Advertisement

ಹುಟ್ಟೂರು ಸ್ವಚ್ಛಗೊಳಿಸಿದ ರೋಯಿಂಗ್‌ ತಾರೆ ಭೊಕಾನಲ್‌

11:41 AM Apr 15, 2020 | keerthan |

ಮುಂಬೈ: ದೇಶದಲ್ಲಿ ಮಹಾರಾಷ್ಟ್ರವೊಂದರಲ್ಲೇ ಅತೀ ಹೆಚ್ಚಿನ  ಕೋವಿಡ್-19 ಪ್ರಕರಣಗಳು ಬೆಳಕಿಗೆ ಬಂದಿದೆ. ಇಂತಹ ಸಂದರ್ಭದಲ್ಲಿ ಒಲಿಂಪಿಯನ್‌ ರೋಯಿಂಗ್‌ ಸ್ಟಾರ್‌ ದತ್ತು ಭೊಕಾನಲ್‌,  ನಾಸಿಕ್‌ನಲ್ಲಿರುವ ತನ್ನೂರನ್ನು ಸ್ವತ್ಛಗೊಳಿಸಿದ್ದಾರೆ.

Advertisement

ದತ್ತು ಭೊಕಾನಲ್‌ ಸ್ವತಃ ಬೀದಿಗಳಿದು ಕ್ರಿಮಿನಾಶಕ ಔಷಧ  ಸಿಂಪಡಿಸಿ ಕೋವಿಡ್-19 ವಿರುದ್ಧ ಸಮರ ಸಾರಿದ್ದಾರೆ. ತನ್ನೂರಿನ ಆಸ್ಪತ್ರೆ, ಪಂಚಾಯತ್‌ ಆವರಣ, ಮೆಡಿಕಲ್ ಶಾಪ್‌, ದೇವಸ್ಥಾನ ಸೇರಿದಂತೆ ಸಾರ್ವಜನಿಕ ವಲಯವನ್ನು ಗೊಬ್ಬರ ಯಂತ್ರದ ಸಹಾಯದಿಂದ ಔಷಧಿ ಸಿಂಪಡಿಸಿ ಸ್ವಚ್ಛಗೊಳಿಸಿದ್ದಾರೆ.

ಇದಕ್ಕೆ ಇವರಿಗೆ ಇವರ ಸ್ನೇಹಿತರು, ಕುಟುಂಬ ವರ್ಗದವರು ಕೂಡ ಸಾಥ್‌ ನೀಡಿದ್ದಾರೆ. ಒಟ್ಟಾರೆ ಆ ಗ್ರಾಮದಲ್ಲಿ 12 ಸಾವಿರಕ್ಕೂ ಅಧಿಕ ಕುಟುಂಬವಿದೆ. ದತ್ತು ಭೋಕಾನಲ್‌ ಏಷ್ಯನ್‌ ಗೇಮ್ಸ್‌ನಲ್ಲಿ ದೇಶಕ್ಕೆ ಚಿನ್ನದ ಪದಕ ತಂದುಕೊಟ್ಟ ಸಾಧನೆ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next