ಹುಬ್ಬಳ್ಳಿ: ವಕ್ಫ್ ಗೆಜೆಟ್ ನೋಟಿಫಿಕೇಶನ್ ಮಾಡಿರುವುದರಲ್ಲಿ ಬಿಜೆಪಿ ಪಾಲಿದೆ. ಅವರೇ ನೋಟಿಸ್ ಕೊಟ್ಟು ನಾಟಕ ಮಾಡುತ್ತಿದ್ದಾರೆ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ಹರಿಹಾಯ್ದರು.
ರವಿವಾರ(ನ3) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಕ್ಫ್ ವಿಚಾರವಾಗಿ ಮೊದಲು ಪತ್ರ ಬರೆದಿದ್ದು ಬಿಜೆಪಿಯವರು. ಇದೀಗ ಚುನಾವಣೆ ಇದೆ ಎಂದು ನಾಟಕ ಮಾಡುತ್ತಿದ್ದಾರೆ. ಇದು ಕಪಟ ರಾಜಕೀಯ ನಾಟಕ. ಈ ವಿಚಾರವಾಗಿ ಜನರ ದಾರಿ ತಪ್ಪಿಸುತ್ತಿದ್ದಾರೆ. ಕೇವಲ ಹಿಂದೂ ರೈತರು ಅಲ್ಲ, ಮುಸ್ಲಿಂ ರೈತರ ಜಮೀನಿಗೂ ನೋಟಿಸ್ ಕೊಡಲಾಗಿದೆ ಎಂದರು.
ವಕ್ಫ್ ಹಾಗೂ ಮಠ ರಾಷ್ಟ್ರೀಕರಣ ಮಾಡಿ ಅನ್ನುವುದುಅಪಾಯಕಾರಿ. ನಾವು ಮಾತನಾಡುವುದಕ್ಕೆ ಹೋದರೆ ಇವರ ಏನೇನೋ ಮಾತಾಡುತ್ತಾರೆ. ನಾವು ಎಲ್ಲಾ ಮಾತನಾಡಬೇಕಾಗುತ್ತದೆ ಎಂದರು.
ಗದಗ ಜಿಲ್ಲೆಯಲ್ಲಿ ಯಾರಿಗೂ ನೋಟಿಸ್ ಕೊಟ್ಟಿಲ್ಲ.ವಕ್ಫ್ ಅಂದರೆ ದಾನ. ಅದು ಕೂಡ ಸರ್ಕಾರದ ಒಂದು ಭಾಗ. ದಾನ ಕೊಟ್ಟ ಜಮೀನು ವಿಚಾರವಾಗಿ ಮೇಲ್ವಿಚಾರಣೆ ಮಾಡುತ್ತಾರೆ. ನಾವು ನಿಮ್ಮ ಭೂಮಿ ತೆಗೆದುಕೊಳ್ಳಲು ಬರಲ್ಲ.
ಶಿಗ್ಗಾವಿ ಉಪ ಚುನಾವಣೆ ಕಣ ರಂಗೇರುತಿದೆ. ಕಾಂಗ್ರೆಸ್ ಕಾರ್ಯಕರ್ತರು ಹಾಗೂ ನಾಯಕರಿಗೆ ಈ ಬಾರಿ ಗೆಲ್ಲುತ್ತೇವೆ ಅನ್ನುವ ವಿಶ್ವಾಸವಿದೆ. ಚುನಾವಣೆ ನಿಮಿತ್ತ ಇಂದು ಹುಬ್ಬಳ್ಳಿಯಲ್ಲಿ ಸಭೆ ಮಾಡಿದ್ದೇವೆ. ನಾವು ಈ ಬಾರಿ ಉಪಚುನಾವಣೆಯಲ್ಲಿ ಗೆಲ್ಲಬೇಕು ಎಂದರು.