Advertisement
ಅಬುಧಾಬಿಯಲ್ಲಿ ಇಂಗ್ಲೆಂಡ್ ವಿರುದ್ಧದ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಮಿಚೆಲ್ ಅವರು ಸಿಂಗಲ್ ತೆಗೆದುಕೊಳ್ಳಲು ನಿರಾಕರಿಸಿದ್ದಕ್ಕಾಗಿ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. ಇದೀಗ ಡೇನಿಯಲ್ ವೆಟ್ಟೋರಿ, ಬ್ರೆಂಡನ್ ಮೆಕಲಮ್ ಮತ್ತು ಕೇನ್ ವಿಲಿಯಮ್ಸನ್ ಬಳಿಕ ಸ್ಪಿರಿಟ್ ಆಫ್ ದಿ ಇಯರ್ ಪ್ರಶಸ್ತಿ ಗೆದ್ದು ನಾಲ್ಕನೇ ನ್ಯೂಜಿಲೆಂಡ್ ಆಟಗಾರ ಎಂಬ ಹೆಗ್ಗಳಿಕೆಗೆ ಮಿಚೆಲ್ ಪಾತ್ರರಾಗಿದ್ದಾರೆ.
Related Articles
Advertisement
ಟಿ20 ವಿಶ್ವಕಪ್ ನ ಮೊದಲ ಸೆಮಿಫೈನಲ್ ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಮೊಯಿನ್ ಅಲಿ ಅವರ ಅರ್ಧಶತಕದ ನೆರವಿನಿಂದ 4 ವಿಕೆಟ್ ನಷ್ಟಕ್ಕೆ 166 ರನ್ ಗಳಿಸಿತ್ತು. ಜೇಮ್ಸ್ ನೀಶಮ್ ಜೊತೆ ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದ ಮಿಚೆಲ್ ಪಾರ್ಟರ್ ಶಿಪ್ ನಡೆಸಿ ನ್ಯೂಜಿಲೆಂಡ್ ರನ್ ಚೇಸ್ ಹಾದಿಯಲ್ಲಿತ್ತು. ಆದಿಲ್ ರಶೀದ್ ಎಸೆದ 18ನೇ ಓವರ್‌ನ ಮೊದಲ ಎಸೆತದಲ್ಲಿ ನೀಶಮ್ ಎಸೆದ ಚೆಂಡನ್ನು ರಶೀದ್ ಹಿಡಿಯಲು ಬಂದಾಗ ಮಿಚೆಲ್ ಅಡ್ಡವಾಗಿದ್ದರು. ಈ ವೇಳೆ ಅವಕಾಶವಿದ್ದರೂ ಮಿಚೆಲ್ ರನ್ ಓಡಲಿಲ್ಲ.