Advertisement
ಬಸ್ಸು ಢಿಕ್ಕಿಯಾಗಿ ಪ್ರಾಣ ಕಳೆದುಕೊಂಡ ಆನೆ ರೌಡಿ ರಂಗ ಸತ್ತು ಬಿದ್ದಾಗ, ಅವನನ್ನು ಮೇಲಕ್ಕೆತ್ತಲು ಬಂದ ಗೆಳೆಯನಾದ ಮತ್ತೂಂದು ಆನೆ ಸುತ್ತ ನೆರೆದವರಲ್ಲಿ ದುಃಖದಿಂದ ಹೇಳಿದ ಮಾತಿನಂತಿದೆ ಇದು. ಅವನ ಮಾತಿ ನಲ್ಲೇ ಈ ವರದಿ ಓದಿ…“”ಹೌದು, ಅವನ ಬದುಕಿನಲ್ಲಿ ಇದ್ದ ವರ್ಣರಂಜಿತ ಅಧ್ಯಾಯವೇ ಮುಗಿದಿದೆ. ಅವನು ಜೀವ ನ ದು ದ್ದಕ್ಕೂ ರೌಡಿ ರಂಗ ಎಂದೇ ಹೇಳಿ ಸಿ ಕೊಂಡು ಆನೆ ನಡೆ ದದ್ದೇ ಹಾದಿ ಎಂಬಂತೆ ಬದು ಕಿ ದವ. ಒಂದು ಅವಕಾಶವಿದ್ದಿದ್ದರೆ ವಿಶ್ವವಿಖ್ಯಾತ ಮೈಸೂರು ದಸರಾದ ಜಂಬೂ ಸವಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ ದುರದೃಷ್ಟ ಹೀಗೆ ಬಂದು ಅಪ್ಪಳಿಸುತ್ತದೆ ಎಂದುಕೊಂಡಿರಲಿಲ್ಲ.”
“”ಆತ (ರೌಡಿ ರಂಗ) ಹೇಗೋ ಬನ್ನೇರುಘಟ್ಟ ವ್ಯಾಪ್ತಿಯಲ್ಲಿ ಇದ್ದ. ಸ್ವಲ್ಪ ಪುಂಡು ಅಷ್ಟೇ. ಹಾಗಾಗಿ ಸುತ್ತಲೆಲ್ಲ ಒಂದಿಷ್ಟು ಗದ್ದಲ ಮಾಡಿ ಇಬ್ಬರ ಪ್ರಾಣಗಳನ್ನು ಬಲಿ ತೆಗೆದುಕೊಂಡದ್ದೂ ನಿಜ. ಮನುಷ್ಯರೂ ಅದಕ್ಕೆ ರೌಡಿ ರಂಗ ಎಂದು ಹೆಸರಿಟ್ಟಿದ್ದರು. ಬಳಿಕ ಅವನಿಗೆ ಬನ್ನೇರುಘಟ್ಟ ವ್ಯಾಪ್ತಿಯಲ್ಲಿ ಸಂಯಮದ ಪಾಠ ಕಲಿಸಿ ಮೂರು ವರ್ಷದ ಹಿಂದೆ ತಿತಿಮತಿ ವ್ಯಾಪ್ತಿಯ ಮತ್ತಿಗೋಡು ಆನೆ ಶಿಬಿರದಲ್ಲಿ ಕರೆದು ತರಲಾಯಿತು. ಸುಮಾರು ಎಂಟು ತಿಂಗಳು ಕ್ರಾಲ್‌ನಲ್ಲಿ ಬಂದಿಯಾಗಿ ತರಬೇತಿ ಪಡೆದ. ಕೊನೆಗೆ ರಂಗ ಸಂಪೂರ್ಣವಾಗಿ ತನ್ನ ಸ್ವಭಾವದಲ್ಲಿ ತಿದ್ದುಪಡಿ ಮಾಡಿಕೊಂಡಿದ್ದ. ಮಾವುತ, ಕಾವಾಡಿಗಳ ಹಾಗೂ ಅರಣ್ಯಾಧಿಕಾರಿಗಳ ಪ್ರಿಯನಾಗಿದ್ದ” ಎನ್ನುತ್ತಾನೆ ಅವನ ಗೆಳೆಯ.
Related Articles
Advertisement
ವನ್ಯಜೀವಿಗಳ ಪ್ರದೇಶ, ಅದರಲ್ಲೂ ಆನೆಗಳ ಕಾರಿಡಾರ್ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ವಾಹನಗಳ ಸಂಚಾರ ಇಂಥ ದುರ್ಘಟನೆಳಿಗೆ ಕಾರಣವಾಗುತ್ತಿದೆ. ಖಾಸಗಿ ಬಸ್‌ಗಳ ಮಿತಿ ಮೀರಿದ ವೇಗವೂ ವನ್ಯಜೀವಿಗಳನ್ನು ಬಲಿ ತೆಗೆದುಕೊಳ್ಳುತ್ತಿದೆ ಎಂಬುದು ಸ್ಥಳೀಯರ ಅಭಿಪ್ರಾಯ.
ಬಸ್ಸು ಡಿಕ್ಕಿ ಹೊಡೆದು ಆನೆ ರಂಗ ಸಾವುಗೋಣಿಕೊಪ್ಪ/ಮಡಿಕೇರಿ: ಖಾಸಗಿ ಬಸ್ಸೊಂದು ಢಿಕ್ಕಿಯಾದ ಪರಿಣಾಮ ಮೈಸೂರು ದಸರಾದಲ್ಲಿ ಭಾಗಿಯಾಗಬೇಕಿದ್ದ 45 ವರ್ಷ ಪ್ರಾಯದ ರಂಗ ಎಂಬ ಸಾಕಾನೆ ನಾಗರಹೊಳೆ ಅಭಯಾರಣ್ಯದ ಮತ್ತಿಗೋಡು ಆನೆಕ್ಯಾಂಪ್ ಬಳಿ ಸಾವಿಗೀಡಾಗಿದೆ.
ಎಂದಿನಂತೆ ರವಿವಾರ ರಾತ್ರಿ ಅದನ್ನು ಕ್ಯಾಂಪ್‌ನಿಂದ ತಿರುಗಾಡಲು ಬಿಡಲಾಗಿತ್ತು. ಸೋಮವಾರ ಬೆಳಗಿನ ಜಾವ 2ರ ಸುಮಾರಿಗೆ ಕಲ್ಪಕ ಹೆಸರಿನ ಖಾಸಗಿ ಬಸ್ ಮುಖ್ಯ ರಸ್ತೆಯ ಮತ್ತೂಂದು ಬದಿಯ ಅರಣ್ಯಕ್ಕೆ ಹೋಗುತ್ತಿದ್ದ ರಂಗನಿಗೆ ಢಿಕ್ಕಿ ಹೊಡೆಯಿತು. ಪರಿಣಾಮವಾಗಿ 45 ವರ್ಷ ವಯಸ್ಸಿನ ರಂಗನ ಸೊಂಟಕ್ಕೆ ಭಾರೀ ಪೆಟ್ಟಾಯಿತು. ಆನೆಕ್ಯಾಂಪ್‌ನ ವೈದ್ಯ ಡಾ| ಮುಜೀಬ್ ಮತ್ತು ಮಾವುತರು ಇತರ ಆನೆಗಳ ಸಹಕಾರದಿಂದ ಶುಶ್ರೂಷೆ ನಡೆಸಿದರೂ ಪ್ರಯೋಜನವಾಗಲಿಲ್ಲ. ಕೆಎ.01 ಎಇ757 ನೋಂದಣಿಯ ಖಾಸಗಿ ಬಸ್ ಕೇರಳದ ಕಣ್ಣಾನೂರಿನಿಂದ ಬೆಂಗಳೂರಿಗೆ ತೆರಳುತ್ತಿತ್ತು. ಬಸ್ ಚಾಲಕನ ವಿರುದ್ಧ ವನ್ಯಜೀವಿ ಕಾಯ್ದೆಯಡಿ ದೂರು ದಾಖಲಾಗಿದೆ. ಮೃತಪಟ್ಟ ರಂಗನನ್ನು ನೋಡಲು ಸ್ಥಳೀಯ ಗ್ರಾಮದ ನಿವಾಸಿಗಳು ತಂಡೋಪ ತಂಡವಾಗಿ ಸೇರಿ ಕಂಬನಿ ಮಿಡಿದರು. ಕ್ರಾಲ್‌ನಲ್ಲಿ ಬಂಧಿಯಾಗಿದ್ದ ಜೆಂಟಲ್ ರಂಗ
ಆನೇಕಲ್: ವರ್ಷದ ಹಿಂದೆ ಬನ್ನೇರುಘಟ್ಟ ಆನೆ ಶಿಬಿರದಲ್ಲಿನ ಕ್ರಾಲ್‌ನಲ್ಲಿ ಬಂಧಿಯಾಗಿದ್ದ ಎರಡು ಒಂಟಿ ಸಲಗಗಳನ್ನು ಪಳಗಿಸಿ ನಾಗರಹೊಳೆಯ ಮತ್ತಿಗೂಡು ಆನೆ ಶಿಬಿರಕ್ಕೆ ಸ್ಥಳಾಂತರಿಸಲಾಗಿತ್ತು. ಅದರಲ್ಲಿನ ಒಂದು ಸಲಗ ಜೆಂಟಲ್ ರಂಗ. ಬನ್ನೇರುಘಟ್ಟ ಸುತ್ತಮುತ್ತಲ ಹಳ್ಳಿಗಳು ಸೇರಿ ಬೆಂಗಳೂರು ನಗರ, ಮಾಗಡಿ, ನೆಲಮಂಗಲ, ತುಮಕೂರು ಸುತ್ತಮುತ್ತಲ ಹಳ್ಳಿಗಳಲ್ಲಿ ಖ್ಯಾತಿ, ಕುಖ್ಯಾತಿ ಈ ಆನೆಯದ್ದು. ಜೆಂಟಲ್ ರಂಗ ಮೃತ ಪಟ್ಟ ಸುದ್ದಿ ತಿಳಿದ ಬನ್ನೇರುಘಟ್ಟ ಸುತ್ತ ಮುತ್ತಲಿನ ಅಭಿಮಾನಿಗಳು ಕಣ್ಣಲ್ಲಿ ಕಂಬನಿ ಮಿಡಿದಿದೆ. ಬನ್ನೇರುಘಟ್ಟ, ಸಂಪಿಗೆ ಹಳ್ಳಿ, ಬೈರಪ್ಪನಹಳ್ಳಿಯ ಹಲವು ಯುವಕರ ಮನೆಗಳಲ್ಲಿ ಸೂತಕದ ಛಾಯೆ ಆವರಿಸಿತ್ತು. ಆನೇಕಲ್ ಪರಿಸರ ಮತ್ತು ವನ್ಯಜೀವಿ ಹಿತರಕ್ಷಣಾ ಸಮಿತಿ ತನ್ನ ಕಛೇರಿಯಲ್ಲಿ ಜೆಂಟಲ್ ರಂಗನ ಪೋಟೋ ಇಟ್ಟು, ಹೂ ಹಾಕಿ ಪೂಜೆ ಸಲ್ಲಿಸಿ ಭಾವ ಪೂರ್ವ ಶ್ರದ್ದಾಂಜಲಿ ಅರ್ಪಿಸಲಾಗಿದೆ.