Advertisement

ಅಣ್ಣೂರಲ್ಲಿ ಗ್ರಾಮ ದೇವತೆಗಳ ಉತ್ಸವ

04:43 PM Oct 16, 2021 | Team Udayavani |

ಭಾರತೀನಗರ: ಭಾರತೀನಗರ ವ್ಯಾಪ್ತಿಯ ಅಣ್ಣೂರು ಗ್ರಾಮದಲ್ಲಿ ಶತ ಶತಮಾನ ಗಳಿಂ ದಲೂ ಮಿನಿ ದಸರಾದಂತೆ ನಡೆದುಕೊಂಡು ಬರುತ್ತಿದ್ದ ಗ್ರಾಮ ದೇವತೆಗಳ ಉತ್ಸವವನ್ನು ಅದ್ಧೂರಿಯಾಗಿ ಮಾಡಲಾಯಿತು.

Advertisement

ಅಣ್ಣೂರು ಗ್ರಾಮದಲ್ಲಿ ತ್ರಿಮೂರ್ತಿ ಗಳಾದ ಬ್ರಹ್ಮ, ವಿಷ್ಣು, ಈಶ್ವರ ನೆಲೆಯಾಗಿದೆ. ಹೊನವಾಸದಲ್ಲಿದ್ದ ಪಾಂಡವರು ಅಜ್ಞಾತ ವಾಸದಲ್ಲಿದ್ದ ಸಂದರ್ಭದಲ್ಲಿ ಈ ಗ್ರಾಮದಲ್ಲಿ ಬಂದು ನೆಲೆಸಿದ್ದರು. ಯುದ್ಧ ಎದುರಾದಾಗ ಇಲ್ಲಿ ತ್ರೀಮೂರ್ತಿಗೆ ಪೂಜೆ ಸಲ್ಲಿಸಿ ಬನ್ನಿಮಂಟಪದಲ್ಲಿ ಇರಿಸಲಾಗಿದ್ದ ಆಯುಧ ತೆಗೆದು ಯುದ್ಧ ಮಾಡಿದ್ದರು ಎನ್ನಲಾಗಿದೆ. ಇದರಿಂದ ಶಾಂತಿಗಾಗಿ ವಿಜಯ ದಶಮಿ ಹಬ್ಬವನ್ನು ಗ್ರಾಮಸ್ಥರು ಸಂಪ್ರಾದಾಯಕ ವಾಗಿ ಆಚರಿಸಿಕೊಂಡು ಬರುತ್ತಾರೆ.

ಇದನ್ನೂ ಓದಿ;- ಗೋವಾ: ದಿನ ಕಳೆದಂತೆ ಹೆಚ್ಚಾಗುತ್ತಿದೆ ಪ್ರವಾಸಿಗರ ಸಂಖ್ಯೆ

ಗ್ರಾಮ ದೇವತೆಗಳಿಗೆ ವಿಶೇಷ ಪೂಜೆ: ಪ್ರತಿ ವರ್ಷ ವಿಜಯ ದಶಮಿಯಂದು ಅಣ್ಣೂರು ಗ್ರಾಮದಲ್ಲಿ ಗ್ರಾಮ ದೇವತೆ ಗ ಳಾದ ಮಾರಮ್ಮ, ಅಟ್ಟಿಮಾರಮ್ಮ, ಸಿದ್ದೇಶ್ವರ ಸತ್ತಿಗೆ, ಅಮೃತೇಶ್ವರ ದೇವರ ಖುರ್ಜು ಪಟಗಳು ಹಾಗೂ ಚೌಡಮ್ಮನ ಪೂಜೆ ಸತ್ತಿಗೆಗಳೊಂದಿಗೆ ಬನ್ನಿ ಮಂಟಪಕ್ಕೆ ತೆರಳಿ ವಿಶೇಷ ಪೂಜೆ ನೆರವೇರಿಸಲಾಯಿತು.

ಸ್ವಾತಂತ್ರ್ಯ ಪೂರ್ವದಲ್ಲಿ ಅಣ್ಣೂರು ಗ್ರಾಮದ ಮಹಾಕಾಳಮ್ಮ ದೇವಿಯನ್ನು ಮೈಸೂರು ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್‌ ಕರೆಯಿಸಿದ್ದ ಸಂದರ್ಭ ಆ ದೇವಿಗೆ ಅರಮನೆಯ ಬಿರುದೊಂದನ್ನು ನೀಡಿದ್ದರು. ಅದನ್ನು ದೇವಿಗೆ ಸೇರಿದ ನಂದಿ ಧ್ವಜಕ್ಕೆ ಅಲಂಕರಿಸಿ ಕೊಂಡು ಕೊರವಂಜಿ ದೇವಿಗೆ ಸೇರಿದ ಕತ್ತಿಗಳನ್ನು ಅಂದಿನಿಂದ ಇಲ್ಲಿಯವರೆಗೂ ನಿರಂತರವಾಗಿ ಪೂಜಿಸಿಕೊಂಡು ಬರುತ್ತಿರುವ ಪ್ರತೀತಿ ಇದೆ.

Advertisement

ಬಾಯಿಬೀಗ: ಸಂಪ್ರದಾಯದಂತೆ ಅಟ್ಟಿ ಮಾರಮ್ಮ ದೇಗುಲದ ಯಜಮಾನ ರಿಂದ ಹರಕೆಯೊತ್ತ ಪುರುಷ, ಮಹಿಳೆಯರು ಸೇರಿದಂತೆ ಸಾವಿರಕ್ಕೂ ಹೆಚ್ಚು ಭಕ್ತರು ತಿಮ್ಮಪ್ಪ ದೇವರ ಸನ್ನಿಧಿಯಲ್ಲಿ ಬಾಯಿ ಬೀಗವನ್ನು ಹಾಕಿಸಿಕೊಂಡಿದ್ದರು. ನಂತರ ಎಲ್ಲಾ ಭಕ್ತರು ದೇವತೆಗಳೊಡಗೂಡಿ ಮಹಾಕಾಳಮ್ಮ ದೇವಾಲಯಗಳಲ್ಲಿ ಪ್ರದಕ್ಷಿಣೆ ಹಾಕಿ ಬಂದು ಬನ್ನಿ ಮಂಟಪಕ್ಕೆ ತೆರಳಿ ಪೂಜೆ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next