Advertisement

ಸೇವಾಲಾಲ್‌ ಕೊಡುಗೆ ಸ್ಮರಣೀಯ

02:29 PM Feb 16, 2022 | Team Udayavani |

ದಾವಣಗೆರೆ: ಬುಡಕಟ್ಟು ಸಮುದಾಯದ ಜನರಲ್ಲಿ ಆತ್ಮಸ್ಥೈರ್ಯತುಂಬುವ ಕಾರ್ಯ ಮಾಡಿದವರುಸಂತ ಸೇವಾಲಾಲ್‌ ಮಹಾರಾಜರುಎಂದು ಜಿಲ್ಲಾ ಪಂಚಾಯತ್‌ ಮುಖ್ಯಕಾರ್ಯ ನಿರ್ವಹಣಾಧಿ ಕಾರಿಡಾ| ವಿಜಯಮಹಾಂತೇಶ್‌ದಾನಮ್ಮನವರ್‌ ಹೇಳಿದರು.

Advertisement

ಮಂಗಳವಾರ ಜಿಲ್ಲಾಡಳಿತ, ಜಿಲ್ಲಾಪಂಚಾಯತ್‌, ಹಾಗೂ ಕನ್ನಡ ಮತ್ತುಸಂಸ್ಕೃತಿ ಇಲಾಖೆ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಸರಳವಾಗಿ ಆಯೋಜಿಸಲಾಗಿದ್ದ ಸಂತಸೇವಾಲಾಲ್‌ ಮಹಾರಾಜರ 283ನೇಜಯಂತಿಯಲ್ಲಿ ಮಾತನಾಡಿದಅವರು, ದೇಶ ಕಂಡಂತಹ ಪ್ರಮುಖಸಾಧು-ಸಂತರಲ್ಲಿ ಸೇವಾಲಾಲ್‌ಮಹಾರಾಜರು ಕೂಡ ಒಬ್ಬರು ಎಂದುಸ್ಮರಿಸಿದರು.

ಸಂತ ಸೇವಾಲಾಲ್‌ ಮಹಾರಾಜರುಧ್ಯಾನ. ಭಕ್ತಿ. ತಪಸ್ಸು ಮುಖಾಂತರಆಧ್ಯಾತ್ಮಿಕ ಕ್ಷೇತ್ರಕ್ಕೆ ಜೀವನವನ್ನೇಮುಡಿಪಾಗಿಟ್ಟವರು. ಬುಡಕಟ್ಟುಜನರಲ್ಲಿ ಧೈರ್ಯ, ಸಾಹಸ,ಆತ್ಮಸ್ಥೈರ್ಯ ಮತ್ತು ಆತ್ಮಗೌರವತುಂಬುವ ಕಾರ್ಯ ಮಾಡಿದವರು.ಜನರಲ್ಲಿ ನಮೂಢನಂಬಿಕೆಗಳನ್ನು ತೊಡೆದುಹಾಕಿ ಸನ್ಮಾರ್ಗದತ್ತ ತೆಗೆದುಕೊಂಡುಹೋಗುವಲ್ಲಿ ಯಶಸ್ವಿಯಾದರು.ಅವರ ತತ್ವಾದರ್ಶಗಳನ್ನು ಬದುಕಿನಲ್ಲಿಅಳವಡಿಸಿಕೊಂಡರೆ ಸಮಾಜವನ್ನುಒಗ್ಗೂಡಿಸಲು ಅನುಕೂಲವಾಗಲಿದೆಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next