Advertisement

ದುಗ್ಗಮ್ಮ ಜಾತ್ರೆಗೆ ಮುಹೂರ್ತ ಫಿಕ್ಸ್‌

01:39 PM Jan 28, 2022 | Team Udayavani |

ದಾವಣಗೆರೆ: ರಾಜ್ಯ ಮಾತ್ರವಲ್ಲ, ಇತರೆ ರಾಜ್ಯದಲ್ಲೂಖ್ಯಾತಿ ಪಡೆದರುವ ದಾವಣಗೆರೆ ನಗರ ದೇವತೆ ಶ್ರೀದುರ್ಗಾಂಬಿಕಾ ಜಾತ್ರಾ ಮಹೋತ್ಸವವನ್ನು ಮಾ.15 ಮತ್ತು 16ರಂದು ನಡೆಸಲು ಗುರುವಾರ ನಡೆದಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿನಿರ್ಧರಿಸಲಾಯಿತು.

Advertisement

ಶ್ರೀ ದುರ್ಗಾಂಬಿಕಾ ದೇವಸ್ಥಾನ ಟ್ರಸ್ಟ್‌ಗೌರವಾಧ್ಯಕ್ಷರೂ ಆಗಿರುವ ಶಾಸಕ ಡಾ|ಶಾಮನೂರು ಶಿವಶಂಕರಪ್ಪ ಅವರ ಅಧ್ಯಕ್ಷತೆಯಲ್ಲಿದುರ್ಗಾಂಬಿಕಾದೇವಿ ಪ್ರಸಾದನಿಲಯದಲ್ಲಿ ನಡೆದಪೂರ್ವಭಾವಿ ಸಭೆಯಲ್ಲಿ ಅನೇಕ ಭಕ್ತರ ಅಭಿಪ್ರಾಯ,ಸಲಹೆ, ಸೂಚನೆಯಂತೆ ಮಾ. 15 ಮತ್ತು 16 ರಂದುಶ್ರೀ ದುರ್ಗಾಂಬಿಕಾದೇವಿ ಜಾತ್ರೆ ನಡೆಸುವನಿರ್ಧಾರ ಕೈಗೊಳ್ಳಲಾಯಿತು.

ಕೊರೊನಾ ಕಾರಣಕ್ಕೆಜಾತ್ರೆ ನಡೆಯುತ್ತದೋ ಇಲ್ಲವೋ ಎಂದು ಸಾರ್ವಜನಿಕವಲಯದಲ್ಲಿ ಮೂಡಿದ್ದ ಗೊಂದಲಕ್ಕೆ ತೆರೆ ಬಿದ್ದಿತು.ನಗರದೇವತೆ ಶ್ರೀ ದುರ್ಗಾಂಬಿಕಾದೇವಿ ಜಾತ್ರಾಮಹೋತ್ಸವಕ್ಕೆ ದಿನ ನಿಗದಿ ನಂತರ ಕೊರೊನಾದ ಅಬ್ಬರ, ಮಾರ್ಗಸೂಚಿ ಆಧರಿಸಿ ಜಾತ್ರೆಯ ಸ್ವರೂಪಹೇಗಿರಬೇಕು, ಪ್ರತಿ ಬಾರಿಯಂತೆ ಅದ್ಧೂರಿಯಾಗಿ ಆಚರಿಸುವುದೋ ಅಥವಾ ಕೊರೊನಾ ಮಾರ್ಗಸೂಚಿಗೆ ಅನುಗುಣವಾಗಿ ಸಂಪ್ರದಾಯಬದ್ಧವಾಗಿ ಆಚರಣೆಮಾಡಬೇಕೋ ಎಂಬ ರೂಪುರೇಷೆ ಕುರಿತಂತೆಜಿಲ್ಲಾಧಿಕಾರಿ, ಜಿಲ್ಲಾ ರಕ್ಷಣಾಧಿಕಾರಿ ಸಮಕ್ಷಮದಲ್ಲಿಹಲವು ಸಭೆ ನಡೆಸಲಾಗುವುದು.

ನಂತರ ಜಾತ್ರಾಸ್ವರೂಪದ ಬಗ್ಗೆ ನಿರ್ಧರಿಸಲು ಸಭೆ ತೀರ್ಮಾನಕೈಗೊಂಡಿತು.ಶ್ರೀ ದುರ್ಗಾಂಬಿಕಾದೇವಿಯ ದೇವಸ್ಥಾನಪುರೋಹಿತರಾದ ನಾಗರಾಜ್‌ ಜೋಯಿಸ್‌ಮಾತನಾಡಿ, ಶ್ರೀ ದುರ್ಗಾಂಬಿಕಾ ದೇವಿ ಜಾತ್ರೆಯನ್ನುಮಾ. 15 ಮತ್ತು 16ರಂದು ನಡೆಸಲಾಗುವುದು.ಫೆ. 8ರಂದು ಮಂಗಳವಾರ ಹಂದರಗಂಬ ಪೂಜೆ,ಮಾ.13ರಂದು ಭಾನುವಾರ ಬೆಳಗ್ಗೆ ಶ್ರೀದೇವಿಗೆಪಂಚಾಮೃತಾಭಿಷೇಕ, ರಾತ್ರಿ ಕಂಕಣ ಧಾರಣೆ ಹಾಗೂಸಾರು ಹಾಕುವುದು, 14, 15 ರಂದು ಶ್ರೀದೇವಿಗೆವಿಶೇಷ ಪೂಜೆ, 16ರಂದು ಚರಗ ಚೆಲ್ಲುವ ಕಾರ್ಯಕ್ರಮನಿಗದಿಯಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ಸಂದರ್ಭಕ್ಕೆಅನುಗುಣವಾಗಿ ಜಾತ್ರಾ ಮಹೋತ್ಸವ ನಡೆಸುವನಿರ್ಧಾರ ಟ್ರಸ್ಟ್‌ಗೆ ಬಿಟ್ಟಿದ್ದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next