Advertisement

ಹತ್ತು ದಿನ ಝಗಮಗಿಸುವ ದೀಪಾಲಂಕಾರ

04:38 PM Oct 11, 2020 | Suhan S |

ಮೈಸೂರು: ದಸರಾ ಉತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ದೀಪಾಲಂಕಾರವನ್ನು 10 ದಿನಗಳಿಗೆ ಸೀಮಿತ ಗೊಳಿಸಿರುವುದಲ್ಲದೇ, ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿದೆ. ಕೋವಿಡ್‌-19ಹಿನ್ನೆಲೆಈ ಬಾರಿ ಸರಳದಸರಾಆಚರಣೆಗೆ ಮುಂದಾಗಿರುವ ಸರ್ಕಾರ ದಸರಾ ದೀಪಾಲಂಕಾರವನ್ನು ನಗರದ ಪ್ರಮುಖ ರಸ್ತೆ ಹಾಗೂ ವೃತ್ತಗಳಿಗೆ ಸೀಮಿತಗೊಳಿಸಿರುವುದಲ್ಲದೇ, 10 ದಿನಗಳಿಗಷ್ಟೇ ಸೀಮಿತ ಮಾಡಲಾಗಿದೆ. ಜೊತೆಗೆ ಪ್ರತಿ ವರ್ಷ ಅರಮನೆ ಆವರಣದಲ್ಲಿ ನಡೆಯುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸ್ಥಳೀಯ ಕಲಾವಿದರಿಗಷ್ಟೇ ಅವಕಾಶ ಇರಲಿದ್ದು, 50 ಜನರು ಮೀರದಂತೆ ಈ ಕಾರ್ಯಕ್ರಮ ನಡೆಯಲಿದೆ.

Advertisement

ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾದ ಪ್ರಮುಖಆಕರ್ಷಣೆ ದೀಪಾಲಂಕಾರವಾಗಿದ್ದು, ನಗರದೆಲ್ಲೆಡೆ ದೀಪಾಲಂಕಾರದಿಂದ ಮೈಸೂರು ದಸರಾದ ಸಂಭ್ರಮ ಕಳೆಗಟ್ಟುತ್ತಿತ್ತು. ಆದರೆ, ಈ ಬಾರಿ ಕೋವಿಡ್ ಎಲ್ಲದಕ್ಕೂ ಅಡ್ಡಿಯನ್ನುಂಟು ಮಾಡಿದೆ. ಹೀಗಾಗಿ 10 ದಿನಗಳು ಮಾತ್ರ ದಸರಾ ದೀಪಾಲಂಕಾರ ನಡೆಯಲಿದೆ. ಪ್ರತಿದಿನ ಕೇವಲ ಎರಡೇ ಗಂಟೆಗಳು ಮಾತ್ರ ದೀಪಾಲಂಕಾರ ಝಗಮಗಿಸಲಿದ್ದುಈಬಗ್ಗೆ ಸರ್ಕಾರಕ್ಕೆ ತಾಂತ್ರಿಕ ಸಲಹಾ ಸಮಿತಿಯ ಶಿಫಾರಸು ಮಾಡಿದೆ. ಸಂಜೆ 7ರಿಂದ 9 ಗಂಟೆಗಳವರಗೆ ಮಾತ್ರವಿದ್ಯುತ್‌ ದೀಪಾಲಂಕಾರ ರಂಜಿಸಲಿದ್ದು,ಕೆಲವು ಆಯ್ದ ಸ್ಥಳಗಳಲ್ಲಿ ಮಾತ್ರ ದೀಪಾಲಂಕಾರಕ್ಕೆ ಅವಕಾಶ ನೀಡಲಾಗಿದೆ. ದೀಪಾಲಂಕಾರ ವೀಕ್ಷಣೆ ಮಾಡಲು ಬರುವವರಿಗೆಕೋವಿಡ್‌ ನಿಯಮಗಳು ಕಡ್ಡಾಯ ವಾಗಿದ್ದು, ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ ಗೊಳಿಸಲಾಗಿದೆ. ದಸರಾ ಅಂಗವಾಗಿ ಅರಮನೆ ಆವರಣದಲ್ಲಿ 8 ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ತಾಂತ್ರಿಕ ಸಲಹಾ ಸಮಿತಿ ತಂಡ ನೀಡಿದ ವರದಿ ಆಧಾರದ ಮೇಲೆ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ.

ದಸರಾ ಹಿನ್ನೆಲೆ ಅ.17ರಿಂದ 24 ರವರಗೆ ನಗರದಲ್ಲಿ ನವರಾತ್ರಿ ಸಂಭ್ರಮ ಮನೆಮಾಡಲಿದ್ದು, ಇದರ ಜೊತೆಗೆ ಅರಮನೆ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.ಕಾರ್ಯಕ್ರಮದಲ್ಲಿ ಸ್ಥಳೀಯಕಲಾ ತಂಡಗಳಿಗೆ ಮಾತ್ರ ಅವಕಾಶ ನೀಡಲಾಗಿದ್ದು, 8 ದಿನಗಳವರೆಗೆ ಕೇವಲ 2ಗಂಟೆಗಳ ಕಾಲ ಮಾತ್ರ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ತಾಂತ್ರಿಕ ಸಲಹಾ ಸಮಿತಿ ಶಿಫಾರಸು ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next