Advertisement

ಮಧ್ಯವರ್ತಿ ಹಾವಳಿ ತಡೆಯೇ ಗುರಿ

03:25 PM Feb 21, 2021 | |

ಜಗಳೂರು: ಸರಕಾರವನ್ನೇ ನಿಮ್ಮ ಮನೆ ಬಾಗಿಲಿಗೆ ಕರೆ ತಂದು ಸಮಸ್ಯೆಗಳನ್ನು ಬಗೆಹರಿಸಿ ಅರ್ಹರಿಗೆ ಸೌಲಭ್ಯ ಒದಗಿಸಬೇಕು
ಎಂಬ ಉದ್ದೇಶದಿಂದ ಸರಕಾರ “ಜಿಲ್ಲಾಧಿಕಾರಿಗಳ ನಡೆ ಗ್ರಾಮಗಳ ಕಡೆ’ ಕಾರ್ಯಕ್ರಮ ರೂಪಿಸಿದೆ ಎಂದು ಜಿಲ್ಲಾಧಿ ಕಾರಿ ಮಹಾಂತೇಶ
ಬೀಳಗಿ ಹೇಳಿದರು ತಾಲೂಕಿನ ಬಸವನಕೋಟೆ ಗ್ರಾಮದಲ್ಲಿ ಜಿಲ್ಲಾ ಮತ್ತು ತಾಲೂಕು ಆಡಳಿತದಿಂದ ಹಮ್ಮಿಕೊಳ್ಳಲಾಗಿದ್ದ “ಜಿಲ್ಲಾ ಧಿಕಾರಿಗಳ
ನಡೆ ಗ್ರಾಮಗಳ ಕಡೆ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಕಾರ್ಯಕ್ರಮ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಕಂದಾಯ ಸಚಿವ ಆರ್‌. ಅಶೋಕ್‌ ಅವರ ಕನಸಿನ ಕೂಸಾಗಿದೆ ಎಂದರು.

Advertisement

ಸರಕಾರದ ಎಲ್ಲಾ ಸೌಲಭ್ಯಗಳನ್ನು ಪಡೆಯಲು ಮಧ್ಯವರ್ತಿಗಳ ಹಾವಳಿ ತಪ್ಪಿಸಿ ಅರ್ಹರಿಗೆ ಸೌಲಭ್ಯಗಳನ್ನು ಒದಗಿಸುವ ಸಲುವಾಗಿ ಸರಕಾರ ಈ ಕಾರ್ಯಕ್ರಮ ರೂಪಿಸಿದ್ದು ಅನುಷ್ಠಾನಗೊಳಿಸಲು ಸೂಚನೆ ನೀಡಿದೆ. 1982ರಲ್ಲಿ ನನ್ನ ತಾಯಿ ಪಿಂಚಣಿಗಾಗಿ ಅಲೆದು ಕೊನೆಗೆ ಸಾಕಾಗಿ ನೂರು ರೂ. ಲಂಚ ನೀಡಿ ಪಡೆದಿದ್ದರು. ನನ್ನ ತಾಯಿಗೆ ಆದ ತೊಂದರೆ ಬೇರೆಯವರಿಗೆ ಆಗಬಾರದು ಎಂಬುದು ನನ್ನ ಉದ್ದೇಶ ಎಂದರು.

31 ಸಂಧ್ಯಾ ಸುರಕ್ಷ ಹಾಗೂ ವೃದ್ಧಾಪ್ಯ ವೇತನಕ್ಕೆ ಸಂಬಂಧಿಸಿದ 38 ಅರ್ಜಿಗಳು, ಪೌತಿ ಖಾತೆಗೆ 8 ಅರ್ಜಿಗಳು ಸಲ್ಲಿಕೆಯಾಗಿವೆ. ಅವುಗಳನ್ನು ಸ್ಥಳದಲ್ಲೇ ಇತ್ಯರ್ಥಪಡಿಸಲಾಗುವುದು. ಗ್ರಾಮದಲ್ಲಿ ಬಿಪಿಲ್‌ ಕಾರ್ಡಿಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಇಲ್ಲ. ಆದರೆ ವಿದ್ಯಾರ್ಥಿಗಳು ಬಸ್‌ ವ್ಯವಸ್ಥೆ ಗೆಬೇಡಿಕೆ ಇಟ್ಟಿದ್ದಾರೆ. ಬಸ್‌ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

ತಾಲೂಕಿನಲ್ಲಿ ಖಾಸಗಿ ಬಸ್‌ ಲಾಬಿ ಜಾಸ್ತಿ ಇದ್ದು, ಶಾಸಕರು ಮತ್ತು ನಮಗೆ ಒತ್ತಡ ಹೇರುತ್ತಿದ್ದಾರೆ. ಅದಕ್ಕೆಲ್ಲ ನಾವು ಜಗ್ಗುವುದಿಲ್ಲ. ಬ್ರಹ್ಮಪುತ್ರ ನದಿ ಒಂದು ಹನಿ ನೀರಿನಿಂದ ದೇಶದ ದೊಡ್ಡ ನದಿಯಾದಂತೆ ಈ ಕಾರ್ಯಕ್ರಮ ಸಹ ಯಶಸ್ವಿಯಾಗಲಿದೆ. ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಪಾದರಸದಂತೆ ಕೆಲಸ ಮಾಡುತ್ತಿದ್ದೇವೆ ಎಂದರು. ಶಾಸಕ ಎಸ್‌.ವಿ. ರಾಮಚಂದ್ರ ಮಾತನಾಡಿ, ಸಾರ್ವಜನಿಕರ
ಸಮಸ್ಯೆಗೆ ಸ್ಪಂದಿಸುವಂತಹ ಇಂಥ ಜಿಲ್ಲಾಧಿಕಾರಿ ಪಡೆದಿರುವುದು ದಾವಣಗೆರೆ ಜಿಲ್ಲೆ ಜನರ ಪುಣ್ಯ. ಗಡಿ ಗ್ರಾಮವಾದ ಪುಟ್ಟ ಗ್ರಾಮಕ್ಕೆ ಜಿಲ್ಲಾಡಳಿತವನ್ನೆ ಕರೆ ತಂದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ತಾಲೂಕಿನ 57 ಕೆರೆಗಳಿಗೆ ಶೀಘ್ರದಲ್ಲೇ ನೀರು ಹರಿದು
ಬರಲಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ಫಲಾನುಭವಿಗಳಿಗೆ 8 ಕೋಟಿ ರೂ ಮೊತ್ತದ ಸೌಲಭ್ಯ ಒದಗಿಸಿದ್ದೇವೆ ಎಂದು ತಿಳಿಸಿದರು.

ಗ್ರಾಪಂ ಅಧ್ಯಕ್ಷ ಕೊಟ್ರೇಶ್‌, ಜಿಪಂ ಸಿಇಒ ವಿಜಯ ಮಹಾಂತೇಶ್‌ ದಾನಮ್ಮನವರ್‌, ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್‌, ತಾಪಂ ಸಿಇಒ ಮಲ್ಲಾ ನಾಯ್ಕ, ಸಿಪಿಐ ದುರುಗಪ್ಪ, ಜಿಲ್ಲಾ ಮತ್ತು ತಾಲೂಕು ಮಟ್ಟದ ಅ ಧಿಕಾರಿಗಳು ಹಾಜರಿದ್ದರು.

Advertisement

ಓದಿ : ದೇಣಿಗೆ ನೀಡುವುದಿಲ್ಲವಾದರೆ ಸಿದ್ದು, HDK ಬಾಯಿ ಮುಚ್ಚಿಕೊಂಡು ತೆಪ್ಪಗಿರಲಿ: ಪ್ರಹ್ಲಾದ್ ಜೋಶಿ

Advertisement

Udayavani is now on Telegram. Click here to join our channel and stay updated with the latest news.

Next