Advertisement

ಸೋಲಿನ ಹತಾಶೆಯಿಂದ ಮಾಜಿ ಶಾಸಕರಿಂದ ಇಲ್ಲಸಲ್ಲದ ಹೇಳಿಕೆ

04:04 PM Feb 12, 2022 | Team Udayavani |

ಹೊನ್ನಾಳಿ: ಮಾಜಿ ಶಾಸಕ ಡಿ.ಜಿ. ಶಾಂತನಗೌಡನೇರಲಗುಂಡಿ ಗ್ರಾಮದ ಕೆರೆ ಹೂಳೆತ್ತುವಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ನೀಡಿರುವ ಹೇಳಿಕೆ ಸತ್ಯಕ್ಕೆದೂರವಾದುದು. ಮೂರು ಬಾರಿ ಸೋತಿರುವಮಾಜಿ ಶಾಸಕರು ಹತಾಶ ಮನೋಭಾವನೆಯಿಂದಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ ಎಂದುಸಿಎಂ ರಾಜಕೀಯ ಕಾರ್ಯದರ್ಶಿಎಂ.ಪಿ.ರೇಣುಕಾಚಾರ್ಯ ಹೇಳಿದರು.

Advertisement

ಶುಕ್ರವಾರ ತಮ್ಮ ನಿವಾಸದಲ್ಲಿಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನಸ್ವಂತ ಖರ್ಚಿನಲ್ಲಿ ಅರಕೆರೆ ಮತ್ತು ಹನುಮನಹಳ್ಳಿಕೆರೆಗಳಲ್ಲಿ ಮಣ್ಣನ್ನು ನನ್ನ ಜಮೀನಿಗೆಹಾಕಿಸಿಕೊಂಡಿದ್ದೇನೆ. ನೇರಲಗುಂಡಿ ಗ್ರಾಮಕ್ಕೆಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ಮಾಡಲುತೆರಳಿದಾಗ ಎಲ್ಲಾ ವಿಚಾರವನ್ನು ಗ್ರಾಮಸ್ಥರಿಗೆತಿಳಿಸಿದ್ದೆ. ಮಾಜಿ ಶಾಸಕರು ಯಾವುದೇಅಭಿವೃದ್ಧಿ ಮಾಡದೆ ಮಾತನಾಡುತ್ತಿದ್ದಾರೆ ಎಂದುಗ್ರಾಮಸ್ಥರೇ ಹೇಳಿದ್ದಾರೆ ಎಂದರು.

ಅಭಿವೈದ್ಧಿ ಎಂದರೆ ಏನು ಎಂದು ತಿಳಿಯದಶಾಂತನಗೌಡ ತಮ್ಮ ಅಧಿ ಕಾರ ಅವ ಧಿಯಲ್ಲಿ ಎಷ್ಟುಬಾರಿ ಅಂದಿನ ಸಿಎಂರನ್ನು ಭೇಟಿಯಾಗಿದ್ದಾರೆ,ತಾಲೂಕಿಗೆ ಯಾವ ಮಂತ್ರಿಗಳನ್ನು ಕರೆಸಿ ಅಭಿವೃದ್ಧಿಕಾರ್ಯಗಳನ್ನು ಉದ್ಘಾಟಿಸಿದ್ದಾರೆ ಎನ್ನುವುದನ್ನುತಾಲೂಕಿನ ಜನರ ಮುಂದೆ ಇಡಲಿ. ನನ್ನನ್ನುಅವಾಚ್ಯ ಶಬ್ದಗಳಿಂದ ನಿಂದಿಸುವುದನ್ನು ಬಿಟ್ಟರೆಮಾಜಿ ಶಾಸಕರಿಗೆ ಬೇರೆ ಕೆಲಸವಿಲ್ಲ. ನನಗೂಏಕವಚನದಲ್ಲಿ ನಿಂದಿಸುವುದು ಗೊತ್ತು. ಆದರೆಆ ಸಂಸ್ಕೃತಿ ನನ್ನದಲ್ಲ ಎಂದು ಕಿಡಿ ಕಾರಿದರು.

Advertisement

Udayavani is now on Telegram. Click here to join our channel and stay updated with the latest news.

Next