Advertisement
ಮಂಗಳವಾರ ಜಿಲ್ಲಾಧಿಕಾರಿ ಕಚೇರಿಸಭಾಂಗಣದಲ್ಲಿ ನಡೆದ ರೇಷ್ಮೆ, ಯುವ ಸಬಲೀಕರಣಮತ್ತು ಕ್ರೀಡಾ ಇಲಾಖೆ ಪ್ರಗತಿ ಪರಿಶೀಲನಾ ಸಭೆಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೃಷಿಉತ್ಪನ್ನ ಮಾರುಕಟ್ಟೆಯಲ್ಲಿ ಮತ್ತೆ ರೇಷ್ಮೆ ಮಾರುಕಟ್ಟೆ ಪುನಾರಂಭಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
Related Articles
Advertisement
ರೈತರಿಗೆ ಮೋಸ ಮಾಡುವರನ್ನುಪೊಲೀಸರಿಗೆ ಹಿಡಿದು ಕೊಡಲಾಗುವುದು. ರೇಷ್ಮೆಬೆಳೆಗಾರರು ಸಾಕಷ್ಟು ಪರಿಶ್ರಮ ಪಡುತ್ತಾರೆ. ಅವರಿಗೆಯಾವುದೇ ರೀತಿಯಲ್ಲಿ ಅನ್ಯಾಯ ಆಗುವುದಕ್ಕೆಅವಕಾಶ ನೀಡುವುದಿಲ್ಲ ಎಂದು ತಿಳಿಸಿದರು.ರೇಷ್ಮೆ ಇಲಾಖೆಯಿಂದ ಬೆಳೆಗಾರರಿಗೆ ಶೆಡ್‌ನೀಡಲಾಗುವುದು. ಯಾವುದೇ ಅಧಿಕಾರಿ ಒಬ್ಬರೈತರಿಗೆ ಎರಡರೆಡು ಬಾರಿ ಶೆಡ್ ನೀಡಬಾರದು.ಅಂಥದ್ದು ಕಂಡು ಬಂದಲ್ಲಿ ಒಂದೇ ಕ್ಷಣದಲ್ಲಿಅಮಾನತು ಮಾಡಲಾಗುವುದು.
ರಾಜ್ಯದಲ್ಲಿ 2-3ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಶೆಡ್‌ನಿರ್ಮಾಣಕ್ಕೆ ಸಹಾಯಧನ ಹೆಚ್ಚಿಸುವ ಬಗ್ಗೆ ಪ್ರಯತ್ನಮಾಡಲಾಗುವುದು. ರೈತನ ಮಗನಾದ ನನಗೆ ರೈತರಎಲ್ಲ ಸಮಸ್ಯೆ ಗೊತ್ತಿವೆ. ಸಾಧ್ಯವಾದಷ್ಟು ರೈತರಿಗೆಅನುಕೂಲ ಮಾಡಲಾಗುವುದು ಎಂದರು.
ದಾವಣಗೆರೆ ಹೊರ ವಲಯದತೋಳಹುಣಸೆಯಲ್ಲಿ ರೇಷ್ಮೆ ಇಲಾಖೆಗೆ ಸೇರಿದ 37ಎಕರೆ ಜಾಗದಲ್ಲಿ ಕೆಲ ಭಾಗವನ್ನು ರೇಷ್ಮೆ ಬೆಳೆಗಾರರಿಗ ೆಭೋಗ್ಯಕ್ಕೆ ನೀಡುವಂತಹ ಹೊಸ ಪ್ರಯೋಗಪ್ರಾರಂಭಿಸಬೇಕು. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ರೇಷ್ಮೆ ಬೆಳೆಯಲು ಸಾಧ್ಯವಾಗುತ್ತದೆ. ಬೆಳೆಗಾರರಿಗ ೆಉತ್ತೇಜನ ನೀಡಿದಂತಾಗುತ್ತದೆ. ಉತ್ತಮಸಂಪರ್ಕ ಸೌಲಭ್ಯ ಕಲ್ಪಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ಚನ್ನಗಿರಿ ತಾಲೂಕಿನ ಮಾಡಾಳ್ ಸಮೀಪ ರೇಷ್ಮೆಇಲಾಖೆಗೆ ಸೇರಿದ 33 ಎಕರೆ ಜಾಗ ಇದೆ. ಬೇಲಿ ಇತರೆ ವ್ಯವಸ್ಥೆ ಇಲ್ಲ ಎಂದು ಇಲಾಖೆ ಅಧಿಕಾರಿಗಳುತಿಳಿಸಿದರು. ಬೇಲಿ ನಿರ್ಮಾಣ ಒಳಗೊಂಡಂತೆ ಅಗತ್ಯಕ್ರಮ ಕೈಗೊಂಡು ಜಾಗ ಕಬಳಿಕೆ ತಪ್ಪಿಸಬೇಕು ಎಂದು ಸಚಿವರು ಸೂಚಿಸಿದರು.
ಕೇಂದ್ರಸರ್ಕಾರದಿಂದರೇಷ್ಮೆಇಲಾಖೆಗೆಅನುದಾನನೀಡಲಾಗುತ್ತದೆ. ಬಹಳ ಶ್ರಮವಹಿಸಿ ಅನುದಾನ ತರಬೇಕಾ ಗುತ್ತದೆ. ಹಾಗಾಗಿ ಅನುದಾನ ದುರ್ಬಳಕೆ ಆಗದಂತೆ ಅಧಿಕಾರಿಗಳು ನಿಗಾವಹಿಸಬೇಕು ಎಂದುಸೂಚಿಸಿದ ಅವರು, ಕಳೆದ ವರ್ಷ ರೇಷ್ಮೆ ಇಲಾಖೆಗೆಆದಾಯ ಬಂದಿದೆ ಎಂದು ತಿಳಿಸಿದರು.ಸಂಸದ ಡಾ| ಜಿ.ಎಂ. ಸಿದ್ದೇಶ್ವರ, ಶಾಸಕರಾದಎಸ್.ಎ. ರವೀಂದ್ರನಾಥ್, ಪ್ರೊ| ಎನ್. ಲಿಂಗಣ,ರೇಷ್ಮೆ ಇಲಾಖೆ ಆಯುಕ್ತ ಪೆದ್ದಪ್ಪ, ಜಿಲ್ಲಾಧಿಕಾರಿಮಹಾಂತೇಶ್ ಜಿ. ಬೀಳಗಿ, ಜಿಪಂ ಉಪ ಕಾರ್ಯದರ್ಶಿಬಿ. ಆನಂದ್ ಇತರರು ಇದ್ದರು.