Advertisement

ಭತ್ತದ ಗದ್ದೆಗೆ ಕೃಷಿ ಅಧಿಕಾರಿಗಳ ಭೇಟಿ

06:20 PM Apr 25, 2020 | Naveen |

ದಾವಣಗೆರೆ: ಕಳಪೆ ಗುಣಮಟ್ಟದ ಬಿತ್ತನೆ ಬೀಜದ ಪರಿಣಾಮ ತೆನೆ ಕಟ್ಟುವಲ್ಲಿ ವ್ಯತ್ಯಾಸ ಆಗಿದೆ ಎಂಬ ಆರೋಪ, ಹೋರಾಟಕ್ಕೆ ಸ್ಪಂದಿಸಿದ ದಾವಣಗೆರೆ ತಾಲೂಕು ಕೃಷಿ ಸಹಾಯಕ ನಿರ್ದೇಶಕ ಕೆ.ಎಚ್‌. ರೇವಣಸಿದ್ದನಗೌಡ ಇತರರು ಶುಕ್ರವಾರ ಕೋಲ್ಕುಂಟೆ ಗ್ರಾಮದ ಭತ್ತದ ಗದ್ದೆಗಳಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

ಕಳಪೆ ಗುಣಮಟ್ಟದ ಬಿತ್ತನೆ ಬೀಜದ ಪರಿಣಾಮ ತೆನೆ ಕಟ್ಟುವಲ್ಲಿ ವ್ಯತ್ಯಾಸ ಆಗಿದೆ. ಸಂಬಂಧಿತರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ (ಹುಚ್ಚವ್ವನಹಳ್ಳಿ ಮಂಜುನಾಥ್‌ ಬಣ) ನೇತೃತ್ವದಲ್ಲಿ ರೈತರು ಕೃಷಿ ಇಲಾಖೆಗೆ ಮನವಿ ಸಲ್ಲಿಸಿದ್ದರು. ಹಿರಿಯ ಅಧಿಕಾರಿಗಳ ಸೂಚನೆಯಂತೆ ಮಾಯಕೊಂಡ ಹೋಬಳಿಯ ಕೃಷಿ ಅಧಿಕಾರಿಗಳಾದ ತೇಜುವರ್ಧನ್‌, ನಾಗೇಂದ್ರಪ್ಪ ಗ್ರಾಮಕ್ಕೆ ಭೇಟಿ ನೀಡಿದ್ದರು. ಜಂಟಿ ನಿರ್ದೇಶಕರೇ ಆಗಮಿಸಿ ಪರಿಶೀಲನೆ ನಡೆಸಬೇಕು ಎಂದು ರೈತರು ಪಟ್ಟು ಹಿಡಿದರು.

ಅಂತಿಮವಾಗಿ ಸಹಾಯಕ ಕೃಷಿ ನಿರ್ದೇಶಕ ಕೆ.ಎಚ್‌. ರೇವಣಸಿದ್ದನಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಲಬೆರಕೆ ಬಿತ್ತನೆ ಬೀಜ ಮಿಶ್ರಣ ಮಾಡಲಾಗಿದೆ ಎಂಬುದು ಗೊತ್ತಾಗುತ್ತದೆ. ಕೃಷಿ ವಿಜ್ಞಾನಿಗಳನ್ನು ಕರೆಸಿ ಪರಿಶೀಲನೆ ನಡೆಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ರೈತ ಸಂಘಧ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್‌, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೋಲ್ಕುಂಟೆ ಬಸವರಾಜಪ್ಪ, ಭೀಮಪ್ಪ, ಉಲ್ಲಳ್ಳಿ ಮಂಜಪ್ಪ, ರುದ್ರೇಶ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next