Advertisement

ಹೊಲಿಗೆ ಯಂತ್ರ ವಿತರಣೆ ಕಾರ್ಯಕ್ರಮ ನಾಳೆ

03:26 PM Jan 24, 2021 | Team Udayavani |

ದಾವಣಗೆರೆ: ಡಾ| ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದಿಂದ ವೃತ್ತಿ ತರಬೇತಿ ಪಡೆದ ಫಲಾನುಭವಿಗಳಿಗೆ ಹೊಲಿಗೆ ಯಂತ್ರ ವಿತರಣೆ ಕಾರ್ಯಕ್ರಮವನ್ನು ಜ. 25ರಂದು ಸಂಜೆ 4ಗಂಟೆಗೆ ನಗರದ ಪಶುವೈದ್ಯ ಆಸ್ಪತ್ರೆ ಹಿಂಭಾಗದಲ್ಲಿರುವ ಜಿಲ್ಲಾ ಸಮಗಾರ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಸಮಗಾರ ಸಮಾಜದ ಅಧ್ಯಕ್ಷ ಫಕೀರಪ್ಪ ಬೆಟಗೇರಿ ತಿಳಿಸಿದರು.

Advertisement

ಇದನ್ನೂ ಓದಿ : ರೈತರ ಟ್ರ್ಯಾಕ್ಟರ್ ರ‍್ಯಾಲಿಗೆ ಮಾರ್ಗಗಳನ್ನು ಸೂಚಿಸಿದ ದೆಹಲಿ ಪೊಲೀಸರು 

ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಎಸ್‌.ಎ. ರವೀಂದ್ರನಾಥ್‌, ಮಾಯಕೊಂಡ ಶಾಸಕ ಹಾಗೂ ಡಾ|
ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪ್ರೊ| ಎನ್‌. ಲಿಂಗಣ್ಣ, ಮಹಾಪೌರ ಅಜಯಕುಮಾರ್‌, ಪತ್ರಕರ್ತ ಮಾರ್ಕಂಡೇಯ ದೊಡಮನಿ, ಬಸವರಾಜ ತೇರದಾಳ್‌, ವಿವೇಕಾನಂದ ಬೆಂಡಿಗೇರಿ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಡಾ| ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದಿಂದ ವೃತ್ತಿ ತರಬೇತಿ ಪಡೆದ ಜಿಲ್ಲೆಯ 30 ಜನರಿಗೆ ಹೊಲಿಗೆಯಂತ್ರ ವಿತರಿಸಲಾಗುತ್ತಿದೆ.ಒಂದು ಹೊಲಿಗೆ ಯಂತ್ರ 30,000 ರೂ. ಮೌಲ್ಯದ್ದಾಗಿದೆ ಎಂದರು.

ಚರ್ಮ ಕೈಗಾರಿಕೆಗೆ ಲಿಡಕರ್‌ನಿಂದ ಕಚ್ಚಾ ಸಾಮಗ್ರಿಗಳನ್ನು ನೀಡಲಾಗುತ್ತಿದೆ. ಸಿದ್ಧಪಡಿಸಿದ ಪಾದರಕ್ಷೆ ಹಾಗೂ ಇತರೇ ಚರ್ಮ ಉತ್ಪನ್ನಗಳನ್ನು ಅವರೇ ಖರೀದಿಸುವಂತಾಗಬೇಕು. ನಿಗಮದಿಂದ ಕುಟೀರ್‌ ನೀಡಿದರೂ ಅವುಗಳನ್ನು ಇಟ್ಟುಕೊಳ್ಳಲು ಮಹಾ  ನಗರ ಪಾಲಿಕೆಯವರು ಪರವಾನಗಿ ಕೊಡುವುದಿಲ್ಲ. ಪರವಾನಗಿ ಕೊಡದೆ ಇದ್ದರೆ ಕುಟೀರ್‌ ಕೊಟ್ಟರೂ ಪ್ರಯೋಜನ ಬೀಳುವುದಿಲ್ಲ. ಕೆಲವೊಂದು ಪ್ರದೇಶಗಳಲ್ಲಿ ಕುಟೀರ್‌ ಇಟ್ಟುಕೊಳ್ಳಲು ಸ್ಥಳೀಯ ಸಂಸ್ಥೆಗಳು ಮೌಖೀಕ ಒಪ್ಪಿಗೆ ನೀಡುತ್ತವೆ. ಆದರೆ ಅಧಿಕೃತ ಪರವಾನಗಿ ನೀಡುವುದಿಲ್ಲ. ಹೀಗಾಗಿ ಕುಟೀರಗಳಿಗೆ ವಿದ್ಯುತ್‌ ಸಂಪರ್ಕವೂ ಸಿಗುವುದಿಲ್ಲ. ಈ ಎಲ್ಲ ಸಮಸ್ಯೆಗಳನ್ನು ಕಾರ್ಯಕ್ರಮಕ್ಕೆ ಬರುವ ಗಣ್ಯರ ಗಮನಸೆಳೆಯಲಾಗುವುದು ಎಂದು ತಿಳಿಸಿದರು.
ಸಂಘಟನೆಯ ಪ್ರಮುಖರಾದ ರವಿ ಗಾಮನಗಟ್ಟಿ, ಶಿವಾಜಿ ತೇರದಾಳ, ಗಣೇಶ್‌ ಮಾನೆ, ಯಲ್ಲಪ್ಪ ಕಲಾದಗಿ, ರಾಜಶೇಖರ್‌ ತೇಲಗಾವಿ ಇನ್ನಿತರರು ಸುದ್ದಿಗೋಷ್ಠಿಯಲ್ಲಿದ್ದರು.

ಇದನ್ನೂ ಓದಿ : ಹನುಮಸಾಗರ: ಜಾಗೃತಿ ಜಾಥಾ

Advertisement
Advertisement

Udayavani is now on Telegram. Click here to join our channel and stay updated with the latest news.

Next