ಬೆಂಗಳೂರು: ಡಟ್ಸನ್ ಭಾರತದಲ್ಲಿ ತನ್ನ ಹೊಸ ರೆಡಿ-ಗೋ ಕಾರನ್ನು ಬಿಡುಗಡೆ ಮಾಡಿದೆ. ಈ ಹೊಸ ರೆಡಿ ಗೋ ಸ್ಪೋರ್ಟಿಯಾಗಿದ್ದು, ಎಲ್ಲಾ ಮಟ್ಟದಲ್ಲಿಯೂ ಹೊಚ್ಚ ಹೊಸದಾಗಿ ಬೋಲ್ಡ್ ಆಗಿದೆ. ಪ್ರೀಮಿಯಂ ಮತ್ತು ವೈಶಿಷ್ಟ್ಯತೆಗಳನ್ನು ಮತ್ತಷ್ಟು ಆಕರ್ಷಣೀಯಗೊಳಿಸಲಾಗಿದೆ.
ಹ್ಯಾಚ್ ಬ್ಯಾಕ್ ನ ಸ್ಲೀಕ್ ಮತ್ತು ಬೋಲ್ಡ್ ಲುಕ್ ನಿಂದಾಗಿದೆ ಈ ಕಾರು ನೋಡುಗರ ಮತ್ತು ಮಾಲೀಕರಿಗೆ ಮುದ ನೀಡಲಿದೆ. ಇದರಲ್ಲಿನ ಎಲ್ ಆಕಾರದ ಡಿಆರ್ ಎಲ್ ಗಳು, ಸಿಲ್ವರ್ ಡೆಕೋರೇಷನ್ ನೊಂದಿಗೆ ಸ್ಲೀಕ್ ಹೆಡ್ ಲ್ಯಾಂಪ್ ಗಳು, ಎಲ್ಇಡಿ ಫಾಗ್ ಲ್ಯಾಂಪ್ ಗಳು, ಪೆಂಟಾಬ್ಲೇಡ್ ಡ್ಯುಯಲ್ ಟೋನ್ ವ್ಹೀಲ್ ಕವರ್ ನೊಂದಿಗೆ 14 ಇಂಚಿನ ವ್ಹೀಲ್ ಗಳು, ಎಲ್ಇಡಿ ಸಿಗ್ನೇಚರ್ ಟೇಲ್ ಲ್ಯಾಂಪ್ ಗಳು ಮತ್ತು ಫ್ಯಾಬ್ರಿಕ್ ನೊಂದಿಗೆ ಡೋರ್ ಟ್ರಿಮ್ ಗಳು ಸೇರಿದಂತೆ ಹಲವಾರು ವೈಶಿಷ್ಟ್ಯತೆಗಳನ್ನು ಒಳಗೊಂಡಿದೆ.
ಹೊಸ ಕಾರು ಬಿಡುಗಡೆ ಬಗ್ಗೆ ಮಾತನಾಡಿದ ನಿಸಾನ್ ಮೋಟರ್ಸ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಶ್ರೀವಾಸ್ತವ ಅವರು, ನ್ಯೂ ಡಟ್ಸನ್ ರೆಡಿ ಗೋನೊಂದಿಗೆ ನಾವು ಅತ್ಯುತ್ತಮ ಗುಣಮಟ್ಟದ ಉತ್ಪನ್ನವನ್ನು ಪರಿಚಯಿಸುತ್ತಿದ್ದೇವೆ. ಇದರಲ್ಲಿ ಜಪಾನಿನ ತಂತ್ರಜ್ಞಾನ ಅಳವಡಿಕೆ ಮಾಡಲಾಗಿದ್ದು, ಬೆಳೆಯುತ್ತಿರುವ ಯುವ ಭಾರತದ ನಿರೀಕ್ಷೆಗಳನ್ನು ಪೂರೈಸುವ ನಿಟ್ಟಿನಲ್ಲಿ ತಂತ್ರಜ್ಞಾನದ ವೈಶಿಷ್ಟ್ಯತೆಗಳನ್ನು ನೀಡಲಾಗುತ್ತಿದೆ.
ಪ್ರಗತಿದಾಯಕ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ನಾವು ಡಟ್ಸನ್ ಉತ್ಪನ್ನಗಳನ್ನು ಮೌಲ್ಯಾಧಾರಿತವನ್ನಾಗಿಸುವತ್ತ ಗಮನಹರಿಸಿದ್ದೇವೆ’’ ಎಂದು ತಿಳಿಸಿದರು.
ಅತ್ಯುತ್ತಮ ದರ್ಜೆಯ ವೈಶಿಷ್ಟ್ಯತೆಗಳು
ಹ್ಯಾಚ್ ಬ್ಯಾಕ್ 187 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು ರಿಯರ್ ನೀ ರೂಂ ಕಂಫರ್ಟ್ ಅನ್ನು ನೀಡಲಿದೆ. ಹೊಸ ರೆಡಿ ಗೋ ಅತ್ಯುತ್ಕೃಷ್ಠವಾದ ದರ್ಜೆಯದ್ದಾಗಿದ್ದು, ಭಾರತೀಯ ರಸ್ತೆಗಳಲ್ಲಿ ಅತ್ಯುತ್ತಮ ರೀತಿಯಲ್ಲಿ ಸಾಗಬಹುದಾದ ಅನುಭವವನ್ನು ನೀಡಲಿದೆ. ಧ್ವನಿ ಗುರುತಿಸುವ 8 ಇಂಚಿನ ಟಚ್ ಸ್ಕ್ರೀನ್ ನೊಂದಿಗೆ ಆಧುನಿಕ ಇನ್ ಫೋನ್ಮೆಂಟ್ ಸಿಸ್ಟಂ, ಆ್ಯಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್ ಪ್ಲೇ ಯಂತಹ ಹಲವು ವೈಶಿಷ್ಟ್ಯತೆಗಳನ್ನು ಹೊಂದಿದೆ. ಆನ್ ಬೋರ್ಡ್ ನಲ್ಲಿ ಡ್ಯುಯಲ್ ಟೋನ್ ಇನ್ ಸ್ಟ್ರುಮೆಂಟ್ ಪೆನಲ್ ಇರಲಿದ್ದು, ಇದು ಪ್ರೀಮಿಯಂ ಬ್ರಶ್ಡ್ ಗನ್ ಮೆಟಲ್ ಫಿನಿಶಿಂಗ್ ಹೊಂದಿದೆ.
ಇನ್ನು ಸುರಕ್ಷತಾ ವೈಶಿಷ್ಟ್ಯತೆಗಳಲ್ಲಿ ಕ್ರಾಶ್ ರೆಸಿಸ್ಟೆಂಟ್ ಬಾಡಿ ಸ್ಟ್ರಕ್ಚರ್ ಇರಲಿದೆ. ಇದು ಅಪಘಾತಗಳಿಂದ ಪ್ರಯಾಣಿಕರಿಗೆ ರಕ್ಷಣೆ ನೀಡುತ್ತದೆ. ಅಂದರೆ, ಫ್ರಂಟಲ್ ಆಫ್ ಸೆಟ್ ಇಂಪ್ಯಾಕ್ಟ್, ಸೈಡ್ ಇಂಪ್ಯಾಕ್ಟ್, ಪೆಡಸ್ಟ್ರಿಯನ್ ಪ್ರೊಟೆಕ್ಷನ್ ಕಾಂಪ್ಲಿಯೆಂಟ್, ರೆಟ್ರಾಕ್ಟಿವ್ ಫಂಕ್ಷನ್ ನೊಂದಿಗೆ ರಿಯರ್ ಸೀಟ್ ಬೆಲ್ಟ್, ಎರಡು ಏರ್ ಬ್ಯಾಗ್ ಗಳು ಮತ್ತು ಪ್ರೊಜೆಕ್ಷನ್ ಗೈಡ್ ನೊಂದಿಗೆ ರಿಯರ್ ವ್ಯೂ ಸೌಲಭ್ಯಗಳನ್ನು ಒಳಗೊಂಡಿದೆ.
ಈ ಹೊಸ ರೆಡಿ ಗೋ ಆರು ಶ್ರೇಣಿಗಳಲ್ಲಿ ಲಭ್ಯವಿದೆ. ನಾಲ್ಕು 0.8ಎಲ್ ಮ್ಯಾನ್ಯುವಲ್ ಟ್ರಾನ್ಸ್ ಮಿಷನ್ ಶ್ರೇಣಿಗಳಾದ – ಡಿ, ಎ, ಟಿ ಮತ್ತು ಟಿ(ಒ) ಹಾಗೂ ಎರಡು 1.0ಎಲ್ ಶ್ರೇಣಿಗಳಾದ ಮ್ಯಾನ್ಯುವಲ್ ಟ್ರಾನ್ಸ್ ಮಿಷನ್ ಮತ್ತು ಸ್ಮಾರ್ಟ್ ಡ್ರೈವ್ ಆಟೋ (ಎಎಂಟಿ) ಟಿ (ಒ).
ಹೊಸ ರೆಡಿ ಗೋ ಆರು ಬಣ್ಣಗಳಲ್ಲಿ ಲಭ್ಯವಿದೆ. ಅದರಲ್ಲಿ ಹೊಸದಾಗಿ ಸ್ಯಾಂಡ್ ಸ್ಟೋನ್ ಬ್ರೌನ್ (ಹೊಸ), ವಿವಿಡ್ ಬ್ಲೂ (ಹೊಸ), ಬ್ರೌನ್ಝ್ ಗ್ರೇ, ಓಪಲ್ ವೈಟ್ ಮತ್ತು ಫೈರ್ ರೆಡ್ ಬಣ್ಣಗಳಲ್ಲಿ ಲಭ್ಯವಿದೆ. ಇದಲ್ಲದೇ ಡಟ್ಸನ್ ಎರಡು ವರ್ಷಗಳು/ಅನಿಯಮಿತ ಕಿಲೋಮೀಟರ್ ವಾರಂಟಿಯನ್ನು ನೀಡಲಿದೆ. ಇದನ್ನು 1850 ರೂಪಾಯಿ ಪಾವತಿಸುವುದರೊಂದಿಗೆ ಐದು ವರ್ಷಗಳವರೆಗೆ ವಿಸ್ತರಿಸಿಕೊಳ್ಳಬಹುದಾಗಿದೆ.
ಖರೀದಿದಾರರು ಎರಡು ವರ್ಷಗಳ ರೋಡ್ ಸೈಡ್ ನೆರವಿನ ಸೇವೆಗಳ ಚಂದಾದಾರಿಕೆಯನ್ನು ಉಚಿತವಾಗಿ ಪಡೆದುಕೊಳ್ಳಲಿದ್ದಾರೆ. ಈ ವಾರಂಟಿ ಮತ್ತು ರೋಡ್ ಸೈಡ್ ನೆರವು ದೇಶದ 1500 ಕ್ಕೂ ನಗರಗಳಲ್ಲಿ ಲಭ್ಯವಿದೆ.