Advertisement
ಹಾವೇರಿ ಜಿಲ್ಲೆಯ ರಾಣೆಬೇನ್ನೂರು ಮೂಲದ ಕಿರಾಣಿ ಅಂಗಡಿ ಮಾಲಿಕ ವೆಂಕಟೇಶ್ ಎಂಬುವವರು ಮಗನನ್ನು ದಾವಣಗೆರೆ ನಗರದ ಶಿರಮಗೊಂಡನಹಳ್ಳಿ ಬಳಿ ಇರುವ ಆನ್ ಮೋಲ್ ಕಾಲೇಜಿಗೆ ಸೇರಿಸಿದ್ದು, ಸೋಮವಾರ ಸಂಜೆ 7.30ರ ಸುಮಾರಿನಲ್ಲಿ 1.20 ಲಕ್ಷ ರೂ. ಕಾಲೇಜು ಶುಲ್ಕ ಕಟ್ಟಲು ಕಾರಿನಲ್ಲಿ ದಾವಣಗೆರೆಗೆ ಬಂದಿದ್ದಾರೆ. ರಾಂ ಅಂಡ್ ಕೋ ವೃತ್ತದಲ್ಲಿರುವ ರಸವಂತಿ ಜ್ಯೂಸ್ ಸೆಂಟರ್ ಗೆ ಜ್ಯೂಸ್ ಕುಡಿಯಲು ಕಾರಿನಲ್ಲಿಟ್ಟಿದ್ದ ಹಣ ಇರುವ ಬ್ಯಾಗ್ ತೆಗೆದುಕೊಂಡು ಹೋಗಿದ್ದಾರೆ. ಹಣದ ಬ್ಯಾಗ್ ಟೇಬಲ್ ಮೇಲೆ ಇಟ್ಟು ಜ್ಯೂಸ್ ಕುಡಿದಿದ್ದಾರೆ. ಬಳಿಕ ಹಣದ ಬ್ಯಾಗ್ ಟೇಬಲ್ ಮೇಲೆ ಬಿಟ್ಟು ಕಾಲೇಜಿಗೆ ಹೋಗಿದ್ದಾರೆ.
Related Articles
Advertisement
ಬ್ಯಾಗಿನಲ್ಲಿ ಎಷ್ಟು ಹಣ ಇತ್ತು ಎಂದು ಕೇಳಿದಾಗ 1.30 ಲಕ್ಷ ರೂ. ಇತ್ತು ಎಂದು ಹೇಳಿದ್ದಾರೆ. ಆಗಾದರೆ ಈ ಹಣ ನಿನ್ನದಲ್ಲ. ಏಕೆಂದರೆ ಈ ಬ್ಯಾಗಿನಲ್ಲಿ 1.20 ಲಕ್ಷ ರೂ. ಇರುವುದನ್ನು ನಾನೇ ಸಾರ್ವಜನಿಕರ ಮುಂದೆ ಎಣಿಸಿದ್ದೇನೆ. ಹೀಗಾಗಿ ಇದು ನಿಮ್ಮದಲ್ಲ, ಬೇರೆ ಯಾರದೋ ಇರಬಹುದು ಎಂದು ಶಾಸಕರು ಹೇಳಿದ್ದಾರೆ. ಆಗ ಇಲ್ಲ ಸರ್ ಬಾಗಿನಲ್ಲಿ 1.20 ಲಕ್ಷ ರೂ. ಇತ್ತು. ನನ್ನ ಮಗ ಆನ್ ಮೋಲ್ ವಸತಿ ಕಾಲೇಜಿನಲ್ಲಿ ಓದುತ್ತಿದ್ದಾನೆ. ಕಾಲೇಜು ಶುಲ್ಕ ಕಟ್ಟಲು ತಂದಿದ್ದೆ ಎಂದು ಹೇಳಿದ್ದಾನೆ. ಸುಳ್ಳು ಏಕೆ ಹೇಳಿದೆ, ನಿನ್ನಂಗೆ ಇನ್ನೊಬ್ಬರು ಕಳೆದುಕೊಂಡಿರಬಹುದು. ಇನ್ನು ಹತ್ತು ಸಾವಿರ ನಾನು ತೆಗೆದುಕೊಂಡಿದ್ದೇನೆ ಎಂಬರ್ಥವಾಗುತ್ತದೆ ಎಂದು ಹಣ ಕಳೆದುಕೊಂಡ ಮಾಲಿಕನಿಗೆ ನೀತಿ ಪಾಠ ಮಾಡಿ ಹಣವನ್ನು ಹಿಂದಿರುಗಿಸಿ ಮಾನವೀಯತೆ ಮೆರೆದು ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಹಣ ಶಾಸಕರ ಕೈಗೆ ಸಿಕ್ಕು, ಹಣ ಕಳೆದುಕೊಂಡ ವ್ಯಕ್ತಿಗೆ ಹಿಂದಿರುಗಿಸಿದರು. ಅದೇ ಹಣ ಬೇರೆ ವ್ಯಕ್ತಿಗಳಿಗೆ ಸಿಕ್ಕಿದ್ದರೆ, ಮಗನ ಕಾಲೇಜು ಶುಲ್ಕ ಕಟ್ಟಲು ತಂದಿದ್ದ ಹಣ ಕಂಡವರ ಪಾಲಾಗುತ್ತಿತ್ತು ಎಂದು ಸ್ಥಳದಲ್ಲಿ ಇದ್ದ ಸಾರ್ವಜನಿಕರು ಮಾತನಾಡಿಕೊಳ್ಳುತ್ತಿರುವುದು ಕಂಡು ಬಂತು.