ದಾವಣಗೆರೆ: ಗೃಹಭಾಗ್ಯ ಯೋಜನೆಯಡಿಮಂಜೂರಾತಿ ಪತ್ರ ನೀಡಬೇಕು. ನೇರಪಾವತಿಪೌರ ಕಾರ್ಮಿಕರನ್ನು ಏಕಕಾಲದಲ್ಲಿಕಾಯಂಗೊಳಿಸಬೇಕು ಸೇರಿದಂತೆ ಪೌರಕಾರ್ಮಿಕರವಿವಿಧ ಬೇಡಿಕೆಗಳನ್ನು ಮಹಾನಗರ ಪಾಲಿಕೆ ಫೆ.8ರೊಳಗೆ ಈಡೇರಿಸಬೇಕು.
ಇಲ್ಲದಿದ್ದರೆ ಫೆ. 9ರಿಂದಹಂತ ಹಂತವಾಗಿ ಪಾಲಿಕೆಗೆ ಮುತ್ತಿಗೆ, ಪೊರಕೆಚಳವಳಿ, ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹಮಾಡಲಾಗುವುದು ಎಂದು ರಾಜ್ಯ ಮಹಾನಗರಪಾಲಿಕೆ, ನಗರಸಭೆ, ಪುರಸಭೆಗಳ ಪೌರಕಾರ್ಮಿಕರಮಹಾಸಂಘದ ಉಪಾಧ್ಯಕ್ಷ ಎಲ್.ಎಂ.ಹನುಮಂತಪ್ಪ ತಿಳಿಸಿದರು.ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ಗೃಹಭಾಗ್ಯಯೋಜನೆಯಡಿ ಮನೆಗಳನ್ನು ನಿರ್ಮಿಸಿಹಕ್ಕುಪತ್ರ ನೀಡುವಂತೆ ಹಲವು ಬಾರಿ ಮನವಿಮಾಡಿದರೂ ಪಾಲಿಕೆ ಆಯುಕ್ತರು ಏನಾದರೂಸಬೂಬು ಹೇಳುತ್ತಲೇ ಬಂದಿದ್ದಾರೆ.
ಈಗಾಗಲೇಕಟ್ಟಿಸಿರುವ ಮನೆಗಳ ಬಾಕಿ ಕಾಮಗಾರಿಯನ್ನುತುರ್ತಾಗಿ ಪೂರ್ಣಗೊಳಿಸಿ, ಪೌರಕಾರ್ಮಿಕರಿಗೆಮಂಜೂರಾತಿ ಪತ್ರ ನೀಡಬೇಕು ಎಂದರು.ಹಲವು ತಾಂತ್ರಿಕ ತೊಂದರೆಗಳಿಂದ ಆರು ತಿಂಗಳವೇತನ ನೀಡಲಾಗದ ಪೌರಕಾರ್ಮಿಕರಿಗೆ ಬೀದಿಗೆತಳ್ಳಲಾಗಿದ್ದು ಅವರಿಗೆ ಬಾಕಿ ವೇತನ ಕೊಟ್ಟು ಪುನಃಕೆಲಸಕ್ಕೆ ಸೇರಿಸಿಕೊಳ್ಳಬೇಕು.
ಪಾಲಿಕೆಯಲ್ಲಿರುವ245 ನೇರಪಾವತಿ ಪೌರಕಾರ್ಮಿಕರನ್ನುಕಾಯಂಗೊಳಿಸಬೇಕು. ಪೌರಕಾರ್ಮಿಕರನ್ನುಕಾಯಂಗೊಳಿಸುವ ವಿಚಾರದಲ್ಲಿ ಉಚ್ಚನ್ಯಾಯಾಲಯದ ಆದೇಶವಿದ್ದರೂಅನುಷ್ಠಾನಗೊಳಿಸಲು ಅಧಿಕಾರಿಗಳು ವಿಳಂಬಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಸಂಘಟನೆಯ ಜಿಲ್ಲಾ ಕಾರ್ಯಾಧ್ಯಕ್ಷ ಬಿ.ಎಚ್.ವೀರಭದ್ರಪ್ಪ ಮಾತನಾಡಿ, ಪ್ರಸ್ತುತ ಶೇ. 50ರಷ್ಟುಪೌರಕಾರ್ಮಿಕರು ನಿವೃತ್ತಿಯಾಗುತ್ತಿದ್ದು ಅವರಿಗೂಮನೆಗಳನ್ನು ನೀಡಬೇಕು. ಪಾಲಿಕೆ ಅಧಿಕಾರಿಗಳುಹೋರಾಟಕ್ಕೆ ಅವಕಾಶ ಮಾಡಿಕೊಡದೆ ಬೇಡಿಕೆಈಡೇರಿಸಬೇಕು ಎಂದರು.