Advertisement

ಅಲೋಕದಲ್ಲಿ ದಸರಾ ಗಜಪಡೆ ವಿಶ್ರಾಂತಿ

12:23 PM Aug 14, 2017 | Team Udayavani |

ಮೈಸೂರು: ಅದ್ಧೂರಿ ಕಾರ್ಯಕ್ರಮದೊಂದಿಗೆ ಮೈಸೂರಿಗೆ ಕರೆತರಲಾದ ದಸರಾ ಮಹೋತ್ಸವದ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲಿರುವ ಗಜಪಡೆಯ ಮೊದಲ ತಂಡದ ಎಂಟು ಆನೆಗಳು ನಗರದ ಹೊರವಲಯದ ಅಲೋಕದಲ್ಲಿ ವಿಶ್ರಾಂತಿಯಲ್ಲಿವೆ.

Advertisement

ದಸರಾ ಗಜಪಡೆಯ ಕ್ಯಾಫ್ಟನ್‌ ಅರ್ಜುನ ನೇತೃತ್ವದಲ್ಲಿ ಗಜಪಯಣದೊಂದಿಗೆ ಮೈಸೂರಿಗೆ ಕರೆತರಲಾದ ಬಲರಾಮ, ಅಭಿಮನ್ಯು, ಕಾವೇರಿ, ವಿಜಯ, ವರಲಕ್ಷ್ಮೀ ಹಾಗೂ ಕೆ.ಗುಡಿ ಮತ್ತು ಮತ್ತಿಗೋಡು ಆನೆ ಶಿಬಿರದಿಂದ ನೇರವಾಗಿ ಕರೆತರಲಾದ ಗಜೇಂದ್ರ ಹಾಗೂ ಭೀಮ ಆನೆಗಳು ಈ ತಂಡವನ್ನು ಸೇರಿಕೊಂಡಿದ್ದು, ಐದು ದಿನಗಳ ವಿಶ್ರಾಂತಿಯಲ್ಲಿರಲಿವೆ.

ಗಜಪಡೆಯ ಜತೆಗೆ ಆಗಮಿಸಿರುವ ಅರ್ಜುನನ ಮಾವುತ ಸಣ್ಣಪ್ಪ, ಕಾವಡಿ ವಿನು, ಬಲರಾಮನ ಮಾವುತ ತಿಮ್ಮ, ಕಾವಾಡಿ ಗೋಪಾಲ, ಅಭಿಮನ್ಯುವಿನ ಮಾವುತ ವಸಂತ, ಕವಾಡಿ ರಾಜು, ಗಜೇಂದ್ರನ ಮಾವುತ ಶಂಕರ, ಕಾವಾಡಿ ಸುನಿಲ್‌, ಭೀಮ ಮಾವುತ ರಾಧಾಕೃಷ್ಣ, ಕವಾಡಿ ರಾಜು, ಕಾವೇರಿಯ ಮಾವುತ ದೋಬಿ, ಕಾವಾಡಿ ರಘು, ವಿಜಯ ಆನೆಯ ಮಾವುತ ಭೋಜಪ್ಪ, ಕವಾಡಿ ದೊರೆಯಪ್ಪ, ವರಲಕ್ಷ್ಮೀಯ ಮಾವುತ ಗುಂಡ, ಕವಾಡಿ ಚಿನ್ನ ಮತ್ತು ಅವರ ಕುಟುಂಬ ಸದಸ್ಯರು ಅಲೋಕ ಆವರಣದಲ್ಲಿ ಬೀಡು ಬಿಟ್ಟಿದ್ದಾರೆ.

ಅರಣ್ಯ ಇಲಾಖೆಯ ಲಾರಿಗಳಲ್ಲಿ ಸೊಪ್ಪು ತಂದು ಆನೆಗಳಿಗೆ ಮೇವು ಒದಗಿಸಿದ್ದು, ಆ.17ರಂದು ಅರಮನೆಯ ಜಯಮಾರ್ತಾಂಡ ದ್ವಾರದಲ್ಲಿ ಶಾಸ್ತ್ರೋಕ್ತವಾಗಿ ಗಜಪಡೆಯನ್ನು ಬರಮಾಡಿಕೊಳ್ಳಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next