Advertisement

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

06:59 PM Apr 28, 2024 | Team Udayavani |

ದಾವಣಗೆರೆ : ರಾಜ್ಯದಲ್ಲಿ ಎಲ್ಲೇ ಹೋದರೂ ಮತ್ತೊಮ್ಮೆ ಬಿಜೆಪಿ ಸರ್ಕಾರ ಕೂಗು ಕೇಳಿ ಬರುತ್ತಿದೆ. ಜೂನ್ 4 ರಂದು ರಾಜ್ಯದಲ್ಲಿ ಬಿಜೆಪಿ ವಿಜಯೋತ್ಸವ ನಡೆಯಲಿದ್ದು ದಾವಣಗೆರೆಯಲ್ಲಿ ವಿಶೇಷವಾಗಿ ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಈಗಲೇ ಸಿದ್ಧತೆ ಮಾಡಿಕೊಳ್ಳಿ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸದ ನುಡಿಗಳನ್ನಾಡಿದ್ದಾರೆ.

Advertisement

ಬಿಜೆಪಿ ವಿಕಸಿತ ಭಾರತಕ್ಕಾಗಿ ವಿಜಯ ಸಂಕಲ್ಪ ಸಮಾವೇಶದಲ್ಲಿ  ಮಾತನಾಡಿ,’ ರಾಜ್ಯದಲ್ಲಿ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮೇಲಿನಿಂದ ಕೆಳಗಿನವರೆಗೆ ಸಂಕಷ್ಟ ಮಾಡಿದೆ. ದೆಹಲಿಯಲ್ಲಿ ಕಾಂಗ್ರೆಸ್ ಒಂದೇ ಒಂದು ಖಾತೆ ತೆರೆಯುವ ಸಂಭವದ ಬಾಗಿಲು ಮುಚ್ಚಿ ಹೋದಿದೆ. ದಾವಣಗೆರೆಯಲ್ಲಿ ನೆರೆದ ಜನಸ್ತೋಮ ನೋಡಿದರೆ ರಾಜ್ಯದ ಜನತೆ ಕಾಂಗ್ರೆಸ್ ಸರ್ಕಾರದ ಪಾಪಗಳಿಗೆ ಶಿಕ್ಷೆ ಕೊಡುವುದು ನಿಶ್ಚಿತ’ ಎಂದರು.

ಕಾಂಗ್ರೆಸ್‌ನಲ್ಲಿನ ಆಂತರಿಕ ಜಗಳ ಬೀದಿಗೆ ಬರಲಿದೆ. ಎಲ್ಲ ಸುಳ್ಳುಗಳು ಬಯಲಾಗಲಿವೆ. ಒಬ್ಬರ ಮೇಲೊಬ್ಬರು ಆರೋಪ ಮಾಡುತ್ತಿದ್ದಾರೆ. ಚುನಾವಣೆಗೆ ಬಂದಾಗಲೆಲ್ಲ ಕಾಂಗ್ರೆಸ್ ಇವಿಎಂ ಮೇಲೆ ಆರೋಪದ ಮಂತ್ರ ಜಪಿಸುತ್ತಿತ್ತು. ಮೋದಿ ಗೆದ್ದರೂ ವಿಇಎಂ ಕಾರಣ, ಕಾರ್ಯಕರ್ತರನ್ನು ಸಮಾಧಾನಪಡಿಸುತ್ತಿದ್ದರು.ಇವಿಎಂ ಬಗ್ಗೆ ಮಾತನಾಡದಂತೆ ಸುಪ್ರಿಂಕೋರ್ಟ್ ಸರಿಯಾಗಿ ಚಾಟಿ ಬೀಸಿದೆ . ಈಗ ಅವರಿಗೆ ಚುನಾವಣೆಯಲ್ಲಿ ಸೋತರಿಗೆ ಏನು ಹೇಳಬಹುದು ಎಂಬ ತಯಾರಿ ನಡೆಸಿದ್ದಾರೆ. ಅವರಿಗೆ ಈಗ ನಿಜವಾದ ಸಂಕಷ್ಟ ಎದುರಾಗಿದೆ ಎಂದರು.

‘ದೇಶದ ಮೂಲೆ ಮೂಲೆಯಲ್ಲಿ ಓಡಾಡಿದ್ದೇನೆ. 2014, 2019 ರಲ್ಲಿ ಬಂದಿದ್ದೇನೆ. ಆದರೆ, ಈಗ 2024 ರಲ್ಲಿ ಬಂದಿರುವ ಪರಿಸ್ಥಿತಿ ಬೇರೆಯೇ ಇದೆ. ದೇಶದಲ್ಲಿ 10 ವರ್ಷ ಮೊಡಿದ ಮಾಡಿದ ಕೆಲಸ, ಕಾರ್ಯವೈಖರಿ, ಅನುಭವ, ಸರಿ-ತಪ್ಪಿನ ನಿರ್ಣಯ ಎಲ್ಲವನ್ನೂ ಅರ್ಥ ಮಾಡಿಕೊಂಡು ನನ್ನ ಜೀವನವನ್ನೇ ಜನರ ಏಳಿಗಾಗಿ ಮುಡಿಪಾಗಿಟ್ಟಿರುವ ಮೋದಿಯನ್ನು ಜನ ಕಾಣುತ್ತಿದ್ದಾರೆ. ದೇಶದ ಸಹೋದರಿಯರು, ಯುವಜನರು, ಮಾತೆಯರು ನನಗೆ ರಕ್ಷಾ ಕವಚವಾಗಿದ್ದಾರೆ. ನಾನು ಎಲ್ಲಿಯೇ ಹೋದರೂ ಜನರು ತೋರುವ ಪ್ರೀತಿ ನೋಡಿದರೆ, ಇದು ನನ್ನ ಅನೇಕ ಜನ್ಮಗಳ ಪುಣ್ಯ ಎನಿಸುತ್ತಿದೆ. ಇದು ಪರಮಾತ್ಮನೇ ನನಗೆ ಕಳುಹಿಸಿದ್ದಾನೆನೋ ಎನಿಸುತ್ತದೆ. ನಿಮ್ಮ ಪ್ರೀತಿಗೆ ಯಾವ ರೀತಿ ಕೃತಜ್ಞತೆ ಸಲ್ಲಿಸಬೇಕೆಂದು ತಿಳಿಯುತ್ತಿಲ್ಲ. ಕೃತಜ್ಞತೆ ಸಲ್ಲಿಸಲು ನನ್ನ ಬಳಿ ಶಬ್ದಗಳೇ ಇಲ್ಲ. ಇನ್ನು ನಾನು ಯಾರಿಗೆ ಕೃತಜ್ಞತೆ ಸಲ್ಲಿಸಬೇಕು ಎಂಬುದೂ ಗೊತ್ತಿಲ್ಲ. ಪರಮಾತ್ಮನಿಗೆ ಕೃತಜ್ಞತೆ ಸಲ್ಲಿಸಬೇಕೋ ಜನತಾ ಜನಾರ್ದನರಾದ ನಿಮಿಗೆ ಸಲ್ಲಿಸಬೇಕೋ ತಿಳಿಯುತ್ತಿಲ್ಲ. ಹಾಗಾಗಿ ನಾನು ದೇಶದ ಜನರ ಮುಂದೆ ತಲೆಬಾಗಿ ನಮ್ರತಾ ಪೂರ್ವಕವಾಗಿ ನಮಸ್ಕಾರ ಹೇಳುವುದನ್ನು ಬಿಟ್ಟರೆ, ಮೌನ ಸಮರ್ಪಣೆ ಮಾಡುವುದನ್ನು ಬಿಟ್ಟರೆ ಬೇರೆನೂ ಇಲ್ಲ. ಆದ್ದರಿಂದ ದೇಶ ಹಾಗೂ ದೇಶದ ಜನರ ರಕ್ಷಣೆ ವಿಚಾರದಲ್ಲಿ ನಾನು ಯಾವತ್ತೂ ವಿಶ್ರಮಿಸುವುದಿಲ್ಲ, ನಿಲ್ಲುವುದಿಲ್ಲ ಹಾಗೂ ತಲೆಬಾಗುವುದಿಲ್ಲ. ದೇಶದ ಜನರಿಗೆ ನನ್ನ ಜೀವನ ಮುಡಿಪಾಡಿಸುವುದೇ ಮೋದಿ ಗ್ಯಾರಂಟಿ’ ಎಂದರು.

‘ಬಿಜೆಪಿ ದೇಶವನ್ನು ಮುಂದೆ ಕೊಂಡೊಯ್ಯುವ ಕೆಲಸ ಮಾಡುತ್ತಿದ್ದರೆ. ಕಾಂಗ್ರೆಸ್ ರಾಜ್ಯದಲ್ಲಿ ಹಿಂದಕ್ಕೆ ಒಯ್ಯುವ ಕಾರ್ಯ ಮಾಡುತ್ತಿದೆ. ಮೋದಿ ಸರ್ಕಾರ ವಿಕಸಿತ ಭಾರತಕ್ಕಾಗಿ 24*7 ಕೆಲಸ ಮಾಡಿದರೆ, ಕಾಂಗ್ರೆಸ್ಸಿನಲ್ಲಿ ಎಲ್ಲದ್ದಕ್ಕೂ ಬ್ರೇಕ್ ಹಾಕುವ ಸಂಸ್ಕೃತಿ ಇದೆ. ಅದು ದೇಶದ ಏಕತೆಯನ್ನು ವಿಭಜಿಸುವ, ಅಭಿವೃದ್ಧಿ ತಡೆಯುವ ಸಂಸ್ಕೃತಿ ಹೊಂದಿದೆ’ ಎಂದರು.

Advertisement

’10 ವರ್ಷದಲ್ಲಿ ಎನ್‌ಡಿಎ ಸರ್ಕಾರ ರಾಜ್ಯದ ವಿಕಾಸಕ್ಕಾಗಿ ಕೆಲಸ ಮಾಡಿದೆ. ಯಡಿಯೂರಪ್ಪ ಬಸವರಾಜ ಬೊಮ್ಮಾಯಿ ಆಡಳಿತವಿದ್ದಾಗ ಸಾಕಷ್ಟು ಅಭಿವೃದ್ಧಿಯಾಗಿದೆ.ಈಗ ಕಾಂಗ್ರೆಸ್ ಆಡಳಿತದಿಂದ ರಾಜ್ಯ ದಿವಾಳಿಯಾಗುತ್ತಿದೆ. ನಂಬರ್ ಒಂದು ಇದ್ದವನು ನಂಬರ್ ಎರಡು ಇದ್ದವನ್ನು ಹೇಗೆ ಕೆಳಗಿಳಿಸಬೇಕು. ನಂಬರ್ ಎರಡು ಇದ್ದವನು ನಂಬರ್ ಒಂದು ಇದ್ದವನ ಕಾಲು ಎಳೆಯುವ ಕೆಲಸ ನಡೆಯುತ್ತಿದೆ ಹೊರತು, ರಾಜ್ಯವನ್ನು ಮೇಲೇಕೆತ್ತುವ ಯೋಚನೆ ಮಾಡುತ್ತಿಲ್ಲ. ಕಾಂಗ್ರೆಸ್ ಸರ್ಕಾರ ತನ್ನ ತಪ್ಪು ನೀತಿಯಿಂದಾಗಿ ರಾಜ್ಯದ ಜನತೆಯ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿದೆ’ ಎಂದು ಕಿಡಿ ಕಾರಿದರು.

Advertisement

Udayavani is now on Telegram. Click here to join our channel and stay updated with the latest news.

Next