Advertisement

ಕೋವಿಡ್‌ ಪರೀಕ್ಷೆ-ಚಿಕಿತ್ಸೆಗೆ ಹಿಂದೇಟು ಬೇಡ: ಹರೀಶ್‌

10:33 PM Jun 03, 2021 | Team Udayavani |

ಹರಿಹರ: ಗ್ರಾಮೀಣ ಭಾಗದ ಜನತೆ ಕೋವಿಡ್‌ ಪರೀಕ್ಷೆ, ಚಿಕಿತ್ಸೆ ಪಡೆಯಲು ಹಿಂದೇಟು ಹಾಕಬಾರದು ಎಂದು ಮಾಜಿ ಶಾಸಕ ಬಿ.ಪಿ. ಹರೀಶ್‌ ಹೇಳಿದರು. ನಗರದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲೂಕಿನ ಗ್ರಾಮೀಣ ಭಾಗದ ಹಲವರು ಕೋವಿಡ್‌ ಲಕ್ಷಣಗಳಿದ್ದರೂ ಪರೀಕ್ಷೆ ಮಾಡಿಸಿಕೊಳ್ಳುತ್ತಿಲ್ಲ. ಸ್ವಯಂ ಅಥವಾ ಸ್ಥಳೀಯ ವೈದ್ಯರಲ್ಲಿ ಚರ್ಚಿಸಿ ಔಷಧ ಪಡೆದುಕೊಳ್ಳುತ್ತಿರುವುದು ಕಂಡುಬರುತ್ತಿದೆ.

Advertisement

ಇದು ಅಪಾಯಕಾರಿ ಎಂದರು. ಪ್ರತಿಯೊಬ್ಬರಿಗೂ ಅವರ ಆರೋಗ್ಯ ಸ್ಥಿತಿಗತಿ ಮತ್ತಿತರೆ ಅಂಶ ಪರಿಗಣಿಸಿ ಔಷಧ ನೀಡಬೇಕಿರುತ್ತದೆ. ಅಗತ್ಯಕ್ಕಿಂತ ಹೆಚ್ಚು ಅಥವಾ ತಪ್ಪು ಔಷ ಧ ಸೇವನೆಯಿಂದ ಪ್ರಾಣಕ್ಕೆ ಅಪಾಯ ತಂದುಕೊಳ್ಳುವುದು ಅಥವಾ ಪಾಸಿಟಿವ್‌ ಇದ್ದು ಸೂಕ್ತ ಚಿಕಿತ್ಸೆ ಪಡೆಯದಿದ್ದರೆ ಕುಟುಂಬದ ಇತರೆ ಸದಸ್ಯರು ಹಾಗೂ ನೆರೆಹೊರೆಯವರಿಗೂ ಸೋಂಕು ಹರಡುವ ಸಾಧ್ಯತೆ ಇರುತ್ತದೆ.

ನಾನು ಇತ್ತೀಚಿಗೆ ತಾಲೂಕಿನ 21 ಗ್ರಾಪಂಗಳಿಗೆ ಭೇಟಿ ನೀಡಿ, ಗ್ರಾಪಂ ಸದಸ್ಯರು, ಸಿಬ್ಬಂದಿ, ಆಶಾ, ಅಂಗನವಾಡಿ ಕಾರ್ಯಕರ್ತೆಯರನ್ನು ಭೇಟಿ ಮಾಡಿ ಚರ್ಚಿಸಿದ್ದೇನೆ. ಅವರೆಲ್ಲರೂ ಗ್ರಾಮಸ್ಥರ ಅಸಹಕಾರ ಹಾಗೂ ವಿನಾ ಕಾರಣ ಸಂದೇಹದ ಕುರಿತು ಹೇಳಿದ್ದಾರೆ. ಟೆಸ್ಟ್‌ ಮಾಡಲು ಅಥವಾ ಟೆಸ್ಟ್‌ ಮಾಡಿಸಿ ಪಾಸಿಟಿವ್‌ ಬಂದವರನ್ನು ಕೋವಿಡ್‌ ಕೇರ್‌ ಸೆಂಟರ್‌ಗೆ ಕರೆದೊಯ್ಯಲು ಬಂದರೆ ಹಲವು ಗ್ರಾಮಗಳಲ್ಲಿ ಜನರು ಕೈಗೆ ಸಿಗದೆ ಪರಾರಿಯಾದ ಘಟನೆಗಳೂ ನಡೆದಿವೆ ಎಂದು ತಿಳಿಸಿದರು.

ತಾಲೂಕಿನಲ್ಲಿ ಗುತ್ತೂರು, ಕೊಂಡಜ್ಜಿ ಮತ್ತು ನಗರದ ಎಸ್‌ಜೆವಿಪಿ ಕಾಲೇಜಿನ ಹಾಸ್ಟೆಲ್‌ನಲ್ಲಿ ಕೋವಿಡ್‌ ಕೇರ್‌ ಸೆಂಟರ್‌ ಇದೆ. ಲಘು ಲಕ್ಷಣಗಳಿದ್ದವರಿಗೆ ಕೇರ್‌ ಸೆಂಟರ್‌ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಈ ಪೈಕಿ ಕೊಂಡಜ್ಜಿ ಕೇರ್‌ ಸೆಂಟರ್‌ ರೆಸಾರ್ಟ್‌ನಂತಿದೆ. ಎಲ್ಲಾ ಕೇರ್‌ ಸೆಂಟರ್‌ಗಳಲ್ಲಿ ನಿವಾಸಿಗಳಿಗೆ ಉತ್ತಮ ತಿಂಡಿ, ಎರಡು ಹೊತ್ತು ಊಟ ನೀಡಲಾಗುತ್ತಿದೆ. ಜೊತೆಗೆ ಮೊಟ್ಟೆ, ಬಾಳೆಹಣ್ಣು, ಕಷಾಯ, ಅಗತ್ಯ ಔಷ ಧ ನೀಡಲಾಗುತ್ತಿದೆ.

ಬೆಳಿಗ್ಗೆ ವ್ಯಾಯಾಮ, ಯೋಗ ಮಾಡಿಸಲಾಗುತ್ತಿದೆ. ಶೌಚಾಲಯ, ಬಿಸಿನೀರು ಸೇರಿದಂತೆ ಇತರೆ ಸೌಲಭ್ಯಗಳೂ ಲಭ್ಯ ಇವೆ ಎಂದರು. ಕೋವಿಡ್‌ ಕೇರ್‌ ಸೆಂಟರ್‌ ಅಥವಾ ಆಸ್ಪತ್ರೆಗೆ ಸೇರಿಸಿಕೊಂಡು ಕೋವಿಡ್‌ ರೋಗಿಗಳಿಗೆ ಚಿಕಿತ್ಸೆ ನೀಡಿದರೆ ಅಧಿ ಕಾರಿಗಳಿಗೆ ಲಕ್ಷಾಂತರ ರೂ. ಆದಾಯ ಬರುತ್ತದೆ ಎಂಬ ತಪ್ಪು ಕಲ್ಪನೆ ಇದೆ.

Advertisement

ಆ ರೀತಿ ಯಾವುದೇ ಹಣ ಬರುವುದಿಲ್ಲ. ಸೋಂಕಿತರು ಚಿಕಿತ್ಸೆ ಪಡೆಯಬೇಕೆಂದು ಸರಕಾರ ಮತ್ತು ಅ ಧಿಕಾರಿಗಳು ಆದ್ಯತೆ ನೀಡಲು, ಸೋಂಕು ಮತ್ತಷ್ಟು ಜನರಿಗೆ ಹಬ್ಬಬಾರದೆಂಬ ಒಂದೇ ಕಾರಣ ಎಂದು ಸ್ಪಷ್ಟಪಡಿಸಿದರು. ಬಿಜೆಪಿ ಮುಖಂಡರಾದ ಅಜಿತ್‌ ಸಾವಂತ್‌, ಆಸ್ಪತ್ರೆಯ ರûಾ ಸಮಿತಿಯ ಮಂಜುನಾಥ್‌, ರಾಜು ಐರಣಿ, ಶಾಂತರಾಜ್‌, ವಿನಾಯಕ, ಆರಾಧ್ಯ, ಆಚಾರ್‌, ಬೆಣ್ಣೆ ವಿಜಯ್‌ಕುಮಾರ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next