Advertisement

ನಿಗದಿತ ಅವಧಿಯಲ್ಲಿ ಕಾಮಗಾರಿ ಮುಗಿಸಿ

02:43 PM Jan 08, 2022 | Team Udayavani |

ದಾವಣಗೆರೆ: ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿಯೋಜನೆಯ ಕಾಮಗಾರಿ ಪೂರ್ಣಗೊಳಿಸಲುಅನಗತ್ಯ ವಿಳಂಬ ಮಾಡದೇ ನಿಗದಿತ ಸಮಯದಲ್ಲಿಕಾರ್ಯಗತಗೊಳಿಸಬೇಕು ಎಂದು ಸಂಸದ ಡಾ| ಜಿ.ಎಂ.ಸಿದ್ದೇಶ್ವರ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರನಡೆದ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿಯೋಜನೆಯಡಿ ಅನುಮೋದಿಸಲ್ಪಟ್ಟ ಕಾಮಗಾರಿಗಳಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿಮಾತನಾಡಿದ ಅವರು, ನನ್ನ ಅನುದಾನದಲ್ಲಿಅನೇಕ ಕಾಮಗಾರಿಗಳಿಗೆ ಅನುಮೋದನೆ ನೀಡಿ,ಹಣ ಬಿಡುಗಡೆ ಸಹ ಮಾಡಲಾಗಿದೆ.

ಆದರೂ,ಕಾಮಗಾರಿಗಳು ಕಾರ್ಯಗತವಾಗಿಲ್ಲ. ನೀವು ಕೆಲಸಮಾಡುವುದಾದರೆ ಮಾಡಿ, ಆಗುವುದಿಲ್ಲ ಎಂದರೆಬೇರೆ ಕಡೆ ಹೋಗಿ ಎಂದು ಸಂಬಂಧಿತ ಅಧಿಕಾರಿಗಳಿಗೆಎಚ್ಚರಿಕೆ ನೀಡಿದರು.ಶಾಲಾ ಕೊಠಡಿ, ಬಸ್‌ ಶೆಲ್ಟರ್‌, ಕುಡಿಯುವನೀರಿನ ಪೈಪ್‌ ಹಾಕಲು 2-3 ವರ್ಷ ಬೇಕಾಗುತ್ತದೆಎಂದಾದರೆ ಕೆಲಸಗಳು ಯಾವಾಗ ಮುಗಿಯಬೇಕು.ಈಗ ಮಂಜೂರಾಗಿರುವ ಕೆಲಸಗಳು ಮುಗಿದರೆಮುಂದಿನ ಅನುದಾನ ಬರುತ್ತದೆ.

ಬೇರೆ ಸಂಸದರುಅಡ್ವಾನ್ಸ್‌ ಆಗಿ ಕಾಮಗಾರಿಗಳಿಗೆ ಅನುಮೋದನೆನೀಡಿದ್ದಾರೆ. ನಾನು ಆ ರೀತಿ ಮಾಡುವುದೇ ಇಲ್ಲ.2024ರ ಲೋಕಸಭಾ ಚುನಾವಣೆಯಲ್ಲಿ ನಾನೇನಿಲ್ಲದೇ ಹೋದರೆ, ನಾನೇ ಇರದೇ ಇದ್ದಾಗ ಯಾವಕಡೆಯಿಂದ ಅನುದಾನ ನೀಡಲಿಕ್ಕೆ ಆಗುತ್ತದೆ.ಹಾಗಾಗಿ ನಾನು ಯಾವುದೇ ವಾಗ್ಧಾನ ನೀಡುವುದಿಲ್ಲ.

ಇರುವ ಅನುದಾನದಲ್ಲೇ ಕಾಮಗಾರಿ ನೀಡಿದ್ದೇನೆ.ಅಧಿಕಾರಿಗಳು 2,3, ಒಂದೂವರೆ ತಿಂಗಳಲ್ಲಿ ಕೆಲಸಪೂರ್ಣಗೊಳಿಸಲಾಗುವುದು ಎಂದು ತಿಳಿಸಿರುವಂತೆಮುಂದಿನ ಸಭೆ ವೇಳೆಗೆ ಕಾಮಗಾರಿಗಳು ಕಾರ್ಯಗತಆಗಿರಬೇಕು ಎಂದು ಸೂಚಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.