Advertisement

ಕೋವಿಡ್-19 ಸೋಂಕಿತ ದಾವಣಗೆರೆಯ 20 ವರ್ಷದ ಯುವತಿ ಗುಣಮುಖ

04:18 PM May 10, 2020 | keerthan |

ದಾವಣಗೆರೆ: ಕೋವಿಡ್-19 ಸೋಂಕು ದೃಢಪಟ್ಟಿದ್ದ, ಜೊತೆಗೆ ಹೃದಯ ಸಮಸ್ಯೆ ಹೊಂದಿದ್ದ 20 ವರ್ಷದ ಯುವತಿ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದು, ಗುಣಮುಖರಾಗುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಜಿ. ಬೀಳಗಿ ತಿಳಿಸಿದ್ದಾರೆ.

Advertisement

ಈಕೆ ಮೇ. 3 ರಂದು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದು, ಹೃದಯದ ಒಂದು ಕವಾಟು ಮಾತ್ರ ಕೆಲಸ ಮಾಡುತ್ದಿತ್ತು.  ತೀವ್ರ ಅಸ್ವಸ್ಥರಾಗಿದ್ದ ಮಹಿಳೆಯನ್ನು ತುರ್ತು ನಿಗಾ ಘಟಕದಲ್ಲಿ ದಾಖಲಿಸಲಾಗಿತ್ತು.

ವೈದ್ಯರ ಅರ್ಹಿನಿಶಿ ಪರಿಶ್ರಮ, ಚಿಕಿತ್ಸೆ ಫಲವಾಗಿ ಚೇತರಿಸಿಕೊಂಡಿದ್ದು ಸೋಮವಾರ ಐಸೋಲೇಷನ್ ವಾರ್ಡ್ ಶಿಫ್ಟ್ ಮಾಡಲಾಗುವುದು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next