ದಾವಣಗೆರೆ: ನಾಗಮಂಗಲದಿಂದ ದಾವಣಗೆರೆ ಸೇರಿದಂತೆ ಎಲ್ಲ ಕಡೆ ಗಣೇಶೋತ್ಸವದ ಮೇಲೆ ಕಲ್ಲು ತೂರಾಟ, ಹಿಂದು ಸಮಾಜದ ಮುಖಂಡರ ಮೇಲೆ ಕೇಸ್ ದಾಖಲಾಗಲು ಕಾಂಗ್ರೆಸ್ ಸರ್ಕಾರದ ತುಷ್ಟೀಕರಣವೇ ಕಾರಣ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ದೂರಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಗಣೇಶೋತ್ಸವ ನಿಲ್ಲಿಸುವ ಷಡ್ಯಂತ್ರ, ಪಿತೂರಿ ವ್ಯವಸ್ಥಿತವಾಗಿ ನಡೆಸಲಾಗುತ್ತಿದೆ ಎಂದು ದೂರಿದರು.
ನಾಗಮಂಗಲದಲ್ಲಿನ ಗಣೇಶೋತ್ಸವ ಸಂದರ್ಭದಲ್ಲಿ ಪ್ರಚೋದನೆ ನೀಡಿದವರು ಬೇರೆ. ಒಂದರಿಂದ ಮೂವತ್ತರೆಡುವರೆಗೆ ಕೇಸ್ ಹಾಕಲಾಗಿದೆ ಎಂದು ದೂರಿದರು.
ದಾವಣಗೆರೆಯಲ್ಲಿ ಗಣೇಶೋತ್ಸವ ಸಂದರ್ಭದಲ್ಲಿ ಸವಾಲು ಹಾಕಿದ್ದವರು ಯಾರು ಎಂದು ಪ್ರಶ್ನಿಸಿದ ಅವರು ಸವಾಲು ಹಾಕಿದವರಿಗೆ ಹಿಂದುಗಳು ಉತ್ತರ ನೀಡ ಬಾರದಾ ಮಹಾನ್ ನಾಯಕರನ್ನು ನೀಡಿದ ಹಿಂದೂಗಳು ಷಂಡರಲ್ಲ. ಅಚ್ಚರಿ ಎನ್ನುವಂತೆ ಹಿಂದೂ ಮುಖಂಡ ಸತೀಶ್ ಪೂಜಾರಿ ಅವರ ವಂಶವೃಕ್ಷ ಕೇಳಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಸಂಸದ ಪ್ರತಾಪ್ ಸಿಂಹ, ಡಾ. ಜಿ.ಎಂ. ಸಿದ್ದೇಶ್ವರ, ಹರಿಹರ ಶಾಸಕ ಬಿ.ಪಿ. ಹರೀಶ್, ಗಾಯತ್ರಿ ಸಿದ್ದೇಶ್ವರ, ಯಶವಂತ ರಾವ್ ಜಾಧವ್ ಇತರರು ಇದ್ದರು.