Advertisement

Davanagere Bandh; ದಾವಣಗೆರೆ ಬಂದ್ ಗೆ ವ್ಯಾಪಕ ಬೆಂಬಲ

08:18 AM Oct 16, 2024 | Team Udayavani |

ದಾವಣಗೆರೆ: ದಾವಣಗೆರೆಯ ಯುಬಿಡಿಟಿ ಕಾಲೇಜು ಉಳಿಸಿ… ಎಂದು ಒತ್ತಾಯಿಸಿ ಎಐಡಿಎಸ್ ಒ, ಯುಬಿಡಿಟಿ ಉಳಿಸಿ ಸಮಿತಿ ಹಾಗೂ 60ಕ್ಕೂ ಹೆಚ್ಚು ಸಂಘಟನೆ ಗಳು ಬುಧವಾರ(ಅ16) ಕರೆ ನೀಡಿರುವ ದಾವಣಗೆರೆ ಬಂದ್ ಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ.

Advertisement

ಕರ್ನಾಟಕದ ಪ್ರಪ್ರಥಮ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಎಂಬ ಖ್ಯಾತಿಯ ದಾವಣಗೆರೆ ಯುಬಿಡಿಟಿ ಕಾಲೇಜಿನಲ್ಲಿ ಶೈಕ್ಷಣಿಕ ವರ್ಷದ ಪ್ರಥಮ ಸೆಮಿಸ್ಟರ್ ನಿಂದ ಶೇ. 50 ಪೇಮೆಂಟ್ ಕೋಟಾ ಜಾರಿಗೊಳಿಸುವ ಮೂಲಕ ಸರ್ಕಾರವೇ ಶಿಕ್ಷಣದ ವ್ಯಾಪಾರಕ್ಕಿಳಿದಿದೆ. ಕೂಡಲೇ ಶೇ. 50 ಪೇಮೆಂಟ್ ಕೋಟಾ ರದ್ದುಪಡಿಸುವ ಜತೆಗೆ ಯುಬಿಡಿಟಿಯ ಅಭಿವೃದ್ಧಿಗೆ ಅಗತ್ಯ ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ವಿದ್ಯಾರ್ಥಿ ಸಂಘಟನೆ ಎಐಡಿಎಸ್ ಒ, ಯುಬಿಡಿಟಿ ಉಳಿಸಿ ಸಮಿತಿಯೊಟ್ಟಿಗೆ 60ಕ್ಕೂ ಹೆಚ್ಚು ರೈತ, ಕನ್ನಡಪರ, ದಲಿತ, ಮಹಿಳಾ ಸಂಘಟನೆ, ಸಿಪಿಐ, ಸಿಪಿಐ(ಎಂ) ಪಕ್ಷಗಳು, ಹಲವಾರು ಶಿಕ್ಷಣ ಪ್ರೇಮಿಗಳು ದಾವಣಗೆರೆ ಬಂದ್ ಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿವೆ.

ಬಂದ್ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ಸಂಘಟನಕಾರರು ಪ್ರಮುಖ ವೃತ್ತ, ರಸ್ತೆ ಇತರೆಡೆ ಸಂಚರಿಸಿ ಬಂದ್ ಗೆ ಕಾರಣ ತಿಳಿಸಿದರು. ಖಾಸಗಿ ಬಸ್ ಇತೆರೆಡೆ ಪ್ರಾರಂಭಿಕ ಹಂತದಲ್ಲಿ ವ್ಯಾಪಕವಾದ ಬೆಂಬಲ ವ್ಯಕ್ತವಾಯಿತು. ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್ ಇತರೆ ಹಿರಿಯ ಪೊಲೀಸ್ ಅಧಿಕಾರಿಗಳು ಬಂದೋಬಸ್ತ್ ವ್ಯವಸ್ಥೆ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next