Advertisement
ಅಷ್ಟಾವಕ್ರನೆಂಬ ಋಷಿಯೊಬ್ಬನಿದ್ದ. ಈತನ ಉಲ್ಲೇಖ ಉಪನಿಷತ್ತಿನಲ್ಲಿ, ಮಹಾ ಭಾರತದಲ್ಲಿ ಬರುತ್ತದೆ. ಈತನ ಹೆಸರೇ ಹೇಳು ವಂತೆ ದೇಹದಲ್ಲಿ ಒಟ್ಟು ಎಂಟು ಕಡೆ ವಕ್ರತೆ (ಅಂಗವೈಕಲ್ಯ) ಇತ್ತು.
******
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ದತ್ತಾತ್ರೇಯ ರಾಮಚಂದ್ರ ಬೇಂದ್ರೆ (1896-1981) ಕಾವ್ಯ ನಾಮ ಅಂಬಿಕಾತನಯದತ್ತ. ಸಾಹಿತಿ, ಕವಿಯಾಗಿ ಪ್ರಸಿದ್ಧಿ ಹೊಂದಿದ್ದರೂ ಸ್ವಾತಂತ್ರ್ಯ ಹೋರಾಟ, ಇದೇ ಕಾರಣಕ್ಕಾಗಿ ಉದ್ಯೋಗ ನಷ್ಟ ಹೀಗೆ ನೈತಿಕ ಜೀವನದ ಹಾದಿಯಲ್ಲಿ ಬಡತನವನ್ನು ಇಷ್ಟಪಟ್ಟು ಅನುಭವಿಸಿದವರು. ಬೇಂದ್ರೆಯವರನ್ನು ಒಮ್ಮೆ ಕೇಂದ್ರ ಸಚಿವ ದಾತಾರ್ ಧಾರವಾಡದ ಪ್ರವಾಸಿ ಮಂದಿರದಲ್ಲಿರುವಾಗ ಜರೂರಾಗಿ ಭೇಟಿ ಆಗುವಂತೆ ತಿಳಿಸಿದರು. ಸಚಿವರ ಮೊಕ್ಕಾಂ ಅಂದರೆ ಕೇಳಬೇಕೆ? ಈಗಲೂ ಸಚಿವರು ಬರುತ್ತಾರೆಂದರೆ ಜಿಲ್ಲಾಡಳಿತ ಇತರೆಲ್ಲ ಕೆಲಸಗಳನ್ನು ಬದಿಗಿರಿಸಿ “ಹುಜೂರ್ ಸಾರ್’ ಎನ್ನುತ್ತದೆ. ದೊಡ್ಡ ಜನಸಮೂಹ ಸೇರಿತ್ತು. ಸಚಿವರ ಕಾರ್ಯದರ್ಶಿ ಠಾಕುಠೀಕಾಗಿ “ನಿಮ್ಮ ಹೆಸರೇನು?’ ಎಂದು ಕೇಳಿದರು. “ಬೇಂದ್ರೆ ಅಂತಾರ’ ಎಂದರು. “ಸಚಿವರನ್ನು ಕಾಣುವ ಉದ್ದೇಶ?’ ಎಂದಾಗ “ಅವರಿಂದಲೇ ತಿಳಿಯಿರಿ’ ಎಂದದ್ದು ಕಾರ್ಯದರ್ಶಿಗೆ ತಬ್ಬಿಬ್ಟಾಯಿತು. ಇವರ ಧ್ವನಿ ಕೇಳಿ ಸಚಿವ ದಾತಾರರೇ ಹೊರಬಂದು ಕೈ ಮುಗಿದು, ಕೈಕುಲುಕಿ ಒಳಕ್ಕೆ ಕರೆದುಕೊಂಡು ಹೋದರು. 15-20 ನಿಮಿಷಗಳ ಬಳಿಕ ಸಚಿವರು ಬೇಂದ್ರೆಯವರನ್ನು ಬೀಳ್ಕೊಟ್ಟರು.
Related Articles
Advertisement
“ನೋಡೀ ಅವಾ, ಪಾಲೀಶ್ ಆಗ್ಬೇಕು ಅಂತಾನ. ಇವ ಮಾತ್ರ ಅಲ್ಲ, ಎಲ್ಲರೂ ಪಾಲೀಶ್ ಆಗ್ಬೇಕು ಅಂತಾರ. ಪಾಲೀಶ್ ಚಪ್ಪಲಿಗಾ ಗ್ಬೇಕಂತಾರ. ಮಂದೀ ತಾವು ಮಾತ್ರ ಪಾಲೀಶ್ ಆಗೋ ಹಂಗಿಲ್ಲ’ ಎಂದು ಹೇಳಿದ ಬೇಂದ್ರೆ, “ಚಪ್ಪಲಿಗೆ ಪಾಲೀಶ್ ಆದರ ನಮಗೂ ಕಿಮ್ಮತ್ ಏರ್ತದ ಅಂತದ ಲೋಕ. ಈಗ ಈ ಚಪ್ಪಲೀ ಕಡೀಲಿಂದ, ಬೇಂದ್ರೆ ಕಿಮ್ಮತ್ ಕೂಡ ಏರ್ಲಿಕ್ ಹತ್ಯಾದ’ ಎಂಬ ಗೂಢಾರ್ಥದ ಮಾತನ್ನೂ ತೇಲಿಸಿಬಿಟ್ಟರು. ಇವರ ವ್ಯಕ್ತಿತ್ವ ಕಂಡೇ “ಬೆಂದರೆ ಬೇಂದ್ರೆಯಾದಾನು’ ಎಂದು ಸಾಹಿತಿ ಕುಂದಾಪುರ ತಾಲೂಕು ಬವಳಾಡಿ ಮೂಲದ ಬಿ.ಎಚ್.ಶ್ರೀಧರ್ ಉದ್ಗರಿಸಿದ್ದು.******
ಅಷ್ಟಾವಕ್ರನ ಮಾತಿಗೂ ಅಂಬಿಕಾತನಯದತ್ತರ ಮಾತಿಗೂ ಲಾಗು ಆಗುತ್ತದೆ. ಚಪ್ಪಲಿ ಪಾಲೀಶ್‌ಗೂ ಸಮಾಜ ಕೊಡುವ ಘನತೆ, ಗೌರವಕ್ಕೂ ವ್ಯಂಗ್ಯಾರ್ಥವನ್ನು ಬೇಂದ್ರೆ ಬಹಿರಂಗಪಡಿಸಿದ್ದರು. ಅನೇಕ ವರ್ಷಗಳು ಸಂದು ಹೋದಂತೆ ಸಾಕಷ್ಟು ಬೆಳವಣಿಗೆಗಳೂ ಆಗುತ್ತವೆ. ಕಾರು, ಒಡವೆ, ಬಂಗ್ಲೆ, ಹುದ್ದೆ, ಅಧಿಕಾರ, ಕೀರ್ತಿ, ಸಂಪತ್ತು ಇತ್ಯಾದಿ ಪಾಲೀಶ್‌ಗಳಿಂದಾಗಿ ನಮ್ಮ ಕಿಮ್ಮತ್ತು ಏರುತ್ತದೆ ಎಂದು ತಪ್ಪಾಗಿ ಭಾವಿಸಿದ ಸ್ಪರ್ಧಾಲೋಕದಲ್ಲಿದ್ದೇವೆ. ತಿನ್ನುವ ಅಕ್ಕಿಯನ್ನೂ ಪಾಲೀಶ್‌ಗಿರಿ ಬಿಟ್ಟಿಲ್ಲ. ಇವೆರಡೂ ತರಹದ ಪಾಲೀಶ್ ಕಾಯಿಲೆಗಳನ್ನು ತಂದೊಡುತ್ತಿವೆ. ಈಗ ಹೊರಗಿನ ಕ್ಲೀನಿಂಗ್ ಪ್ರಜ್ಞೆ ಕೆಲವರಲ್ಲಿಯಾದರೂ ಮೂಡಿದೆ. ಇದರಿಂದಾಗಿ ಮನೆ ಆವರಣದ ಬದಲು ತೋಡು, ಕಡಲು, ನದಿ, ಚರಂಡಿಗಳಲ್ಲಿ ಮತ್ತು ಹೊರಗೂ ಪ್ಲಾಸ್ಟಿಕ್ ತ್ಯಾಜ್ಯಗಳು ಬೆಳೆಯುತ್ತಿವೆ. ಒಟ್ಟಾರೆ ಒಳಗೆ ಕ್ಲೀನಿಂಗ್ ಪ್ರಜ್ಞೆ ಮೂಡುವುದು ಕಡಿಮೆ. ಒಳಗೆ ಪಾಲೀಶ್ ಆಗದೆ ಹೊರಗೇ ಆಗುತ್ತಿದ್ದರೆ ಆ ಇಂಬ್ಯಾಲೆನ್ಸ್ ಮುಂದೇನಾದೀತು? ಇಂತಹ ಅನುಸಂಧಾನ ನಿತ್ಯ ನಡೆಯಬೇಕಾಗಿದೆ. ಪುರಂದರದಾಸರು “ಮನವ ಶೋಧಿಸಬೇಕು ನಿಚ್ಚ (ನಿತ್ಯ)| ದಿನದಿನ ಮಾಡುವ ಪಾಪ ಪುಣ್ಯದ ವೆಚ್ಚ||’ ಎಂದು ಘೋಷಿಸಿದಂತೆ, ನಾವೂ ನಿತ್ಯ ಘೋಷಿಸಿಕೊಳ್ಳಬೇಕು, ಅದರಂತೆ ಜೀವನವನ್ನು ಪೋಷಿಸಿಕೊಳ್ಳಬೇಕು. ಇದು ಒಳಗಿನ ಪಾಲೀಶ್‌ಗಾಗಿ… -ಮಟಪಾಡಿ ಕುಮಾರಸ್ವಾಮಿ