Advertisement
ಮೈಸೂರು, ಮಂಗಳೂರು, ಮಡಿಕೇರಿ ದಸರಾ ಮಾದರಿಯಲ್ಲೇ ವೈಭವದಿಂದ ಆಚರಿಸಲಾಗುವುದು. ಅದಕ್ಕಾಗಿ 3 ಕೋಟಿ ರೂ. ವ್ಯಯಿಸ ಲಾಗುವುದು. ನವದುರ್ಗೆ ಯರ ಪ್ರತಿಷ್ಠೆ, ಪ್ರತೀದಿನ ಚಂಡಿಕಾ ಹೋಮ, ಅನ್ನಸಂತರ್ಪಣೆ, ಸಾಂಸ್ಕೃ ತಿಕ ಕಾರ್ಯ ಕ್ರಮ ನಡೆಯಲಿದೆ ಎಂದರು.
ಉಚ್ಚಿಲ – ಪಡುಬಿದ್ರಿ – ಹೆಜಮಾಡಿ ಟೋಲ್‌ಗೇಟ್ – ಪಡುಬಿದ್ರಿ – ಕೊಪ್ಪಲಂಗಡಿ ಕ್ರಾಸ್ ವರೆಗೆ (26 ಕಿ.ಮೀ.) ಶೋಭಾಯಾತ್ರೆ ನಡೆಯಲಿದೆ. ಇದರಲ್ಲಿ ಹುಲಿವೇಷ, ಭಜನ ತಂಡಗಳು ಸಹಿತ 65ಕ್ಕೂ ಹೆಚ್ಚಿನ ಟ್ಯಾಬ್ಲೋಗಳಿರ ಲಿವೆ. ಕೊಪ್ಪಲಂಗಡಿಯಿಂದ ಕಾಪು ಬೀಚ್ ವರೆಗಿನ 4 ಕಿ.ಮೀ. ನಡಿಗೆ ಬಳಿಕ ಕಾಶಿಯ ಗಂಗಾರತಿ ಮಾದರಿಯಲ್ಲೇ 10 ಬೃಹತ್ ಗಂಗಾರತಿ, ಮಹಾ ಮಂಗಳಾರತಿ ನಡೆಯಲಿದೆ. ದೋಣಿಗಳಲ್ಲಿ ಶಾರದಾ ಮಾತೆ, ನವದುರ್ಗೆಯರ ಪ್ರತಿಮೆಗಳನ್ನು ಒಯ್ದು ಸಮುದ್ರದಲ್ಲಿ ವಿಸರ್ಜಿಸ ಲಾಗುವುದು ಎಂದರು. ಸಾಂಸ್ಕೃತಿಕ ರಸದೌತಣ
ದಿನಂಪ್ರತಿ ಸಂಜೆ 6ರಿಂದ 8ರ ವರೆಗೆ ಮಂಗಳೂರು ಕದ್ರಿಯ ನೃತ್ಯ ಭಾರತಿ ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಅ. 5ರಂದು ಶೋಭಾಯಾತ್ರೆ ಸಾಗುವ ವೇಳೆ ಹೆಜಮಾಡಿ, ಪಡುಬಿದ್ರಿ, ಉಚ್ಚಿಲ, ಕೊಪ್ಪಲಂಗಡಿ, ಕಾಪು ಬೀಚ್ ಸಹಿತ ವಿವಿಧೆಡೆ ಸಂಗೀತ ರಸಮಂಜರಿ, ಸಹಿತ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇಸ್ಕಾನ್ ಮೂಲಕ ವಿಶೇಷ ಪ್ರಸಾದದ ವ್ಯವಸ್ಥೆಯನ್ನೂ ಮಾಡ ಲಾಗಿದೆ. ನವರಾತ್ರಿ ವೇಳೆ ಶ್ರೀ ಕ್ಷೇತ್ರಕ್ಕೆ 5 ಲಕ್ಷಕ್ಕೂ ಅಧಿಕ ಭಕ್ತರು ಸಂದರ್ಶಿಸಲಿದ್ದಾರೆ. ದಿನಂಪ್ರತಿ 20 ಸಾವಿರ ಭಕ್ತರಿಗೆ ಅನ್ನದಾಸೋಹ ನಡೆಯಲಿದೆ ಎಂದರು.
Related Articles
ದೇವಸ್ಥಾನದ ಪಕ್ಕದಲ್ಲಿ 1.70 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಗೊಂಡಿ ರುವ “ಶ್ರೀಮತಿ ಶಾಲಿನಿ, ಡಾ| ಜಿ. ಶಂಕರ್ ತೆರೆದ ಸಭಾಂಗಣ’ದ ಲೋಕಾರ್ಪಣೆ ಸೆ. 26ರಂದು ನಡೆಯಲಿದ್ದು, ಅಲ್ಲಿಯೇ ನವದುರ್ಗೆಯರು ಮತ್ತು ಶ್ರೀ ಶಾರದಾ ಮಾತೆಯ ವಿಗ್ರಹ ಪ್ರತಿಷ್ಠೆ ನಡೆಯ ಲಿದೆ ಎಂದು ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ ಹೇಳಿದರು.
Advertisement
ಶತ ವೀಣಾವಲ್ಲರಿ ಸೆ. 30ರ ಲಲಿತಾ ಪಂಚಮಿಯಂದು ಸಂಜೆ 4ರಿಂದ 5ರ ವರೆಗೆ ವಿ| ಪವನ್ ಬಿ. ಆಚಾರ್ ಬಳಗದವರಿಂದ 101 ವೀಣೆಗಳ ವಾದನ ಕಾರ್ಯಕ್ರಮ “ಶತ ವೀಣಾವಲ್ಲರಿ’ ನಡೆಯಲಿದೆ.
ಶೋಭಾಯಾತ್ರೆ ಸಾಗುವ ಮಾರ್ಗದ ಎಲ್ಲ ಅಂಗಡಿ, ಮಳಿಗೆ, ಮನೆಯವರು ವಿದ್ಯುತ್ ದೀಪಾಲಂಕಾರ ಮಾಡಿ ದಸರಾವನ್ನು ಯಶಸ್ವಿಗೊಳಿಸಲು ಸಹಕಾರ ನೀಡಬೇಕು ಎಂದು ಡಾ| ಶಂಕರ್ ವಿನಂತಿಸಿದರು. ಉಚ್ಚಿಲ ದೇವಸ್ಥಾನದ ಕ್ಷೇತ್ರಾಡಳಿತ ಮಂಡಳಿಯ ಅಧ್ಯಕ್ಷ ವಾಸುದೇವ ಸಾಲ್ಯಾನ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗುಂಡು ಬಿ. ಅಮೀನ್, ದ.ಕ. ಮೊಗವೀರ ಮಹಾಜನ ಸಂಘದ ಉಪಾಧ್ಯಕ್ಷ ಸುಭಾಶ್ಚಂದ್ರ ಕಾಂಚನ್, ಪ್ರಧಾನ ಕಾರ್ಯದರ್ಶಿ ಸುಧಾಕರ ಕುಂದರ್, ದ.ಕ. ಮಹಿಳಾ ಮೊಗವೀರ ಮಹಾಜನ ಸಂಘದ ಅಧ್ಯಕ್ಷೆ ಅಪ್ಪಿ ಸಾಲ್ಯಾನ್ ಪತ್ರಿಕಾಗೋಷ್ಠಿಯಲ್ಲಿದ್ದರು.