Advertisement

ದಸರಾ ಗಜಪಡೆ: ಎರಡನೇ ತಂಡದ ಆಗಮನ

09:50 PM Sep 09, 2019 | Team Udayavani |

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂಸವಾರಿ ಮೆರವಣಿಗೆಗಾಗಿ ಕಾಡಿನಿಂದ ಎರಡನೇ ತಂಡದಲ್ಲಿ ಕರೆತರಲಾದ ಏಳು ಆನೆಗಳನ್ನು ಮೈಸೂರು ಅರಮನೆ ಆವರಣದಲ್ಲಿ ಬರಮಾಡಿಕೊಳ್ಳಲಾಯಿತು.

Advertisement

ಕೊಡಗಿನ ದುಬಾರೆ ಆನೆ ಶಿಬಿರದಿಂದ ವಿಕ್ರಮ, ಗೋಪಿ ಹಾಗೂ ಕಾವೇರಿ, ಕೆ.ಗುಡಿ ಆನೆ ಶಿಬಿರದಿಂದ ದುರ್ಗಾ ಪರಮೇಶ್ವರಿ, ರಾಮಾಪುರ ಆನೆ ಶಿಬಿರದಿಂದ ಜಯಪ್ರಕಾಶ ಮತ್ತು ಲಕ್ಷ್ಮೀ ಆನೆಗಳನ್ನು ಲಾರಿಯಲ್ಲಿ ಕರೆತಂದು, ಭಾನುವಾರವೇ ಮತ್ತಿಗೋಡು ಆನೆ ಶಿಬಿರದಿಂದ ಕರೆತರಲಾಗಿದ್ದ ಬಲರಾಮನನ್ನೂ ಸೋಮವಾರ ಸಂಜೆ ಅರಮನೆ ದ್ವಾರದಲ್ಲಿ ಸಾಲಾಗಿ ನಿಲ್ಲಿಸಿ ಏಳು ಆನೆಗಳಿಗೂ ಪೂಜೆ ಸಲ್ಲಿಸಿ ಸ್ವಾಗತಿಸಲಾಯಿತು.

ಶಾಸಕ ಎಸ್‌.ಎ. ರಾಮದಾಸ್‌ ಅವರು ಗಜಪಡೆಯ 2ನೇ ತಂಡಕ್ಕೆ ಪೂಜೆ ಸಲ್ಲಿಸಿ ಕಬ್ಬು, ಬೆಲ್ಲ ನೀಡಿ ಬರಮಾಡಿಕೊಂಡರು. ಮೈಸೂರು ಮಹಾ ನಗರ ಪಾಲಿಕೆ ಸದಸ್ಯ ಬಿ.ವಿ.ಮಂಜುನಾಥ್‌, ಡಿಸಿಎಫ್ ಅಲೆಕ್ಸಾಂಡರ್‌, ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್‌. ಸುಬ್ರಹ್ಮಣ್ಯ ಮೊದಲಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

ತಾಲೀಮು: ಅಂಬಾರಿ ಆನೆ ಅರ್ಜುನ ನೇತೃತ್ವದಲ್ಲಿ ಈಗಾಗಲೇ ಆಗಮಿಸಿರುವ ಮೊದಲ ತಂಡದ ಆರು ಆನೆಗಳ ಜೊತೆಗೆ ಬಲರಾಮ ಕೂಡ ಸೋಮವಾರ ತಾಲೀಮಿನಲ್ಲಿ ಪಾಲ್ಗೊಂಡಿದ್ದು, ಮಂಗಳವಾರದಿಂದ ದಸರಾ ಪೂರ್ಣ ಗಜಪಡೆಯ ತಾಲೀಮು ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next