Advertisement

ರಾಜ್ಯಮಟ್ಟದ ನಾಯಕತ್ವ ಕಾರ್ಯಾಗಾರ ಶೀಘ್ರ: ಸ್ವಾಮಿ

04:39 PM Feb 01, 2022 | Team Udayavani |

ದಾವಣಗೆರೆ: ಕರ್ನಾಟಕ ರಾಜ್ಯ ವೈಜ್ಞಾನಿಕಸಂಶೋಧನಾ ಪರಿಷತ್‌ ದಾವಣಗೆರೆಶಾಖೆವತಿಯಿಂದ ಇಲ್ಲಿನ ರಾಘವೇಂದ್ರಹೈಟೆಕ್‌ ಕಾಲೇಜಿನಲ್ಲಿ ನಾಯಕತ್ವ ಕಾರ್ಯಾಗಾರದಪೂರ್ವಭಾವಿ ಸಭೆ ನಡೆಯಿತು.

Advertisement

ರಾಜ್ಯ ಸಂಘಟನಾ ಕಾರ್ಯದರ್ಶಿವಿ.ಟಿ. ಸ್ವಾಮಿ ಮಾತನಾಡಿ, ಡಾ| ಹುಲಿಕಲ್‌ನಟರಾಜ್‌ ನೇತೃತ್ವದಲ್ಲಿ ಅನೇಕ ಗಣ್ಯರಮಾರ್ಗದರ್ಶನದಲ್ಲಿ ಮೊದಲ ಬಾರಿ ರಾಜ್ಯಮಟ್ಟದ ನಾಯಕತ್ವ ಕಾರ್ಯಾಗಾರವನ್ನುಮಾರ್ಚ್‌ ಮೊದಲ ವಾರದಲ್ಲಿ ಎರಡುದಿನಗಳ ಕಾಲ ಆಯೋಜಿಸಲಾಗುವುದು.

ಕಾರ್ಯಾಗಾರದಲ್ಲಿ ರಾಜ್ಯಾದಾದ್ಯಂತಸಂಸ್ಥೆಯ ಪ್ರಮುಖರು ಭಾಗವಹಿಸಲಿದ್ದು,ಸಂಘಟನೆಯ ಪ್ರಮುಖರನ್ನು ಬೌದ್ಧಿಕವಾಗಿಗಟ್ಟಿಗೊಳಿಸುವ ನಿಟ್ಟಿನಲ್ಲಿ ನಾಯಕತ್ವಕಾರ್ಯಾಗಾರ ಸಂಘಟಿಸಲಾಗಿದೆ ಎಂದರು.

ದೊಡ್ಡಬಳ್ಳಾಪುರವನ್ನು ಕೇಂದ್ರವಾಗಿಸಿಕೊಂಡು ಆರಂಭಿಸಲಾದ ಕರ್ನಾಟಕರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತುಆರಂಭಿಸಲಾಗಿದೆ. ಒಂದು ವರ್ಷದೊಳಗೆರಾಜ್ಯಾದ್ಯಂತ ಎಲ್ಲ ಜಿಲ್ಲೆ ಹಾಗೂ ತಾಲೂಕುಸಮಿತಿಗಳನ್ನು ರಚಿಸಲಾಗಿದ್ದು, ಸುಮಾರುಮೂವತ್ತೆ$çದು ಸಾವಿರಕ್ಕೂ ಹೆಚ್ಚಿನ ಸದಸ್ಯರನ್ನುನೋಂದಾಯಿಸಿಕೊಳ್ಳುವ ಮೂಲಕ ದಾಖಲೆಬರೆಯಲಾಗಿದೆ. ಸಂಸ್ಥೆಯು ಈಗಾಗಲೇಆನ್‌ಲೈನ್‌ ಮೂಲಕ ಕಾರ್ಯಕ್ರಮಗಳನ್ನುಹಾಗೂ ಸದಸ್ಯತ್ವ ಅಭಿಯಾನ ನಡೆಸುತ್ತಿದೆಎಂದು ತಿಳಿಸಿದರು.

ಜಿಲ್ಲಾ ಶಾಖೆ ಅಧ್ಯಕ್ಷ ಡಾ| ಜಗದೀಶ್‌ಎಂ.ಆರ್‌. ಸಭೆಯ ಅಧ್ಯಕ್ಷತೆ ವಹಿಸಿದ್ದರು.ಪ್ರಮುಖರಾದ ನಾಗರಾಜ್‌ ಸಂಗಮ್‌ಚಿತ್ರದುರ್ಗ, ರಾಜೇಂದ್ರ ಆವಿನಹಳ್ಳಿ,ಶಿವಮೊಗ್ಗ, ಶ್ರೀಕಾಂತ ಕೊಂಚಿಗೆರೆ ಹಾವೇರಿ,ವಿಜಯ ಬಣಕಾರ ಗದಗ, ಇತಿಹಾಸಸಂಶೋಧಕರಾದ ಡಾ| ಕೆಳದಿ ವೆಂಕಟೇಶಜೋಯಿಸ್‌, ಪತ್ರಕರ್ತ ಬಿ.ಡಿ. ರವಿಕುಮಾರ್‌ಆನಂದಪುರ, ಪ್ರಮುಖರಾದ ಎಂ. ರಂಗಪ್ಪ,ಜಾದೂ ಮೋಹನ್‌, ಲವಕುಮಾರ್‌,ದಾವಣಗೆರೆಯ ಪ್ರಮುಖರಾದ ನ್ಯಾಮತಿಬಸವರಾಜ್‌, ಡಾ.ಶಶಿಕಲಾ, ಶಾಂತಿಕಮುರುಡೇಶ್ವರ, ಅಶ್ವಿ‌ನಿ, ಬಿ,ಸಿ.ಸಿದ್ದಪ್ಪ,ಶಿವರಾಜ್‌, ಪ್ರಶಾಂತ್‌ ಎನ್‌.ಎಸ್‌.ರುದ್ರಮುನಿ ಸ್ವಾಮಿ ಕೆ.ಎಂ. ಭಾಗವಹಿಸಿದ್ದರು.ಡಾ| ಎಂ.ಆರ್‌. ಅನಿಲ್‌ಕುಮಾರ್‌ಸ್ವಾಗತಿಸಿದರು. ವೀರೇಶ್‌ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next