.
ಹಿಜಾಬ್-ಕೇಸರಿ ಶಾಲು ವಿವಾದದಿಂದ ನಡೆದಅಹಿತಕರ ಘಟನೆಗೆ ಸಾಕ್ಷಿಯಾಗಿದ್ದ ಹರಿಹರದಲ್ಲಿಶಾಂತಿಯುತ ವಾತಾವರಣ ಕಂಡು ಬಂದಿತು.ಹಿಜಾಬ್ ಧರಿಸಿ ಕಾಲೇಜುಗಳಿಗೆ ಆಗಮಿಸಿದ್ದಅನೇಕ ವಿದ್ಯಾರ್ಥಿನಿಯರು ನಿಗದಿತ ಕೊಠಡಿಯಲ್ಲಿಹಿಜಾಬ್ ತೆಗೆದಿರಿಸಿ ಎಂದಿನಂತೆ ತರಗತಿಗಳಿಗೆ ಹಾಜರಾದರು.
8 ವಿದ್ಯಾರ್ಥಿನಿಯರು ಹಿಜಾಬ್‌ಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.ಹೈಕೋರ್ಟ್‌ನ ಮಧ್ಯಂತರ ಆದೇಶ, ಸರ್ಕಾರದನಿಯಮದಂತೆ ಅನುಮತಿ ನೀಡಲಾಗದುಎಂದು ಸಂಬಂಧಿತ ಕಾಲೇಜು ಪ್ರಾಚಾರ್ಯರು,ಉಪನ್ಯಾಸಕರು, ಪೊಲೀಸರು ತಿಳಿಸಿದ್ದರಿಂದಆ ವಿದ್ಯಾರ್ಥಿನಿಯರು ಮನೆಗೆ ತೆರಳಿದರು.ಶೇ. 60ರಷ್ಟು ವಿದ್ಯಾರ್ಥಿನಿಯರು ಕಾಲೇಜಿಗೆಗೈರುಹಾಜರಾಗಿದ್ದರು.ದಾವಣಗೆರೆಯ ಸರ್ಕಾರಿ ಪ್ರಥಮದರ್ಜೆಕಾಲೇಜಿಗೆ ಪ್ರಥಮ ಪಾಳಿಯಲ್ಲಿ ಆಗಮಿಸಿದ್ದವಿದ್ಯಾರ್ಥಿನಿಯರಲ್ಲಿ 8 ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಯೇ ತರಗತಿಗೆ ಹಾಜರಾಗುತ್ತೇವೆಎಂದಾಗ, ಅನುಮತಿ ನಿರಾಕರಿಸಿದ್ದರಿಂದತರಗತಿಗಳಿಗೆ ಹಾಜರಾಗಲಿಲ್ಲ.
ಮಧ್ಯಾಹ್ನದಪಾಳಿಯಲ್ಲಿ ಇಬ್ಬರು ವಿದ್ಯಾರ್ಥಿನಿಯರುವಾಪಸ್ ಮನೆಗೆ ಹೋದರು. ಇನ್ನುಳಿದಂತೆಎಲ್ಲ ವಿದ್ಯಾರ್ಥಿಗಳು ಎಂದಿನಂತೆ ತರಗತಿಗಳಿಗೆಹಾಜರಾದರು. ದಾವಣಗೆರೆಯ ಪ್ರತಿಷ್ಠಿತಮಹಿಳಾ ಕಾಲೇಜಿನಲ್ಲಿ ಬಿಗಿ ಭದ್ರತಾವ್ಯವಸ್ಥೆ ಮಾಡಲಾಗಿತ್ತು. ಹಿಜಾಬ್ ಧರಿಸಿಬಂದಿದ್ದವರು ಹಿಜಾಬ್ ತೆಗೆದಿರಿಸಲು ಪ್ರತ್ಯೇಕಕೊಠಡಿ ವ್ಯವಸ್ಥೆ ಮಾಡಲಾಗಿತ್ತು.