Advertisement

ಕೊರೊನಾ ದೂರವಾಗಿ ಜನಜೀವನ ಸುಗಮವಾಗಲಿ: ಪ್ರದೀಪ್‌ ಸಿ. ಶೆಟ್ಟಿ

12:15 PM Oct 16, 2021 | Team Udayavani |

ಬೊರಿವಲಿ: ಬೊರಿವಲಿ ಪಶ್ಚಿಮದ ವಜೀರ್‌ ನಾಕಾದ ಜೈರಾಜ್‌ ನಗರದ ಶ್ರೀ ಮಹಿಷಮರ್ದಿನಿ ದೇವಸ್ಥಾನ ಟ್ರಸ್ಟ್‌ ಸಂಚಾಲಕ್ವದ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ  ಶರನ್ನವರಾತ್ರಿ ಉತ್ಸವದ ಅಂಗವಾಗಿ ಸಾರ್ವಜನಿಕ ಚಂಡಿಕಾ ಹೋಮವು ಅ. 13ರಂದು ನಡೆಯಿತು.

Advertisement

ಶ್ರೀ ಮಹಿಷಮರ್ದಿನಿ ದೇವಸ್ಥಾನದ ಸ್ಥಾಪಕ ವಂಶಸ್ಥ ಮೊಕ್ತೇಸರ ಜಯರಾಜ ಶ್ರೀಧರ ಶೆಟ್ಟಿ ಕಲ್ಲಮುಂಡ್ಕೂರು ಹರಿಯಾಳಗುತ್ತು, ಆಡಳಿತ ಮೊಕ್ತೇಸರ ಕಣಂಜಾರು ಕೊಳಕೆಬೈಲು ಪ್ರದೀಪ್‌ ಸಿ. ಶೆಟ್ಟಿ, ಶಾಲಿನಿ ಪ್ರದೀಪ್‌ ಶೆಟ್ಟಿ, ಮೊಕ್ತೇಸರರಾದ ಜಯಪಾಲಿ ಅಶೋಕ್‌ ಶೆಟ್ಟಿ, ಡಾ| ಸಪ್ನಾ ಶೆಟ್ಟಿ ಅವರ ಮುಂದಾಳತ್ವದಲ್ಲಿ ಧಾರ್ಮಿಕ ಕಾರ್ಯಕ್ರಮವಾಗಿ ಮಂದಿರದ ಅವರಣದಲ್ಲಿ  ಬೆಳಗ್ಗೆ ಪ್ರಾರ್ಥನೆ, ಪುಣ್ಯಾಹ ವಾಚನ, ಸಂಕಲ್ಪ, ಕಲ್ಪೋಕ್ತ ಪೂಜೆ ಪೂರ್ಣಾಹುತಿ, ಸುಹಾಸಿನಿ ಪೂಜೆ ನೆರವೇರಿತು.

ಭಕ್ತರು ಮಂಗಲ ದ್ರವ್ಯ, ಮಂಗಲ ವಸ್ತ್ರ, ಫಲಪುಷ್ಪ ಸುವಸ್ತುಗಳನ್ನು ಹೋಮ ಯಜ್ಞಕುಂಡಕ್ಕೆ ಸಮರ್ಪಿಸಿದರು. ಮಹಾ ಪೂಜೆ ಬಳಿಕ ಕೊರೊನಾ ಸಾಮಾಜಿಕ ಅಂತರ ಹಾಗೂ ಸುರಕ್ಷತೆಯಲ್ಲಿ ಅನ್ನ ಸಂತರ್ಪಣೆ ಜರಗಿತು. ಬಾಲಕೃಷ್ಣ ರೈ, ಜಗದೀಶ್‌ ಶೆಟ್ಟಿ, ಅನುಪ್‌ ಶೆಟ್ಟಿ, ಡಾ| ರಶ್ಮೀ ಶೆಟ್ಟಿ, ಪೇಟೆಮನೆ ಪ್ರಕಾಶ್‌ ಶೆಟ್ಟಿ  ಮೊದಲಾದವರು ಉಪಸ್ಥಿತರಿದ್ದರು.

ಆಡಳಿತ ಮೊಕ್ತೇಸರ ಕಣಂಜಾರು ಕೊಳಕೆಬೈಲು ಪ್ರದೀಪ್‌ ಸಿ. ಶೆಟ್ಟಿ  ಭಕ್ತರನ್ನು ಸ್ವಾಗತಿಸಿ, ಕೊರೊನೊದಿಂದಾಗಿ ಸಾಂಕೇತಿ ಕವಾಗಿ ದಸರಾ ಸೇವೆ ಮಾಡಲಾಗಿದೆ. ಸಿಟ್ಟು, ದುರಾಸೆ, ವ್ಯಾಮೋಹ. ದ್ವೇಷ ಮೊದಲಾದ ಅಸುರೀ ಶಕ್ತಿಗಳನ್ನು ಮೆಟ್ಟಿ ದೈವೀಶಕ್ತಿಯನ್ನಾಗಿ ಪರಿವತಿಸುವ ಪರ್ವ ಕಾಲವೇ ದಸರಾ ಹಬ್ಬ. ದುಷ್ಟ ದಾನವರನ್ನು ಸಂಹರಿಸಿ ಮನುಕುಲವನ್ನು ಸಂರಕ್ಷಿಸಿದ ಅದಿಮಾಯೆಯನ್ನು ಪೂಜಿಸಿ ಮಾತೆಯ ಕೃಪೆಗೆ ಪಾತ್ರರಾಗೋಣ. ಭಕ್ತಿ, ಧರ್ಮ, ವೃತಾಚರಣೆ, ಸಂಸ್ಕೃತಿಯು ಸಂವರ್ಧಕ ದಿನಗಳಾಗಿವೆ. ಅದನ್ನು ಯಾಥಾ ಸ್ಥಿತಿಯಲ್ಲಿ  ಕಾಯ್ದುಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿವೆ. ಕೊರೊನಾ ಸಾಂಕ್ರಾಮಿಕವು ದೂರವಾಗಿ ಜನಜೀವನ ಸುಗಮವಾಗಿ ಸಾಗಲಿ ಎಂದು ಪ್ರಾರ್ಥಿಸಿದರು.

ದಸರಾ ಪ್ರಯುಕ್ತ ಪ್ರತೀನಿತ್ಯ ನವದುರ್ಗೆಯರ ಆರಾಧನೆ, ಪಂಚಾಮೃತ ಅಭಿಷೇಕ, ತನು ತಂಬಿಲ, ದೇವತಾ ಪ್ರಾರ್ಥನೆ, ಗಣಪತಿಹೋಮ, ನವಕ ಕಲಶಾಭಿಷೇಕ, ಪ್ರಧಾನ ಹೋಮ, ರಂಗಪೂಜೆ, ಭಜನೆ, ದುರ್ಗಾ ನಮಸ್ಕಾರ ಪೂಜೆ ಹಾಗೂ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಸದಸ್ಯರಿಂದ ಸಂಜೆ ಭಜನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಬ್ರಹ್ಮಶ್ರೀ ಕೊಯ್ಯೂರು ನಂದಕು ಮಾರ ತಂತ್ರಿ, ವಿದ್ವಾನ್‌ ದರೆಗುಡ್ಡೆ ಶ್ರೀನಿವಾಸ ಭಟ್‌, ಬೆಳ್ಮಣ್‌ ವೆಂಕಟ್ರಮಣ ತಂತ್ರಿ ಸಹಕರಿಸಿದರು. ಶ್ರೀಕ್ಷೇತ್ರದ ಪರಿವಾರ ದೇವರಾದ ಶ್ರೀಗಣಪತಿ, ಶ್ರೀ ಆಂಜನೇಯ, ನವಗ್ರಹ, ಶ್ರೀನಾಗ ದೇವರು ಹಾಗೂ ಕೊಡಮಣಿತ್ತಾಯ ದೈವಕ್ಕೆ ಪೂಜೆ ಸಲ್ಲಿಸಲಾಯಿತು.

Advertisement

ಭಕ್ತರ ಸಂಗಮ ತಾಣ :

ಭಕ್ತರ ಸಂಗಮ ತಾಣವಾಗಿರುವ ಬೊರಿವಲಿ ಪಶ್ಚಿಮದ ವಜೀರ್‌ನಾಕಾ , ಜೈರಾಜ್‌ ನಗರದ ಶ್ರೀ ಮಹಿಷಮರ್ದಿನಿ ದೇವಸ್ಥಾನವು ತುಳುನಾಡಿನ ಸಾಂಸ್ಕೃತಿಕ ವೈಭವ ಮತ್ತು ಆಧ್ಯಾತ್ಮಿಕ ಚಿಂತನೆಯ ಪವಿತ್ರ ಸ್ಥಳವಾಗಿದೆ. ಶಿಲಾಮಯ ಗರ್ಭಗುಡಿ, ಸ್ವರ್ಣ ಲೇಪಿತ ತೀರ್ಥ ಮಂಟಪ, ಆಕರ್ಷಕ ಕೆತ್ತನೆಯ ಶಿಲಾಕೃತಿ ಗಳು ಮನಸ್ಸಿನ ಪ್ರಪುಲ್ಲತೆಯನ್ನು ದ್ವಿಗುಣ

ಗೊಳಿಸುತ್ತದೆ. ನಾಡು ನುಡಿಯ ವಿವಿಧ ಕಲಾ ಪ್ರಕಾರಗಳಿಗೆ ಇಲ್ಲಿ ವೇದಿಕೆ ನೀಡಲಾಗಿ ದೆ. ಮದುವೆ, ಉಪನಯನ, ವಿವಿಧ ಪೂಜೆ ಪುನಸ್ಕಾರಗಳು, ಅಧ್ಯಾತ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರವಾಗಿ ಜರಗುತ್ತಿವೆ.

-ಚಿತ್ರ-ವರದಿ : ರಮೇಶ ಅಮೀನ್‌

Advertisement

Udayavani is now on Telegram. Click here to join our channel and stay updated with the latest news.

Next