Advertisement

ಕುಂದು ಕೊರತೆ ಸಭೆಯಲ್ಲಿ ಸಮಸ್ಯೆ ಸರಮಾಲೆ

12:56 PM Jan 30, 2022 | Team Udayavani |

ದಾವಣಗೆರೆ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಕುಂದುಕೊರತೆ ಆಲಿಕೆ ಕುರಿತ ಜಿಲ್ಲಾ ಮಟ್ಟದ ಸಭೆಶನಿವಾರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್‌ ಅಧ್ಯಕ್ಷತೆಯಲ್ಲಿ ನಡೆಯಿತು.

Advertisement

ಜಿಲ್ಲಾ ವ್ಯಾಪ್ತಿಯ ಪರಿಶಿಷ್ಟ ಜಾತಿ ಹಾಗೂಪರಿಶಷ್ಟ ಪಂಗಡಗಳ ಮುಖಂಡರು ಭಾಗವಹಿಸಿಕುಂದು ಕೊರತೆಗಳನ್ನು ಅಧಿಕಾರಿಗಳ ಮುಂದೆಪ್ರಸ್ತಾಪಿಸಿ ಪರಿಹಾರಕ್ಕೆ ಕೋರಿದರು. ಮುಖಂಡಸೊರಟೂರು ಹನುಮಂತಪ್ಪ ಮಾತನಾಡಿ,ಕಡದಕಟ್ಟೆಯ ಹಲವು ಮನೆಗಳಲ್ಲಿ ಬ್ರಾಂದಿ ಮಾರಾಟಎಗ್ಗಿಲ್ಲದೇ ನಡೆಯುತ್ತಿದ್ದರೂ ಅಬಕಾರಿ ಇಲಾಖೆಯಾವುದೇ ಕ್ರಮ ಕೈಗೊಂಡಿಲ್ಲ.

ಕಿತ್ತೂರು ರಾಣಿ ಚೆನ್ನಮ್ಮಶಾಲೆ ಸನಿಹವೇ ಇದ್ದು ಇದರಿಂದ ವಿದ್ಯಾರ್ಥಿಗಳಮೇಲೆ ಹೆಚ್ಚು ದುಷ್ಪರಿಣಾಮಗಳಾಗುತ್ತಿವೆ. ಜನರುದೂರು ನೀಡಲು ಹಿಂಜರಿಯುತ್ತಿದ್ದು ಪೊಲೀಸ್‌ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಮನವಿಮಾಡಿದರು.

ಬೆನಕನಹಳ್ಳಿ ಹನುಮಂತಪ್ಪ ಮಾತನಾಡಿ,ಬೆನಕನಹಳ್ಳಿಯಲ್ಲಿ ನಾಲ್ಕು ಸ್ಮಶಾನಗಳಿದ್ದು,ಒಂದು ಸ್ಮಶಾನಕ್ಕೆ ವೀರಶೈವ ಸ್ಮಶಾನ ಎಂದು ಫಲಕಹಾಕಲಾಗಿದೆ. ಅದು ಸರ್ಕಾರಿ ಗೋಮಾಳವಾಗಿದೆಎಂದಾಗ ಎಸ್ಪಿಯವರು, ಒಂದು ವೇಳೆ ಅದುಸರ್ಕಾರಿ ಜಾಗವಾಗಿದ್ದರೆ ಫಲಕ ಬದಲಿಸಿ”ಸರ್ಕಾರಿ ಸ್ಮಶಾನ’ ಎಂದು ನಾಮಫಲಕ ಹಾಕಿಸಲು ಸೂಚಿಸಿದರು.

ಜಿಪಂ ಮಾಜಿ ಅಧ್ಯಕ್ಷ ಡಾ| ರಾಮಪ್ಪ ಮಾತನಾಡಿ,ಜಾತಿ ನಿಂದನೆ ಕೇಸ್‌ ಹಾಕಿದವರ ವಿರುದ್ಧ ಪ್ರತಿ ದೂರುದಾಖಲಿಸಲಾಗುತ್ತಿದೆ. ಇದು ಆಗದಂತೆ ತಡೆಯಬೇಕು ಎಂದರು. ಆಗ ಎಸ್‌ಪಿಯವರು ಪ್ರತಿಕ್ರಿಯಿಸಿ, ಹಾಗೆಮಾಡಲು ಬರುವುದಿಲ್ಲ. ಯಾರೇ ದೂರು ಕೊಟ್ಟರೂಸ್ವೀಕರಿಸಲೇಬೇಕಾಗುತ್ತದೆ ಎಂದರು.ಹೂವಿನಮಡು ಚೆನ್ನಬಸಪ್ಪ ಮಾತನಾಡಿ,ಮಾಯಕೊಂಡ ಠಾಣೆಯಲ್ಲಿ ನಡೆದ ಸಾವಿನಪ್ರಕರಣದ ಬಗ್ಗೆ ತಕ್ಷಣ ತನಿಖೆಯಾಗಿ ಕ್ರಮವಾಗಬೇಕು ಎಂದರು.

Advertisement

ಹರಿಹರ ವಿಶ್ವನಾಥ, ಉಚ್ಚಂಗಿ ಪ್ರಸಾದ್‌,ಪೇಪರ್‌ ಚಂದ್ರಣ್ಣ , ಎಸೊಳ್ಳೆ ತಿಮ್ಮಣ್ಣ, ಶ್ರೀನಿವಾಸ್‌ಇನ್ನಿತರರು ತಮ್ಮ ಭಾಗದ ಸಮಸ್ಯೆ ಹೇಳಿಕೊಂಡರು. ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ರಾಮಗೊಂಡಬಸರಗಿ, ಉಪವಿಭಾಗಾಧಿಕಾರಿ ಮಮತಾಹೊಸಗೌಡರ್‌, ಅಬಕಾರಿ ಅಧಿಕಾರಿ ಶಿವಪ್ರಸಾದ್‌,ಜಿಪಂ ಉಪಕಾರ್ಯದರ್ಶಿ ಆನಂದ್‌, ಮಹಾನಗರಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ,ಮುಖಂಡರಾದ ಹರೀಶ್‌ ನ್ಯಾಮತಿ, ಚಂದ್ರಪ್ಪ, ಹೆಗ್ಗೆರೆರಂಗಪ್ಪ, ಚೇತನ್‌ಕುಮಾರ್‌, ಗೋಗೇಶ್‌, ಜಯಣ್ಣಮುಂತಾದವರು ಸಭೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next