Advertisement

ಆರೋಗ್ಯ ಕಾರ್ಡ್‌ ನೋಂದಣಿ ಚುರುಕು

04:49 PM Jan 01, 2022 | Team Udayavani |

ದಾವಣಗೆರೆ: ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಪಡೆಯಲುಅನುಕೂಲ ಕಲ್ಪಿಸುವ ಆಯುಷ್ಮಾನ್‌ ಭಾರತ್‌- ಆರೋಗ್ಯಕರ್ನಾಟಕಕಾರ್ಡ್‌ (ಎಬಿ-ಎಆರ್‌ಕೆ ) ನೋಂದಣಿ ಪ್ರಕ್ರಿಯೆಗೆ ಜಿಲ್ಲಾಡಳಿತಚುರುಕು ಮೂಡಿಸಿದ್ದು ಕಾರ್ಡ್‌ ನೋಂದಣಿ ಮಾಡಿಸಿಕೊಂಡವರಸಂಖ್ಯೆ ನಾಲ್ಕು ಲಕ್ಷ ಸಮೀಪಿಸುತ್ತಿದೆ.ಎಬಿ-ಎಆರ್‌ಕೆ ಕಾರ್ಡ್‌ ನೋಂದಣಿ ಜಿಲ್ಲೆಯಲ್ಲಿ ಬಹಳನಿಧಾನಗತಿಯಲ್ಲಿ ಸಾಗಿತ್ತು.

Advertisement

ಇದನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಡಳಿತ, ನೋಂದಣಿಯಲ್ಲಿ ಗಣನೀಯ ಪ್ರಗತಿ ಸಾಧಿಸಲುಅಧಿಕಾರಿಗಳಿಗೆ ಸೂಚಿಸಿತು. ಜಿಲ್ಲಾಧಿಕಾರಿಯವರು ಪ್ರತಿ ತಿಂಗಳುಕನಿಷ್ಠ 80ಸಾವಿರ ಎಬಿ-ಎಆರ್‌ಕೆ ಕಾರ್ಡ್‌ ನೋಂದಣಿ ಮಾಡುವಗುರಿಯೊಂದಿಗೆಕೆಲಸಮಾಡಲು ಸೂಚಿಸಿದಪರಿಣಾಮಈಗ ಅಲ್ಲಲ್ಲಿಶಿಬಿರಗಳ ಮೂಲಕ ಕಾರ್ಡ್‌ ನೋಂದಣಿ ಮಾಡಲಾಗುತ್ತಿದೆ.ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಕೊಡಲು ಈ ಮೊದಲುಎಬಿ-ಎಆರ್‌ಕೆ ಕಾರ್ಡ್‌ನೊಂದಿಗೆ ಬಿಪಿಎಲ್‌ ಕಾರ್ಡ್‌, ಆಧಾರ್‌ಕಾರ್ಡ್‌ ಸೇರಿದಂತೆ ಇನ್ನಿತರ ದಾಖಲೆಗಳನ್ನು ಕೇಳಲಾಗುತ್ತಿತ್ತು.ತುರ್ತು ಸಂದರ್ಭದಲ್ಲಿ ಈ ಎಲ್ಲ ದಾಖಲೆಗಳನ್ನು ಕೊಡಲಾಗದುಎಂಬ ಕಾರಣಕ್ಕಾಗಿಯೇ ಅನೇಕರು ಎಬಿ-ಎಆರ್‌ಕೆ ಕಾರ್ಡ್‌ಮಾಡಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದರು.

ಈಗ ಸರ್ಕಾರ ಉಚಿತಚಿಕಿತ್ಸೆ ನೀಡಲು ಎಬಿ-ಎಆರ್‌ಕೆ ಕಾರ್ಡ್‌ ಒಂದನ್ನೇ ದಾಖಲೆಯನ್ನಾಗಿಪರಿಗಣಿಸಬೇಕು ಎಂಬ ಹೊಸ ನಿಯಮ ಮಾಡಿದ್ದರಿಂದ ಜನರುಸಹ ಎಬಿ-ಎಆರ್‌ಕೆ ಕಾರ್ಡ್‌ ನೋಂದಣಿಗೆ ಆಸಕ್ತಿ ತೋರುತ್ತಿದ್ದಾರೆ.ಕ್ಷಿಪ್ರ ಪ್ರಗತಿ ಪ್ರಯತ್ನ: ಆರೋಗ್ಯ ಇಲಾಖೆಯ ಅಂಕಿ-ಅಂಶಗಳನ್ನುಗಮನಿಸಿ ಹೇಳುವುದಾದರೆ ಜಿಲ್ಲೆಯಲ್ಲಿ ಯೋಜನೆ (2018ರಿಂದ )ಆರಂಭವಾದಾಗಿನಿಂದಇಲ್ಲಿಯವರೆಗೆ390809ಜನರುಎಬಿ-ಎಆರ್‌ಕೆ ಕಾರ್ಡ್‌ ನೋಂದಣಿ ಮಾಡಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿರುವ2020ರ ಜನಸಂಖ್ಯೆ ಆಧರಿಸಿದರೆ ಕಾರ್ಡ್‌ ನೋಂದಣಿಯಲ್ಲಿಶೇ.20ರಷ್ಟು ಪ್ರಗತಿಯಾಗಿದ್ದು ಬಿಪಿಎಲ್‌ ಕುಟುಂಬದವರನ್ನಷ್ಟೇಪರಿಗಣಿಸಿದರೆ ಈ ಪ್ರಗತಿ ಅಂದಾಜು ಶೇ. 40ಆಗಲಿದೆ.

ಆರೋಗ್ಯಇಲಾಖೆ ಈಗ ಅಲ್ಲಲ್ಲಿ ಶಿಬಿರಗಳನ್ನು ನಡೆಸುವ ಮೂಲಕಎಬಿ-ಎಆರ್‌ಕೆ ಕಾರ್ಡ್‌ ನೋಂದಣಿಯಲ್ಲಿ ಕ್ಷಿಪ್ರ ಪ್ರಗತಿಸಾಧಿಸಲುಮುಂದಾಗಿದೆ. ಒಟ್ಟಾರೆ ಆಮೆಗತಿಯಲ್ಲಿ ಸಾಗಿದ್ದ ಎಬಿ-ಎಆರ್‌ಕೆ ಕಾರ್ಡ್‌ ನೋಂದಣಿ ಜಿಲ್ಲೆಯಲ್ಲಿ ವೇಗ ಪಡೆದುಕೊಂಡಿದ್ದುನೋಂದಣಿ ಪ್ರಕ್ರಿಯೆ ಚುರುಕು ಪಡೆದುಕೊಂಡಿದೆ.

ಎಚ್‌.ಕೆ. ನಟರಾಜ

Advertisement
Advertisement

Udayavani is now on Telegram. Click here to join our channel and stay updated with the latest news.

Next