Advertisement

ಅಂಬಾರಿ ಹೊರಲಿರುವ ಅರ್ಜುನನ ತೂಕ 5250 ಕೆ.ಜಿ.

07:50 AM Aug 19, 2017 | Team Udayavani |

ಮೈಸೂರು: ಈ ಬಾರಿ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂ ಸವಾರಿ ಮೆರವಣಿಗೆಯಲ್ಲಿ 750 ಕೆ.ಜಿ. ತೂಕದ ಚಿನ್ನದ ಅಂಬಾರಿ ಹೊತ್ತು ಸಾಗಲಿರುವ ಅರ್ಜುನ ತೂಕದಲ್ಲೂ ಇತರೆ ಆನೆಗಳನ್ನು ಮೀರಿಸಿದ್ದಾನೆ.

Advertisement

ಶುಕ್ರವಾರ ಬೆಳಗ್ಗೆ ನಗರದ ಧನ್ವಂತರಿ ರಸ್ತೆಯಲ್ಲಿನ ಸಾಯಿರಾಮ್‌ ಆ್ಯಂಡ್‌ ಕಂ. ಎಲೆಕ್ಟ್ರಾನಿಕ್‌ ವೇ ಬ್ರಿಡ್ಜ್ ಕೇಂದ್ರದಲ್ಲಿ ಎಲ್ಲಾ ಎಂಟು ಆನೆಗಳನ್ನು ತೂಕ ಮಾಡಿಸಲಾಯಿತು.

ಗಜಪಡೆಯ ಕ್ಯಾಪ್ಟನ್‌ ಅರ್ಜುನ ಬರೋಬ್ಬರಿ 5,250 ಕೆ.ಜಿ. ತೂಗುತ್ತಾನೆ. ಕಳೆದ ವರ್ಷ ಮೈಸೂರಿನಿಂದ ಕಾಡಿಗೆ ಕಳುಹಿಸುವಾಗ 5,870 ಕೆ.ಜಿ. ತೂಗುತ್ತಿದ್ದ. ದಸರಾ ಗಜಪಡೆಯ ಅತ್ಯಂತ ಬಲಶಾಲಿ ಆನೆ ಬಲರಾಮ 4,990 ಕೆ.ಜಿ., ಅಭಿಮನ್ಯು 4,850, ವಿಜಯ 2,770, ಗಜೇಂದ್ರ 4,600 ಕೆ.ಜಿ., ಕಾವೇರಿ 2,820, ವರಲಕ್ಷ್ಮೀ 2,830 ಹಾಗೂ ಭೀಮ 3,410 ಕೆ.ಜಿ. ತೂಕ ಹೊಂದಿವೆ.

Advertisement

Udayavani is now on Telegram. Click here to join our channel and stay updated with the latest news.

Next