ದಾವಣಗೆರೆ: ಕೇಂದ್ರ ಸರ್ಕಾರ ಮೂರು ಕೃಷಿಕಾಯ್ದೆಗಳನ್ನು ಹಿಂಪಡೆದ ಹಿನ್ನೆಲೆಯಲ್ಲಿ ಸಂಯುಕ್ತಹೋರಾಟ ಕರ್ನಾಟಕದ ಜಿಲ್ಲಾ ಘಟಕದಪದಾಧಿಕಾರಿಗಳು ಶನಿವಾರ ನಗರದ ಗಾಂಧಿವೃತ್ತದಲ್ಲಿವಿಜಯೋತ್ಸವ ಆಚರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯರಾಜ್ಯಾಧ್ಯಕ್ಷ ಡಾ| ಕೆ. ಸುನೀತ್‌ಕುಮಾರ್, ನರೇಂದ್ರಮೋದಿಯವರ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ಒತ್ತಾಯ ಪೂರ್ವಕವಾಗಿಈ ದೇಶದ ರೈತರು ಮತ್ತು ಜನರ ಮೇಲೆ ಹೇರಲು ಮುಂದಾಗಿತ್ತು.
ದೇಶದ 550ಕ್ಕೂ ಹೆಚ್ಚು ರೈತಸಂಘಟನೆಗಳು ಒಗ್ಗೂಡಿ ಸಂಯುಕ್ತ ಕಿಸಾನ್ ಮೋರ್ಚಾರಚಿಸಿಕೊಂಡು ಹೋರಾಟ ಮಾಡಿದ ಪರಿಣಾಮಕೇಂದ್ರ ಸರ್ಕಾರ ಮಣಿದು ರೈತ ವಿರೋಧಿ ಕಾಯ್ದೆಗಳನ್ನುವಾಪಸ್ ಪಡೆದಿದೆ. ಈ ಹೋರಾಟದಲ್ಲಿ 700ಕ್ಕೂ ಹೆಚ್ಚುಜನ ರೈತರು ಮೃತಪಟ್ಟಿದ್ದಾರೆ. ಕೊನೆಗೂ ಸರ್ಕಾರ ಈಹೋರಾಟಕ್ಕೆ ಮಣಿದು ಕರಾಳ ಕೃಷಿ ಕಾಯ್ದೆಯನ್ನುವಾಪಸ್ ಪಡೆದಿರುವುದು ರೈತರ ಹೋರಾಟಕ್ಕೆ ಸಂದಜಯ ಎಂದರು.
ಮುಖಂಡ ಐರಣಿ ಚಂದ್ರು ಮಾತನಾಡಿ, ಕರಾಳಕೃಷಿ ಕಾಯ್ದೆಗಳ ವಿರುದ್ಧ ಸುದೀರ್ಘ ಹೋರಾಟ ನಡೆಸಿಗೆದ್ದಿರುವ ರೈತರಿಗೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಅದಾನಿ, ಅಂಬಾನಿಗಳಿಗೆ ದೇಶದ ಸಾರ್ವಜನಿಕಸಂಸ್ಥೆಗಳನ್ನು ಮಾರಾಟ ಮಾಡುತ್ತಿರುವುದನ್ನುತಡೆಯುವ ಶಕ್ತಿ ಇದೆ ಎಂದು ಹೇಳಿದರು.
ವಿವಿಧ ಸಂಘಟನೆಗಳ ಮುಖಂಡರಾದ ಮಧುತೊಗಲೇರಿ, ಅಣಬೇರು ತಿಪ್ಪೇಸ್ವಾಮಿ, ಬಿ.ಆರ್.ಅಪರ್ಣ, ಎಂ. ಕರಿಬಸಪ್ಪ, ಈ. ಶ್ರೀನಿವಾಸ್, ಕೆ.ಎಚ್.ಆನಂದರಾಜ್, ಹೆಗ್ಗೆರೆ ರಂಗಪ್ಪ, ಭಾರತಿ, ಬಸವರಾಜ್,ಆದಿಲ್ ಖಾನ್ ಮತ್ತಿತರರು ಇದ್ದರು.