Advertisement
ದಾವಣಗೆರೆ ನಗರ ಮತ್ತು ತಾಲೂಕಿನ ಇತರೆ ಭಾಗದ 147 , ಹರಿಹರದಲ್ಲಿ 39, ಜಗಳೂರಿನಲ್ಲಿ 24, ಚನ್ನಗಿರಿಯಲ್ಲಿ 52, ಹೊನ್ನಾಳಿಯಲ್ಲಿ 48 ಹಾಗೂ ಹೊರ ಜಿಲ್ಲೆಯ ಐವರು ಒಳಗೊಂಡಂತೆ 315 ಸೋಂಕಿತರು ಗುಣಮುಖರಾಗಿದ್ದಾರೆ.
Related Articles
Advertisement
ಇದನ್ನೂ ಓದಿ:ಜೂನ್ 15ರಂದು ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ರೆಡ್ ಅಲರ್ಟ್
ಜಿಲ್ಲೆಯಲ್ಲಿ ಕೊರೊನಾದಿಂದ ಹತ್ತು ಜನರು ಮೃತಪಟ್ಟಿದ್ದಾರೆ. ಚನ್ನಗಿರಿ ತಾಲೂಕಿನ ಬಸವಾಪಟ್ಟಣದ 42 ವರ್ಷದ ವ್ಯಕ್ತಿ, ನಲ್ಲೂರು ಗ್ರಾಮದ 55 ವರ್ಷದ ಮಹಿಳೆ, ದೊಡ್ಡಘಟ್ಟ ಗ್ರಾಮದ 46 ವರ್ಷದ ಮಹಿಳೆ, ತೊಪ್ಪೇನಹಳ್ಳಿಯ 51 ವರ್ಷದ ವ್ಯಕ್ತಿ, ಸಿದ್ದನಮಠ ಗ್ರಾಮದ 68 ವರ್ಷದ ವೃದ್ಧ, ದಾವಣಗೆರೆಯ ಜಯನಗರ ಬಿ ಬ್ಲಾಕ್‌ನ 84 ವರ್ಷದ ವೃದ್ಧ, ಚೌಡೇಶ್ವರಿ ನಗರದ 45 ವರ್ಷದ ಮಹಿಳೆ, ನಿಟುವಳ್ಳಿಯ 52 ವರ್ಷದ ಮಹಿಳೆ, ಹರಿಹರದ ತೆಗ್ಗಿನಕೇರಿಯ 59 ವರ್ಷದ ವ್ಯಕ್ತಿ, ಹೊನ್ನಾಳಿ ತಾಲೂಕಿನ ಬಿದರಗಡ್ಡೆ ಗ್ರಾಮದ 55 ವರ್ಷದ ವ್ಯಕ್ತಿ ಮೃತಪಟ್ಟವರು. ಜಿಲ್ಲೆಯಲ್ಲಿ ಈವರೆಗೆ ಕೊರೊನಾದಿಂದ ಜಿಲ್ಲೆಯಲ್ಲಿ 441 ಜನರು ಸಾವನ್ನಪ್ಪಿದ್ದಂತಾಗಿದೆ.
ಜಿಲ್ಲೆಯ ವಿವಿಧ ಆಸ್ಪತ್ರೆಯಲ್ಲಿ 144 ಸೋಂಕಿತರು ಸಾಮಾನ್ಯ, 519 ಸೋಂಕಿತರು ಆಕ್ಸಿಜನ್, 26 ಸೋಂಕಿತರು ಎನ್‌ಐವಿ, 51 ಸೋಂಕಿತರು ವೆಂಟಿಲೇಟರ್ 34 ಸೋಂಕಿತರು ವೆಂಟಿಲೇಟರ್ ರಹಿತ, 772ಸೋಂಕಿತರು ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. 527 ಸೋಂಕಿತರು ಕೋವಿಡ್ ಕೇರ್ ಸೆಂಟರ್‌ನಲ್ಲಿ ಇದ್ದಾರೆ.
ಸೋಮವಾರ ಜಿಲ್ಲೆಯಲ್ಲಿ 10 ಜನರಿಗೆ ಬ್ಯ್ಲಾಕ್ ಫಂಗಸ್ ಕಂಡು ಬಂದಿದೆ. ಕೊರೊನಾದಿಂದ ಗುಣಮುರಾದ ಜಿಲ್ಲಾ ಆಸ್ಪತ್ರೆಯಲ್ಲಿನ 10 ಜನರಿಗೆ ಬ್ಯ್ಲಾಕ್ ಫಂಗಸ್ ವಕ್ಕರಿಸಿದೆ. ಜಿಲ್ಲಾ ಆಸ್ಪತ್ರೆಯಲ್ಲಿ 51, ಎಸ್.ಎಸ್. ಹೈಟೆಕ್ ಆಸ್ಪತ್ರೆಯಲ್ಲಿ 25, ಬಾಪೂಜಿ ಆಸ್ಪತ್ರೆಯಲ್ಲಿ ಇಬ್ಬರು, ಕಾಲೇಜು ಆಫ್ ಡೆಂಟಲ್ ಸೈನ್ಸೆಸ್‌ನಲ್ಲಿ ಒಬ್ಬರು ಒಳಗೊಂಡಂತೆ 79 ಜನರು ಬ್ಯ್ಲಾಕ್ ಫಂಗಸ್‌ಗೆ ತುತ್ತಾಗಿದ್ದರು. ಅವರಲ್ಲಿ 19 ಜನರು ಗುಣಮುಖರಾಗಿದ್ದಾರೆ. ಜಿಲ್ಲಾ ಆಸ್ಪತ್ರೆಯಲ್ಲಿ 39, ಎಸ್.ಎಸ್. ಹೈಟೆಕ್‌ನಲ್ಲಿ 19, ಬಾಪೂಜಿ ಮತ್ತು ಕಾಲೇಜ್ ಆಫ್ ಡೆಂಟಲ್ ಸೈನ್ಸೆಸ್‌ನಲ್ಲಿ ತಲಾ ಒಬ್ಬರು ಒಳಗೊಂಡಂತೆ 60 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.