ದಾವಣಗೆರೆ: ರಾಜ್ಯಾದ್ಯಂತ ಸರ್ಕಾರಿಪ್ರಥಮದರ್ಜೆ ಕಾಲೇಜುಗಳಲ್ಲಿ ಪೂರ್ಣಪ್ರಮಾಣದ ತರಗತಿ ನಡೆಸಲು ಸರ್ಕಾರ ಅಗತ್ಯಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿಅಖೀಲ ಭಾರತ ವಿದ್ಯಾರ್ಥಿ ಪರಿಷತ್(ಎಬಿವಿಪಿ)ಕಾರ್ಯಕರ್ತರು ನಗರದ ಗುಂಡಿ ಮಹದೇವಪ್ಪವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಕೊರೊನಾ ಎರಡನೇ ಅಲೆಗೆ ತತ್ತರಿಸಿದ್ದ ರಾಜ್ಯಇದೀಗ ಹಂತ ಹಂತವಾಗಿ ಸಹಜ ಸ್ಥಿತಿಗೆ ಮರಳಿದೆ.ಈಗಾಗಲೇ ಪದವಿ, ಸ್ನಾತಕೋತ್ತರ ತರಗತಿಗಳುಆರಂಭಗೊಂಡರೂ ಇನ್ನೂ ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಪೂರ್ಣಪ್ರಮಾಣದ ಪಾಠಗಳು ನಡೆಯದಿರುವುದುಶೋಚನಿಯ ಎಂದು ಪ್ರತಿಭಟನಾ ನಿರತವಿದ್ಯಾರ್ಥಿಗಳು ತಿಳಿಸಿದರು.
ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳಿಗೆಅವಶ್ಯಕತೆಗಿಂತ ಕಡಿಮೆ ಅಂದರೆ ಶೇ. 80ರಷ್ಟುಅತಿಥಿ ಉಪನ್ಯಾಸಕರನ್ನು ಒಂದು ತಿಂಗಳು ತಡವಾಗಿನೇಮಿಸಿಕೊಳ್ಳಲಾಗಿದೆ. ಅ. 28ರಿಂದ ಅತಿಥಿಉಪನ್ಯಾಸಕರು ಪಾಠ ಮಾಡುತ್ತಿದ್ದರು. ಆದರೆಡಿ. 10ರಿಂದ ತರಗತಿಗಳನ್ನು ಬಹಿಷ್ಕರಿಸಿದ್ದಾರೆ.ಅಂದಿನಿಂದ ಇಂದಿನವರೆಗೆ ತರಗತಿಗಳು ಪೂರ್ಣಪ್ರಮಾಣದಲ್ಲಿ ನಡೆಯದೆ ವಿದ್ಯಾರ್ಥಿಗಳಿಗೆ ಬಹಳಸಮಸ್ಯೆಯಾಗಿದೆ. ವಿದ್ಯಾರ್ಥಿಗಳಿಗೆ ಸಿ-1 ಪರೀಕ್ಷೆಈ ತಿಂಗಳ ಕೊನೆಯಲ್ಲಿ ಬರುವುದರಿಂದ ಆದಷ್ಟುಬೇಗ ಸಮಸ್ಯೆಗೆ ಸರ್ಕಾರ ಪರಿಹಾರ ಕಂಡುಹಿಡಿಯಬೇಕು ಎಂದು ಒತ್ತಾಯಿಸಿದರು.
ಇನ್ನುಳಿದ ಶೇ. 20ರಷ್ಟು ಅತಿಥಿ ಉಪನ್ಯಾಸಕರನ್ನುಆದಷ್ಟು ಬೇಗ ನೇಮಕ ಮಾಡಿಕೊಂಡುವಿದ್ಯಾರ್ಥಿಗಳಿಗೆ ಪೂರ್ಣ ಪ್ರಮಾಣದ ತರಗತಿಗಳುನಡೆಯಲು ಕ್ರಮ ಕೈಗೊಳ್ಳಬೇಕು. ಸರ್ಕಾರ ತಕ್ಷಣಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದುಎಂದು ಎಚ್ಚರಿಸಿದರು.
ಎಬಿವಿಪಿ ಜಿಲ್ಲಾ ಸಂಚಾಲಕಶರತ್, ನಗರ ಕಾರ್ಯಕಾರಣಿ ಸದಸ್ಯರಾದ ಚರಣ್,ನರೇಂದ್ರ, ಜಿಲ್ಲಾ ಎಸ್‌ಎಫ್ ಡಿ ಪ್ರಮುಖ್‌ಶಶಾಂಕ್, ದೊಡ್ಡೇಶ್, ಮಂಜುನಾಥ್, ದಿಲೀಪ್,ಪ್ರಜ್ವಲ್, ಪಲ್ಲವಿ, ಅಮೃತ ಇತರರು ಇದ್ದರು.ಉಪವಿಭಾಗಾಧಿಕಾರಿ ಕಚೇರಿ ಮೂಲಕ ಸರ್ಕಾರಕ್ಕೆಮನವಿ ಸಲ್ಲಿಸಲಾಯಿತು.